Custom Heading

ಲಾರಿ ಟಿಕ್ಕಿ ಹೊಡೆದು ವೃದ್ದನ ಸಾವು
ಕೋಲಾರ,18. ಸೆಪ್ಟೆಂಬರ್ (ಹಿ.ಸ) : ಬಂಗಾರಪೇಟೆ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಕೋಸು ಸಾಗಾಣಿಕೆ ಮಾಡುತ್ತ
ಲಾರಿ ಟಿಕ್ಕಿ ಹೊಡೆದು ವೃದ್ದನ ಸಾವು


ಕೋಲಾರ,18. ಸೆಪ್ಟೆಂಬರ್ (ಹಿ.ಸ) : ಬಂಗಾರಪೇಟೆ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಕೋಸು ಸಾಗಾಣಿಕೆ ಮಾಡುತ್ತಿದ್ದ ಲಾರಿ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತನ ಹೆಸರು ವಿಳಾಸ ತಿಳಿದು ಬಂದಿಲ್ಲ. ಮೃತನಿಗೆ ಸುಮಾರು ೬೦ ವರ್ಷ ವಯಸ್ಸಾಗಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ನೆಲಕ್ಕುರುಳಿದ ವೃದ್ಧ ಹಿಂಬದಿ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿ ಚಾಲಕ ಪರಾರಿಯಾಗಿದ್ದು ಪಟ್ಟಣದ ಪೊಲೀಸರು ಮೃತ ದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಅಪಘಾತ ಪ್ರಕರಣ ದಾಖಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


 rajesh pande