ನಿವೇಶನ ಮಾಲೀಕರಿಗೆ ಖಾತಾ ವಿತರಣೆ ನಿಲ್ಲಿಸಿದ ಬಿಡಿಎ
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ): ಕನಕಪುರ ರಸ್ತೆಯ ಬಳಿ ಇರುವ ದೊಡ್ಡಕಲ್ಲಸಂದ್ರದ ಬಳಿ ಇರುವ ಬಿಡಿಎ ಅಭಿವೃದ್ಧಿಪಡಿಸ
ಬಿಡಿಎ


ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ): ಕನಕಪುರ ರಸ್ತೆಯ ಬಳಿ ಇರುವ ದೊಡ್ಡಕಲ್ಲಸಂದ್ರದ ಬಳಿ ಇರುವ ಬಿಡಿಎ ಅಭಿವೃದ್ಧಿಪಡಿಸಿರುವ ಎಂಕೆಎಸ್ ಲೇಔಟ್ ನ ನಿವೇಶನದ ಮಾಲಿಕರು ಖಾತಾ ಪ್ರಮಾಣಪತ್ರ ಪಡೆಯುವುದಕ್ಕೆ ಸತತ 2 ವರ್ಷಗಳಿಂದ ಅಲೆಯುತ್ತಿದ್ದಾರೆ.

ಬನಶಂಕರಿಯಲ್ಲಿರುವ ಸ್ಥಳೀಯ ಬಿಡಿಎ ಕಚೇರಿ ಖಾತಾ ಪ್ರಮಾಣಪತ್ರಗಳನ್ನು ನೀಡುವುದನ್ನು ಸ್ಥಗಿತಗೊಳಿಸಿದ್ದು ನಗರಾಭಿವೃದ್ಧಿ ಇಲಾಖೆ (ಯುಡಿಡಿ)ಯಿಂದ ಈ ರೀತಿ ಮಾಡುವುದಕ್ಕೆ ನಿರ್ದೇಶನ ಬಂದಿದೆ ಎಂದು ಆರ್ ಟಿಐ ಅರ್ಜಿಗೆ ಲಿಖಿತ ರೂಪದಲ್ಲಿ ಇದನ್ನೇ ಹೇಳಲು ನಿರಾಕರಿಸಿರುವ ಕಚೇರಿ ಹೇಳಿದೆ.

2006-2007 ರಲ್ಲಿ ಬಿಡಿಎ ಸಿ ಹಾಗು ಡಿ ವಿಭಾಗದ ಉದ್ಯೋಗಿಗಳಿಗೆ ಈ ಲೇಔಟ್ ನ್ನು ನಿರ್ಮಾಣ ಮಾಡಲಾಗಿತ್ತು. ಎರಡು ಹಂತ- ದೊಡ್ಡಕಲ್ಲಸಂದ್ರ ಹಾಗೂ ಲಿಂಗ ದೆವನಹಳ್ಳಿಯಲ್ಲಿರುವ ಈ ಲೇಔಟ್ ನಲ್ಲಿ 759 ನಿವೇಶನಗಳಿವೆ.

ಹರೀಶ್ ಕೆ. ಖಾಸಗಿ ಸಂಸ್ಥೆಯ ಹೆಚ್ ಆರ್ ಉದ್ಯೋಗಿ ಸಹ ಖಾತಾ ಪ್ರಮಾಣಪತ್ರ ಪಡೆಯುವುದಕ್ಕೆ ಹತಾಶರಾಗಿ ಕಾಯುತ್ತಿರುವ 15 ಮಂದಿಯ ಪೈಕಿ ಓರ್ವರಾಗಿದ್ದಾರೆ. 30*40 ಚದರ ಅಡಿಯ ನಿವೇಶನವನ್ನು 2019 ರಲ್ಲಿ 96 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ನವೆಂಬರ್ 2, 2019 ರಲ್ಲಿ ನಾನು ಖಾತೆಗಾಗಿ ಅರ್ಜಿ ಸಲ್ಲಿಸಿದ್ದೆ. ನನಗೆ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಉಳಿದವರ ಕಥೆಯೂ ಇದೆ ಆಗಿದೆ ಎಂದು ಹೇಳುತ್ತಾರೆ.

ಗೃಹ ಸಾಲ ನೀಡುವ ಬ್ಯಾಂಕ್ ಗಳು ಮನೆ ಕಟ್ಟುವುದಕ್ಕೆ 18 ತಿಂಗಳ ಅವಕಾಶವನ್ನಷ್ಟೇ ಕೊಡುತ್ತಾರೆ. ಈಗ ಅವಧಿ ಮೀರಿರುವುದರಿಂದ ನಮಗೆ ನೀಡಿರುವ ಸಾಲವನ್ನು ವೈಯಕ್ತಿಕ ಸಾಲದ ವಿಭಾಗಕ್ಕೆ ಸೇರಿಸಲಾಗಿದ್ದು ಶೇ.8 ರ ಬದಲು ಶೇ.18 ರಷ್ಟು ಬಡ್ಡಿ ಹಾಕಲಾಗುತ್ತಿದೆ ಎಂದು ಹರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಂದಾಯ ಅಧಿಕಾರಿ, ಬನಶಂಕರಿ, ಜ್ಞಾನೇಶ್ ಈ ಬಗ್ಗೆ ಮಾತನಾಡಿದ್ದು, ನಾನು ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದೇನೆ ಹಾಗೂ ಖಾತಾ ಪ್ರಮಾಣಪತ್ರ ನೀಡದಂತೆ ಯುಡಿಡಿಯಿಂದ ಮೌಖಿಕ ಆದೇಶವಿದೆ. ಕಡತಗಳನ್ನು ಇತ್ಯರ್ಥಕ್ಕಾಗಿ ಕಾರ್ಯದರ್ಶಿಗಳಿಗೆ ಕಳಿಸಿದ್ದೇನೆ. ಕ್ಲಿಯರೆನ್ಸ್ ಸಿಕ್ಕಿದ ತಕ್ಷಣವೇ ಮನೆಗಳ ಮಾಲಿಕರಿಗೆ ಖಾತಾ ನೀಡುತ್ತೇನೆ ಎಂದು ಹೇಳಿದ್ದಾರೆ

ಹಿಂದೂಸ್ತಾನ್ ಸಮಾಚಾರ್.ಎಂ.ಎಸ್.ಯ.ಮ


 rajesh pande