Custom Heading

ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ಕೋಲಾರ ಶಾಸಕ ಶ್ರೀನಿವಾಸಗೌಡ ವಾಗ್ದಾಳಿ
ಕೋಲಾರ,18. ಸೆಪ್ಟೆಂಬರ್ (ಹಿ.ಸ) : ಜೆಡಿಎಸ್ ಪಕ್ಷದಿಂದ ಕೋಲಾರ ಶಾಸಕ ಶ್ರೀನಿವಾಸಗೌಡರನ್ನು ಉಚ್ಚಾಟನೆ ಮಾಡಿರುವುದನ್ನು ಶ
ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ಕೋಲಾರ ಶಾಸಕ ಶ್ರೀನಿವಾಸಗೌಡ ವಾಗ್ದಾಳಿ


ಕೋಲಾರ,18. ಸೆಪ್ಟೆಂಬರ್ (ಹಿ.ಸ) : ಜೆಡಿಎಸ್ ಪಕ್ಷದಿಂದ ಕೋಲಾರ ಶಾಸಕ ಶ್ರೀನಿವಾಸಗೌಡರನ್ನು ಉಚ್ಚಾಟನೆ ಮಾಡಿರುವುದನ್ನು ಶನಿವಾರ ಸ್ವತಃ ಶ್ರೀನಿವಾಸಗೌಡರು ಖಚಿತಪಡಿಸಿದರು. ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀನಿವಾಸಗೌಡರು, ನನ್ನಿಂದ ತೊಂದರೆಯಾಗಿದ್ದರೆ ಕ್ಷಮಿಸಲಿ ಎಂದು ವ್ಯಂಗ್ಯ ಮಾಡಿದರು. ಹೋಳೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ತಮ್ಮ ಮಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಇಫ್ಕೋ ಟೊಕಿಯೋ ಕಂಪನಿಯಿಂದ ವಿದ್ಯಾರ್ಥಿ ವೇತನ ಮತ್ತು ವೈದ್ಯಕೀಯ ವೆಚ್ಚದ ಚೆಕ್ಕುಗಳನ್ನು ಫಲಾನುಭವಿಗಳಿಗೆ ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜೆಡಿಎಸ್ ವರಿಷ್ಠರ ನಡೆಯನ್ನು ತೀವ್ರವಾಗಿ ಟೀಕೆ ಮಾಡಿದರು.

ಕೆ.ಸಿ.ವ್ಯಾಲಿ ನೀರು ತರಲು ಕಾರಣರಾದ ರಮೇಶ್ ಕುಮಾರ್ ಮತ್ತು ಕೃಷ್ಣಬೈರೇಗೌಡರನ್ನು ಶ್ಲಾಘಿಸಿದ್ದೇ ತಮ್ಮ ಉಚ್ಚಾಟನೆಗೆ ಕಾರಣವಾಗಿದೆ.. ರೈತರ ಹಿತದೃಷ್ಠಿಯಿಂದ ಶಾಸಕರಾದ ರಮೇಶ್ ಕುಮಾರ್ ಮತ್ತು ಕೃಷ್ಣಬೈರೇಗೌಡರು ಕೆ.ಸಿ.ವ್ಯಾಲಿ ನೀರು ತಂದಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಚ್ಚೇನೀರು ಎಂದು ಮೂದಲಿಸಿದ್ದಾರೆ. ಅವರ ಹೇಳಿಕೆ ಸರಿಯಲ್ಲ ಎಂದು ಟೀಕೆ ಮಾಡಿದ್ದೆ. ಇದರಿಂದ ತೀವ್ರ ಆಕ್ರೋಶಗೊಂಡ ಮಾಜಿ ಪ್ರಧಾನಿ ದೇವೇಗೌಡರು ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.

ಅವರಿಗೆ ನನ್ನಿಂದ ತೊಂದರೆಯಾಗಿದ್ದರೆ ಕ್ಷಮಿಸಲಿ. ಉಚ್ಚಾಟನೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ವ್ಯಂಗ್ಯ ಮಾಡಿದರು. ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಮತ್ತು ಅವರ ಕುಟುಂಬ ಸದಸ್ಯರು ಅಧಿಕಾರ ಅನುಭವಿಸುತ್ತಾ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣವೇ ಅವರ ವ್ಯವಸಾಯವಾಗಿದೆ ಎಂದು ಟೀಕಿಸಿದರು.

ಮೂಲತಃ ನಾನು ರೈತ ಕುಟುಂಬದಿAದ ಬಂದವನಾಗಿದ್ದೇನೆ. ನಾನು ಹೊಲದಲ್ಲಿ ಉಳಿಮೆ ಮಾಡಿದ್ದೇನೆ. ನಾನು ಸಹ ರೈತ ಕುಟುಂಬದವನು ಎಂದು ಕುಮಾರಸ್ವಾಮಿ ಮತ್ತು ದೇವೇಗೌಡರನ್ನು ಟೀಕಿಸಿದರು. ಈಗಾಗಲೇ ಡಿ.ಕೆ.ಶಿವಕುಮಾರ್ ರವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಚರ್ಚೆ ಮಾಡಿದ್ದೇನೆ. ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಹೋಳೂರು ಕ್ಷೇತ್ರದಿಂದ ನಮ್ಮ ಮಗ ಮಂಜುನಾಥ್ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೋಳೂರು ಮತ್ತು ಸುಗಟೂರು ಹೋಬಳಿಗಳಲ್ಲಿ ಕಳದೆ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಗಿದ್ದ ರಮೇಶ್ ಕುಮಾರ್ ರವರನ್ನು ಬೆಂಬಲಿಸಲಾಗಿತ್ತು ಎಂಬ ಆರೋಪವನ್ನುಶ್ರೀನಿವಾಸಗೌಡರು ಅಲ್ಲೆಗೆಳೆದರು. ಜೆಡಿಎಸ್ ತೊರೆಯಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಸಂಚು ನಡೆಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸಗೌಡರು ಅದೆಲ್ಲಾ ಉಹಾಪೋಹ ಎಂದರು.

ತಾಲ್ಲೂಕು ಬೋರ್ಡ್ ಜಿಲ್ಲಾ ಪಂಚಾಯಿತಿಯಿಂದ ರಾಜಕಾರಣ ಆರಂಭಿಸಿದ ನಾನು ಆರು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ. ಒಂದೊಂದು ಬಾರಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿದ್ದೆ. ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೆ.ಮೂಲತಃ ನಾನೂ ಸಹ ಕಾಂಗ್ರೆಸ್ ಪಕ್ಷದ ಮುಖಂಡನಾಗಿದ್ದೇನೆ. ಆದರೆ ಪಿತೂರಿಯಿಂದ ತಮ್ಮನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಯಿತು ಎಂದು ಪರೋಕ್ಷವಾಗಿ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪನವರನ್ನು ಟೀಕಿಸಿದರು.

ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ತಮ್ಮ ಬೆಂಬಲಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಯಾರಿಂದಲೂ ವಿರೋಧವಿಲ್ಲ. ಕಾಂಗ್ರೆಸ್ ಪಕ್ಷ ಸೇರ್ಪಡೆಯ ಬಗ್ಗೆ ತಿಳಿದ ಬೆಂಬಲಿಗರು ದೂರವಾಣಿ ಕರೆ ಮಾಡಿ ಸ್ವಾಗತಿಸಿದರು ಎಂದು ಶ್ರೀನಿವಾಸಗೌಡ ತಿಳಿಸಿದರು.

ಚಿತ್ರ : ಕೋಲಾರ ಶಾಸಕ ಹಾಗೂ ಇಫ್ಕೋ ಟೋಕಿಯೋ ರಾಷ್ಟ್ರೀಯ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಕೋಲಾರದಲ್ಲಿ ವಿದ್ಯಾರ್ಥಿ ವೇತನ ಮತ್ತು ಆರೋಗ್ಯ ಚಿಕಿತ್ಸಾ ವೆಚ್ಚದ ಚೆಕ್ಕುಗಳನ್ನು ಫಲಾನುಭವಿಗಳಿಗೆ ವಿತರಿಸಿದರು.


 rajesh pande