ದೇಶದ ಐಕ್ಯತೆ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸೋಣ; ಡಾ.ಬಿ.ಸಿ.ಸತೀಶ್
ರಾಯಚೂರು, 17 ಸೆಪ್ಟೆಂಬರ್ (ಹಿ.ಸ): ನಗರದ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ ಇಂದು (sಸೆ.17 ಶುಕ್ರವಾರ) ಜಿಲ್ಲಾಡಳಿತದಿಂದ
ದೇಶದ ಐಕ್ಯತೆ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸೋಣ; ಡಾ.ಬಿ.ಸಿ.ಸತೀಶ್


ರಾಯಚೂರು, 17 ಸೆಪ್ಟೆಂಬರ್ (ಹಿ.ಸ):

ನಗರದ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ ಇಂದು (sಸೆ.17 ಶುಕ್ರವಾರ) ಜಿಲ್ಲಾಡಳಿತದಿಂದ ಆಯೋಜಿಸಿದ 74ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಚರಣೆ ಅಂಗವಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ರಾಷ್ಟç ಧ್ವಜಾರೋಹಣ ನೆರೆವೇರಿಸಿ, ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದರು.

ಅವರು ಸಂದೇಶ ಇಂತಿದೆ.

ಕಲ್ಯಾಣ-ಕರ್ನಾಟಕ (ಹೈದ್ರಾಬಾದ್-ಕರ್ನಾಟಕ) ಪ್ರದೇಶ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 74 ವರ್ಷಗಳಾದ ನೆನಪಿನಲ್ಲಿ ಇಂದು ಏರ್ಪಡಿಸಿರುವ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನನಗೆ ಸಂತೋಷವೆನಿಸುತ್ತದೆ. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರಿಗೆ ನಮ್ಮ ನಿಮ್ಮೆಲ್ಲರ ಪರವಾಗಿ ಗೌರವದ ವಂದನೆಗಳು.

1947 ಆಗಸ್ಟ್ 15ರಂದು ದೇಶದಲ್ಲಿ ತಿರಂಗ ಧ್ವಜ ಹಾರಾಡಿದರೆ, ಇಲ್ಲಿ ನಿಷೇಧಿತವಾಗಿತ್ತು. ದೇಶಕ್ಕಾಗಿ ಹೋರಾಡಿದ ಮಹಾತ್ಮರ ಪೋಟೋಗಳು ಬಹಿಷ್ಕೃತವಾದವು, ವಂದೇ ಮಾತರಂ ರಾಜದ್ರೋಹದ ಗೀತೆಯಾಯಿತು, ಗಾಂಧಿ ಟೋಪಿ ಹಾಕಿದವರನ್ನು, ಧ್ವಜ ಹಾರಿಸಿದವರನ್ನು ಬಂಧಿಸಲಾಯಿತು.

ಎಲ್ಲಾ ಕಡೆಗಳಲ್ಲಿ ಭಾರತ ಧ್ವಜವನ್ನು ಹಾರಿಸದಂತೆ ಕಟ್ಟಪ್ಪಣೆ ಮಾಡಲಾಯಿತು, ಸೈನಿಕ ಪಥ ಸಂಚಲನ ಮಾಡಿ ಜನರಲ್ಲಿ ಭಯ ಹುಟ್ಟಿಸಲಾಯಿತು.

1947ರ ಆಗಸ್ಟ್ 14ರ ಮಧ್ಯರಾತ್ರಿ ರಾಯಚೂರಿನ ಸಾತ್ ಕಚೇರಿ ಮೇಲೆ ಎಂ. ನಾಗಪ್ಪ, ಬಸಣ್ಣ, ಶರಭಯ್ಯ, ಚಂದ್ರಯ್ಯ, ಪವರ್ತರೆಡ್ಡಿ ಅವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಧ್ವಜ ಹಾರಿಸಿ, ಸ್ವಾತಂತ್ರö್ಯ ಪ್ರೀತಿಯನ್ನು ಮೆರೆದರು. ಇದೇ ಸಂದರ್ಭದಲ್ಲಿ ಗುಬ್ಬೇರ ಬೆಟ್ಟದಲ್ಲಿ ಕೂಡ ಅನಾಮಧೇಯರು ಧ್ವಜ ಹಾರಿಸಿದ್ದರು.

ಈ ವೇಳೆ ನಿಜಾಮ್ ಸರ್ಕಾರದ ರಜಕಾರದ ದಂಡು ಹಿಂಸೆ, ಕ್ರೌರ್ಯ ಮಾಡುತ್ತಿತ್ತು. ಈ ಕಿರುಕುಳ ತಾಳಲಾರದೇ ತರುಣರು ಗಡಿಗಳಲ್ಲಿ ಶಿಬಿರ ಸ್ಥಾಪಿಸಿ, ಲೆವಿ ಕಾಳುಗಳ ಲೂಟಿ, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಶಸ್ತಾçಸ್ತçಗಳನ್ನು ಲೂಟಿ ಮಾಡಿದರು, ಪ್ರತಿ ಹಳ್ಳಿ ಹಳ್ಳಿಗಳಿಗೆ ಹೋಗಿ ಜನರಿಗೆ ಹಫ್ತಾ ಮತ್ತು ಲೆವಿಗಳನ್ನು ಸರ್ಕಾರಕ್ಕೆ ಸಲ್ಲಿಸದಂತೆ ಜನರನ್ನು ಪ್ರಚೋದಿಸಿ, ಅಸಹಕಾರ ಆಂದೋಲನ ರೂಪಿಸಿದರು.

ಆಗ ನಿಜಾಮನು ಇಂಗ್ಲೆAಡ್, ಪಾಕಿಸ್ತಾನದ ಜೊತೆ ಮೈತ್ರಿ, ಪೋರ್ಚುಗೀಸರ ಸಂಬAಧ ಗಳಿಸಿ, ಭಾರತದ ಮೇಲೆ ಯುದ್ದಮಾಡಲು ಸನ್ನದ್ದನಾದನು. ಹೊರ ದೇಶಗಳಿಂದ ಶಸ್ತಾçಸ್ತç ತರಿಸಿ ಹೈದರಾಬಾದ್ನಲ್ಲಿ ಶಸ್ತಾçಸ್ತçಗಳ ಉತ್ಪಾದನೆ ಆರಂಭವಾಯಿತು. ಇದನ್ನರಿತ ಭಾರತ ಸರ್ಕಾರ ಜನರ ಮನವಿಗೆ ಕಿವಿಗೊಟ್ಟು, ಅವರ ಕಷ್ಟಗಳಿಗೆ ಸ್ಪಂದಿಸಿತು.

ಆಗಿನ ಕೇಂದ್ರ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟತನದಿಂದ 1948 ಸೆಪ್ಟಂಬರ್ 13 ರಂದು ಪೊಲೀಸ್ ಕಾರ್ಯಾಚರಣೆ (ಆಪರೇಷನ್ ಪೋಲೋ) ಕೈಗೊಳ್ಳಲಾಯಿತು. ಭಾರತದ ಸೇನೆ ಎಲ್ಲೆಡೆಯಿಂದ ಹೈದರಾಬಾದ್ ಪ್ರಾಂತ್ಯವನ್ನು ಮುತ್ತಿಗೆ ಹಾಕಿತು. ದಕ್ಷಿಣ ಭಾರತದ ಪ್ರಧಾನ ದಂಡ ನಾಯಕ ಮಹಾರಾಜ ಸಿಂಗ್ರ ನೇತೃತ್ವದಲ್ಲಿ ಸೈನ್ಯ ಮುನ್ನೆಡೆಯಿತು.

ಭಾರತದ ಸೈನ್ಯಕ್ಕೆ ನಿಜಾಂನ ಸೈನ್ಯವಾಗಲೀ, ಪಠಾಣರಾಗಲೀ ಎಲ್ಲಿಯೂ ತಡೆ ಒಡ್ಡಲಿಲ್ಲ, ಕೇವಲ ನಾಲ್ಕು ದಿನದಲ್ಲಿ ಸೈನ್ಯ ಹೈದರಾಬಾದ್ಗೆ ಬಂದಾಗ ನಿಜಾಮನು ಭಾರತಕ್ಕೆ ಶರಣಾದನು. ಅಂದು ಸೆಪ್ಟಂಬರ್ 17ರ ಸಂಜೆಯಾಗಿತ್ತು. ಮರುದಿನ ಸೆಪ್ಟಂಬರ್ 18ರಂದು ಹೈದರಾಬಾದ್ ಪ್ರಾಂತ್ಯವು ಭಾರತದಲ್ಲಿ ವಿಧಿವತ್ತಾಗಿ ವಿಲೀನವಾಯಿತು.

ಆಗ ರಾಯಚೂರು ಜಿಲ್ಲೆಯೂ ಭಾರತದ ಒಂದು ಭಾಗವಾಗಿ ಉಳಿಯಿತು. ಅದರ ಸವಿ ನೆನಪಿಗಾಗಿ ಪ್ರತಿ ವರ್ಷ ಕಲ್ಯಾಣ ಕರ್ನಾಟಕ ಉತ್ಸವ (ಹೈದ್ರಬಾದ್ ಕರ್ನಾಟಕ ವಿಮೋಚನೆ) ದಿನಾಚರಣೆ ಎಂದು ಆಚರಣೆ ಮಾಡುತ್ತೇವೆ.

ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಕಳೆದ 2 ವರ್ಷಗಳಲ್ಲಿ ಸುಮಾರು 2,632 ಕೋಟಿ ರೂಗಳ ಅನುದಾನ ಮೀಸಲಿರಿಸಿತ್ತು. ಪ್ರಸಕ್ತ ಸಾಲಿನಲ್ಲೂ ಸಹ 1,493 ಕೋಟಿ ರೂಗಳ ಅನುದಾನ ಮೀಸಲಿಡಲಾಗಿದೆ. ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ, ರಸ್ತೆ ಸಂಪರ್ಕ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಇತ್ಯಾದಿ ಅಂಶಗಳಿಗೆ ಮಹತ್ವದ ಸ್ಥಾನ ನೀಡಿ ಈ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

ಮಾನ್ಯ ಮುಖ್ಯಮಂತ್ರಿಗಳು ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ಘೋಷಣೆ ಮಾಡಿ ರಾಜ್ಯದ ಸುಮಾರು 17 ಲಕ್ಷ ವಿದ್ಯಾರ್ಥಿಗಳಿಗೆ ಅಂದಾಜು 1,000 ಕೋಟಿ ರೂಗಳ ಈ ಯೋಜನೆ ಜಾರಿಗೊಳಿಸಿದ್ದಾರೆ. ಅಲ್ಲದೇ ಸಂಧ್ಯಾಸುರಕ್ಷಾ, ವಿಧವಾ ವೇತನ, ಅಂಗವಿಕಲರ ಮಾಸಾಶನ ಮೊತ್ತವನ್ನ ಮಾಸಿಕ 200 ರೂಗಳಷ್ಟು ಹೆಚ್ಚಿಸಿರುವುದು ಸುಮಾರು 56 ಲಕ್ಷ ಫಲಾನುಭವಿಗಳಿಗೆ ವರದಾನವಾಗಿದೆ. ಪರಿಶಿಷ್ಠ ಪಂಗಡದ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ.

ಕೋವಿಡ್ ಲಸಿಕೆಯು ಅಗತ್ಯ ಪ್ರಮಾಣದಲ್ಲಿ ರಾಜ್ಯದಲ್ಲಿ ದೊರೆಯುವಂತೆ ವ್ಯವಸ್ಥೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ 9.98 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಲಸಿಕೆ ನೀಡುವ ಕಾರ್ಯ ಮುಂದುವರಿಯುತ್ತಿದೆ. ಕೋವಿಡ್-19 ಸೋಂಕಿತರಿಗೆ ಆಮ್ಲಜನಕ ಅವಶ್ಯಕತೆ ಇರುವುದರಿಂದ ಸಾರಿಗೆ ಸಂಸ್ಥೆಯ 3 ವಾಹನಗಳನ್ನು ಆಕ್ಸಿಜನ್ ವಾಹನಗಳಾಗಿ ಪರಿವರ್ತಿಸಲಾಗಿದೆ.

ಕೋವಿಡ್ನ ಎರಡನೇ ಅಲೆಯನ್ನು ನಾವು ಒಗ್ಗಟ್ಟಾಗಿ ಎದುರಿಸಿರುವುದರಿಂದ ಮೂರನೇ ಅಲೆಯಲ್ಲಿಯೂ ಸಹ ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಕಡ್ಡಾಯ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್ ಬಳಕೆ ಮತ್ತು ಕಡ್ಡಾಯವಾಗಿ ಎರಡು ಲಸಿಕೆಗಳನ್ನು ಪಡೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಗರ್ಭಿಣಿ ಮತ್ತು ನವಜಾತ ಶಿಶುಗಳ ಸಂರಕ್ಷಣೆಗಾಗಿ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಔಷಧಿ, ರಕ್ತ ಪೂರೈಕೆ, ಪ್ರಯೋಗಾಲಯ ಪರೀಕ್ಷೆಗಳು, ಆಹಾರ ಹಾಗೂ ಪಾಲನಾ ವ್ಯವಸ್ಥೆ ಇತ್ಯಾದಿ ಉಚಿತ ಸೇವೆಗಳನ್ನು ನೀಡಲಾಗುತ್ತಿದೆ.

ಇಂದು ಒಂದೇ ದಿನ 30 ಲಕ್ಷ ಲಸಿಕೆಗಳನ್ನು ಹಾಕಿಸಲು ಕಂಕಲ್ಪ ಮಾಡಿದ್ದು, ನಮ್ಮ ಜಿಲ್ಲೆಯಲ್ಲಿ 1 ಲಕ್ಷ ಲಸಿಕೆಗಳನ್ನು ಎಲ್ಲಾ ಇಲಾಖೆ, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನೀಡಲು ತೀರ್ಮಾನಿಸಿದ್ದು ಬೆಳಗ್ಗೆಯಿಂದಲೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

2021ರ ಜುಲೈ ಮತ್ತು ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಲಿಂಗಸಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿಯಿಂದ. 3,217 ಹೆಕ್ಟೇರ್ ಕೃಷಿ ಹಾಗೂ 45 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿರುತ್ತದೆ.

ಈ ರೈತರ ಮಾಹಿತಿಯನ್ನು “ಭೂಮಿ ಪರಿಹಾರ” ತಂತ್ರಾAಶದಲ್ಲಿ ದಾಖಲು ಮಾಡಲಾಗುತ್ತಿದ್ದು, ಸದರಿ ತಂತ್ರಾAಶದಲ್ಲಿರುವ ಮೊದಲ ಹಂತದ 807 ಫಲಾನುಭವಿಗಳಿಗೆ 1.00 ಕೋಟಿ 40 ಸಾವಿರ ಇನ್ಪುಟ್ ಸಬ್ಸಿಡಿ ಜಮೆ ಮಾಡಲು ಅನುಮೊದನೆ ನೀಡಲಾಗಿದೆ. ಅತಿ ಶೀಘ್ರದಲ್ಲಿ ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಹೊಂದಿರುವ ರೈತರ ಖಾತೆಗೆ ಜಮೆ ಮಾಡಲಾಗಿದೆ.

ಜನತೆಯ ಬಹುದಿನಗಳ ಕನಸಾದ ರಾಯಚೂರು ವಿಮಾನ ನಿಲ್ದಾಣವು ಈಗ ನನಸಾಗುವ ಹಂತಕ್ಕೆ ಬಂದಿದೆ. ಈಗಾಗಲೇ ನಗರದ ಹೊರವಲಯದಲ್ಲಿ ಏಗನೂರು ಹಾಗೂ ಯರಮರಸ್ ಗ್ರಾಮವ್ಯಾಪ್ತಿಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಡಿ 40 ಕೋಟಿ ರೂಪಾಯಿ ಅನುದಾನ ಮತ್ತು ಡಿಎಂಎಫ್ ಅಡಿಯಲ್ಲಿ 10 ಕೋಟಿ ರೂ.ಗಳೂ ಸೇರಿದಂತೆ ಒಟ್ಟು 50 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದ್ದು, ಕೆಎಸ್ಐಐಡಿಸಿ ಮತ್ತು ಆರ್ಐಟಿಇಎಸ್ ಸಂಸ್ಥೆಯಿAದ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ.

ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ 6,420 ಕ್ವಿಂಟಲ್ ಬಿತ್ತನೆ ಬೀಜಗಳನ್ನು ಒಟ್ಟು 24,907 ಫಲಾನುಭವಿಗಳಿಗೆ ವಿತರಿಸಲಾಗಿದೆ. ಪ್ರಧಾನಮಂತ್ರಿಗಳ ಕೃಷಿ ಸಮ್ಮಾನ್ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ 6 ಸಾವಿರ ರೂಪಾಯಿ ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂಪಾಯಿ ಸೇರಿದಂತೆ ಒಟ್ಟು 10 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ರೈತರಿಗೆ ನೀಡಲಾಗುತ್ತಿದೆ.

ಕೇಂದ್ರದಿAದ 280 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 76 ಕೋಟಿ ಒಟ್ಟಾರೆ 356 ಕೋಟಿ ರೂಪಾಯಿಗಳನ್ನು ಈಗಾಗಲೇ ನೇರವಾಗಿ ರಾಯಚೂರು ಜಿಲ್ಲೆಯ 2.13 ಲಕ್ಷ ರೈತರ ಬ್ಯಾಂಕ್ಖಾತೆಗೆ ಜಮೆ ಮಾಡಲಾಗಿದೆ. ಪ್ರಧಾನಮಂತ್ರಿಗಳ ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ಹಾಗೂ ಹನಿ ನೀರಾವರಿ ಘಟಕಗಳ ಅಳವಡಿಕೆಗೆ ಜಿಲ್ಲೆಯ ರೈತರಿಗೆ 82.3 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ.

ಕೃಷಿ ಇಲಾಖೆ ಮಹಾತ್ವಕಾಂಕ್ಷಿ ಬೆಳೆ ಸಮೀಕ್ಷೆ ಯೋಜನೆಯಡಿ ರೈತರು ಸ್ವತಃ ತಾವೇ ಹಾಗೂ ಪ್ರವೇಟ್ ರೆಸಿಡೆನ್ಸ್ ಮೂಲಕ ಒಟ್ಟು ಶೇ.70 ರಷ್ಟು ಪ್ಲಾಟ್ ಗಳ ಬೆಳೆ ಸಮೀಕ್ಷೆ ಪೂರ್ಣಗೊಳಿಸಿರುತ್ತಾರೆ. 2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಜಲ್ಜೀವನ್ ಮಿಷನ್ ಯೋಜನೆಯಡಿ 313 ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಪ್ರತಿ ಮನೆ-ಮನೆಗೆ ಗಂಗೆ ನೀರು ಸಂಪರ್ಕಕ್ಕಾಗಿ ಪ್ರಸಕ್ತ ಸಾಲಿನಲ್ಲಿ 225 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, 213 ಕಾಮಗಾರಿಗಳಿಗೆ ಕಾರ್ಯಾದೇಶವನ್ನು ನೀಡಲಾಗಿದೆ.

ರಾಜ್ಯ ಸರ್ಕಾರದ 1,500 ಕೋಟಿ ರೂಗಳ ಅನುದಾನದಲ್ಲಿ ಜಲಧಾರೆ ಯೋಜನೆಯನ್ನು ಅನುಷ್ಠನಗೊಳಿಸಲಾಗುತ್ತಿದ್ದು, ಪ್ರತಿ ಮನೆಗೆ ಅನ್ನು ನೀಡಿ ಪ್ರತಿ ವ್ಯಕ್ತಿಗೆ 55 ಲೀಟರ್ ನೀರನ್ನು ನೀಡುವ ಮಹಾತ್ವಾಕಾಂಕ್ಷಿ ಯೋಜನೆ ಅನುಷ್ಠಾನ ಹಂತದಲ್ಲಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ಜಿಲ್ಲೆಗೆ ಈವರೆಗೆ ಒಟ್ಟು 568 ಕೋಟಿ ರೂಪಾಯಿ ಅನುದಾನ ದೊರೆತಿದ್ದು, ಅದರಲ್ಲಿ 778 ಕಾಮಗಾರಿಗಳು ಮಂಜೂರಾಗಿದ್ದು, 597 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 125 ಕಾಮಗಾರಿಗಳು ಪ್ರಗತಿಯಲ್ಲಿವೆ.

2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 97 ಲಕ್ಷ ಮಾನವ ದಿನಗಳ ಗುರಿಗೆ ಅನುಸಾರವಾಗಿ 121 ಲಕ್ಷ ಮಾನವ ದಿನಗಳನ್ನು ಸೃಷ್ಠಿಸಿ ರೂ.296 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ನರೇಗಾ ಯೋಜನೆಯ ಅನುಷ್ಠಾನದಲ್ಲಿ ಕಳೆದ ಸಾಲಿನಲ್ಲ್ಲಿ ರಾಜ್ಯದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿರುತ್ತದೆ.

2021-22ನೇ ಸಾಲಿನ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 103 ಲಕ್ಷ ಮಾನವ ದಿನಗಳ ಗುರಿಗೆ ಅನುಸಾರವಾಗಿ 86 ಲಕ್ಷ ಮಾನವ ದಿನಗಳನ್ನು ಸೃಷ್ಠಿಸಿ ರೂ. 21309.23 ಕೋಟಿಗಳನ್ನು ವೆಚ್ಚ ಮಾಡಲಾಗಿದೆ.

ನರೇಗಾ ಯೋಜನೆಯ ಅನುಷ್ಠಾನದಲ್ಲಿ ಪ್ರಸ್ತಕ ಸಾಲಿನಲ್ಲ್ಲಿ ರಾಜ್ಯಕ್ಕೆ ಜಿಲ್ಲೆಯು ಎರಡನೇ ಸ್ಥಾನದಲ್ಲಿರುತ್ತದೆ. ನರೇಗಾದಡಿ ರೈತರ ಜಮೀನುಗಳಲ್ಲಿ ಅಂತರ್ಜಲ ವೃದ್ಧಿಗೆ ಅನುವಾಗುವಂತೆ 3,745 ಕೃಷಿಹೊಂಡ, 14,454 ಬದು ನಿರ್ಮಾಣ, 431 ತೆರೆದ ಬಾವಿ, 20,184 ಇಂಗು ಗುಂಡಿ, 168 ಬೋರ್ವೆಲ್ ರಿಚಾರ್ಜ್ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.

ಜಿಲ್ಲೆಯ ಬಿ.ಆರ್ ಗಣೇಕಲ್ ಏತ ನೀರಾವರಿಗೆ 200 ಕೋಟಿ ರೂಪಾಯಿ ಮತ್ತು ರಾಯಚೂರು ತಾಲೂಕಿನ ಲಿಂಕ್ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 212 ಕೋಟಿ ರೂಪಾಯಿಗಳ ಕಾಮಗಾರಿಗೆ ಮಾನ್ಯ ಮುಖ್ಯ ಮಂತ್ರಿಗಳು ಶೀಘ್ರದಲ್ಲಿ ಚಾಲನೆ ನೀಡಲಿದ್ದಾರೆ.

ಲೋಕೋಪಯೋಗಿ ಇಲಾಖೆಯಲ್ಲಿ 394 ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ಜಿಲ್ಲೆಯಲ್ಲಿ 51 ವಿವಿಧ ಕಾಮಗಾರಿಗಳು ಪೂರ್ಣಗೊಂಡಿವೆ. ರಸ್ತೆ, ಸೇತುವೆ ಮತ್ತು ಕಟ್ಟಡಗಳ ತುರ್ತು ದುರಸ್ತಿಗಾಗಿ 735 ಕೋಟಿ ಮೊತ್ತದಲ್ಲಿ 131 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 74 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ.

ರಾಯಚೂರು ನಗರದ ಬಹು ನಿರೀಕ್ಷಿತ ರಿಂಗ್ ರಸ್ತೆಗೆ ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಆಯವ್ಯಯದಲ್ಲಿ 80 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ರಿಂಗ್ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಯರ್ಮರಸ್ನಲ್ಲಿರುವ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಈ ಸಾಲಿನಿಂದ ಆಫ್ಲೈನ್ ಮೂಲಕ ಐಐಐಟಿ (ಟ್ರಿಪಲ್ಐಟಿ) ತರಗತಿಗಳು ಇಲ್ಲಿಯೇ ಆರಂಭಗೊಳ್ಳಲಿವೆ. ಇದಕ್ಕೆ ಅಗತ್ಯ ಸಿಬ್ಬಂದಿಗಳು ನಿಯೋಜಿತರಾಗಿದ್ದಾರೆ. ಇದಕ್ಕಾಗಿ 11 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಹಿಂದುಳಿದ ಜಿಲ್ಲೆಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರದ “ಮಹತ್ವಾಕಾಂಕ್ಷಿ ಯೋಜನೆ” ಅಡಿ ರಾಯಚೂರು ಜಿಲ್ಲೆ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಈ ಯೋಜನೆಯಡಿ ರಾಷ್ಟçಮಟ್ಟದಲ್ಲಿ ಆಯ್ಕೆಯಾದ 112 ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆಯೂ ಒಂದಾಗಿದೆ. ಉತ್ತಮ ಆರೋಗ್ಯ, ಶಿಕ್ಷಣ, ಕೃಷಿ, ಆರ್ಥಿಕ ಸೌಕರ್ಯ, ಕೌಶಾಲ್ಯಾಭಿವೃದ್ಧಿಗೆ ಆದ್ಯತೆ, ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ.

ಇಂತಹ ಹತ್ತು ಹಲವು ಸಾಧನೆಗಳನ್ನು ಮೆಲುಕು ಹಾಕುವುದರ ಜೊತೆಗೆ ಈ ದೇಶದ ಸ್ವಾತಂತ್ರö್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಎಲ್ಲಾ ಮಹಾನ್ ಚೇತನಗಳಿಗೂ ನಮನ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಇವರ ಆದರ್ಶ ನಮ್ಮ ಯುವಪೀಳಿಗೆಯಲ್ಲಿ ಮೇಳೈಸಲಿ. ನಮ್ಮ ದೇಶ ಚೈತನ್ಯಯುತ ಅಭಿವೃದ್ಧಿಶೀಲ ರಾಷ್ಟçವಾಗಬೇಕಾದರೆ ನಮ್ಮಲ್ಲಿ ದೇಶದ ಭವ್ಯತೆ-ದಿವ್ಯತೆ ಮತ್ತು ಪಾವಿತ್ರö್ಯತೆಗಳ ಅರಿವು, ದೇಶಪ್ರೇಮ, ದೇಶಭಕ್ತಿ ಉಕ್ಕಿ ಹರಿಯಬೇಕು. “ದೇಶಭಕ್ತಿಯ ಬಿಸಿಬಿಸಿ ನೆತ್ತರು ಧಮನಿ ಧಮನಿಗಳಲ್ಲಿ ತುಂಬಬೇಕು”.

ದೇಶದ ನಾಗರಿಕರಾಗಿ ಭವ್ಯ ಪರಂಪರೆ, ಸಂಸ್ಕೃತಿ ಇವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಯೋಚಿಸಬೇಕಾಗಿದೆ. ಜಾತಿ, ಮತ, ಭಾಷೆ, ಪಂಗಡಗಳ ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಐಕ್ಯತೆ ಕಾಪಾಡಿ ಬಲ್ಠಿಷ್ಟ ರಾಷ್ಟ್ರ ನಿರ್ಮಾಣ ಮಾಡುವುದಕ್ಕೆ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ.

ಇಂದಿನ ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವ ನಮ್ಮೆಲ್ಲರಿಗೂ ಸ್ಪೂರ್ತಿ ನೀಡಲಿ ಎಂದು ಹಾರೈಸುತ್ತ ಈ ಸುಸಂದರ್ಭದಲ್ಲಿ ಮತ್ತೊಮ್ಮೆ ತಮ್ಮೆಲ್ಲರಿಗೂ ಕಲ್ಯಾಣ ಕರ್ನಾಟಕ ಉತ್ಸವದ ಶುಭ ಹಾರೈಸುತ್ತೇನೆ.

ಜೈ ಹಿಂದ್ – ಜೈ ಕಲ್ಯಾಣ ಕರ್ನಾಟಕ

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಅಪರ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್, ರಾಯಚೂರು ಸಹಾಯಕ ಆಯುಕ್ತರಾದ ಸಂತೋಷ ಕಾಮಗೌಡ, ರಾಯಚೂರು ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸತೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.


 rajesh pande