ಸ್ವೀಡ್ ನ್ಯೂಸ್ ವರದಿಗಾರನ ಸಾವಿನ ಸುತ್ತ ಅನುಮಾನದ ಹುತ್ತ
ಕೋಲಾರ, 18. ಸೆಪ್ಟೆಂಬರ್ (ಹಿ.ಸ) : ಕಳೆದ ೨ ದಿನಗಳ ಹಿಂದೆ ಬೆಂಗಳೂರು ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಲ್ಲಿ
ಸ್ವೀಡ್ ನ್ಯೂಸ್ ವರದಿಗಾರನ ಸಾವಿನ ಸುತ್ತ ಅನುಮಾನದ ಹುತ್ತ


ಕೋಲಾರ, 18. ಸೆಪ್ಟೆಂಬರ್ (ಹಿ.ಸ) : ಕಳೆದ ೨ ದಿನಗಳ ಹಿಂದೆ ಬೆಂಗಳೂರು ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಲ್ಲಿ ಮೃತಪಟ್ಟ ಸ್ಪೀಡ್ ನ್ಯೂಸ್ ಜಿಲ್ಲಾ ವರದಿಗಾರ ಹನುಮಂತ್ ಯಾದವ್ ಸಾವಿನ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗಿವೆ. ಹನುಮಂತ್ ಸಾವಿನ ಹಿಂದೆ ಮೀಟರ್ ಬಡ್ಡಿ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಕೋಲಾರದಲ್ಲಿ ಸ್ಪೀಡ್ ನ್ಯೂಸ್ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹನುಮಂತ್ ಯಾದವ್ ಬೆಂಗಳೂರು ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ದಿನಗಳ ಹಿಂದೆ ರಾತ್ರಿ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ಹನುಮಂತ್ ಪ್ರಯಾಣಿಸುತ್ತಿದ್ದ ಬೈಕ್ ಗೆ ಯಾವುದೇ ಹಾನಿಯಾಗಿಲ್ಲ. ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.

ಮೂಲತಃ ಬಂಗಾರಪೇಟೆಯ ಮಾವಳ್ಳಿ ನಿವಾಸಿಯಾದ ಯಾದವ್ ಮುಳಬಾಗಿಲು ತಾಲ್ಲೂಕಿನ ಬೈರಕೂರ್ನಲ್ಲಿ ವಾಸ ಮಾಡುತ್ತಿದ್ದರು. ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಕುತಾಂಡಹಳ್ಳಿಯ ಸೋಮಶೇಖರ್ ಎಂಬುವರೊಂದಿಗೆ ಹಣಕಾಸು ವ್ಯವಹಾರ ಹೊಂದಿದ್ದರು. ಹಣಕಾಸು ವ್ಯವಹಾರದಲ್ಲಿ ಇಬ್ಬರಿಗೂ ಬಿನ್ನಾಭಿಪ್ರಾಯ ಬಂದು ಪೊಲೀಸರಿಗೆ ದೂರು ನೀಡಲಾಗಿತ್ತು.

ಸೋಮಶೇಖರ್ ಮತ್ತು ಆತನ ಸಹಚರರು ಯಾದವ್ ಮೇಲೆ ಹಲ್ಲೆ ನಡೆಸಿ ಆತನ ದ್ವಿಚಕ್ರ ವಾಹನ ಮತ್ತು ಮೊಬೈಲ್ ಕಸಿದುಕೊಂಡಿದ್ದರು. ಅಲ್ಲದೆ ಕೋಲಾರದಿಂದ ಮುಳಬಾಗಿಲಿಗೆ ಹೋಗುತ್ತಿದ್ದಾಗ ಟಮಕ ಬಳಿ ಸೋಮಶೇಖರ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದರು. ಆ ಮಾರ್ಗದಲ್ಲಿ ಹೋಗುತ್ತಿದ್ದ ಪೊಲೀಸ್ ಅಧಿಕರಿಯೊಬ್ಬರು ಹಲ್ಲೆಯನ್ನು ತಡೆದಿದ್ದರು.

ಹನುಮಂತ್ ಯಾದವ್ ವಿರುದ್ಧ ದ್ವೇಶ ಸಾದಿಸುತ್ತಿದ್ದ ಸೋಮಶೇಖರ್ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಮತ್ತು ಸ್ವೀಡ್ ನ್ಯೂಸ್ ಬೆಂಗಳೂರು ಕಛೇರಿಗೆ ದೂರುಗಳನ್ನು ನೀಡಿದ್ದರು. ಸೋಮಶೇಖರ್ ಮತ್ತು ಸಹಚರರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಮೇಲ್ನೋಟಕ್ಕೆ ಅಪಘಾತ ಎಂದು ಕಂಡು ಬಂದರೂ ಸಾವು ಅನುಮಾನವಾಗಿದೆ ಎಂದು ಯಾದವ ಸಂಘದ ಪದಾಧಿಕಾರಿಗಳು ಕೊಲಾರದ ಎಸ್.ಪಿ ಅವರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದಾರೆ.

ಚಿತ್ರ : ಹನುಮಂತ್ ಯಾದವ್


 rajesh pande