ಭದ್ರತೆ ನೆಪ, ಹಠಾತ್ ಪಾಕ್ ಪ್ತವಾಸ ರದ್ದುಪಡಿಸಿದ ನ್ಯೂಜಿಲೆಂಡ್
ರಾವಲ್ಪಿಂಡಿ, 17 ಸೆಪ್ಟೆಂಬರ್ (ಹಿ.ಸ): ರಾವಲ್ಪಿಂಡಿ, ಸೆ.17- ಹದಿನೆಂಟು ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್
ಭದ್ರತೆ ನೆಪ, ಹಠಾತ್ ಪಾಕ್ ಪ್ತವಾಸ ರದ್ದುಪಡಿಸಿದ ನ್ಯೂಜಿಲೆಂಡ್


ರಾವಲ್ಪಿಂಡಿ, 17 ಸೆಪ್ಟೆಂಬರ್ (ಹಿ.ಸ): ರಾವಲ್ಪಿಂಡಿ, ಸೆ.17- ಹದಿನೆಂಟು ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ತಂಡ ಭದ್ರತಾ ದೃಷ್ಟಿಯಿಂದ ಪ್ರವಾಸನ್ನು ಹಠಾತ್ ರದ್ದುಪಡಿಸಿದೆ.

ಉಭಯ ತಂಡಗಳ ನಡುವೆ ಇಂದಿನಿಂದ ರಾವಲ್ಪಿಂಡಿ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಬೇಕಾಗಿತ್ತು. ಪಂದ್ಯ ಆರಂಭಗೊಳ್ಳಲು ಕೇವಲ 20 ನಿಮಿಷಗಳು ಬಾಕಿ ಇರುವಾಗಲೇ ಕಿವೀಸ್ ಮಹತ್ವದ ನಿರ್ಧಾರ ಕೈಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಹಿಂದೆ 2003ರಲ್ಲಿ ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿತ್ತು. ಇದಾದ ಬಳಿಕ ಭದ್ರತೆ ದೃಷ್ಟಿಯಿಂದ ಇಲ್ಲಿಗೆ ಬಂದಿರಲಿಲ್ಲ. ಇದೀಗ ಪಾಕ್ ಜೊತೆ ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳನ್ನಾಡಲು ಕಿವೀಸ್ ಆಗಮಿಸಿತ್ತು. ರಾವಲ್ಪಿಂಡಿ ಹಾಗೂ ಲಾಹೋರ್ನಲ್ಲಿ ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳು ಆಯೋಜನೆ ಗೊಂಡಿದ್ದವು.

2009ರಲ್ಲಿ ಪಾಕಿಸ್ತಾನದ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಇದಾದ ಬಳಿಕ ಬಹುತೇಕ ತಂಡಗಳು ಪಾಕ್ಗೆ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿವೆ. ಇದರ ಹೊರತಾಗಿ ನ್ಯೂಜಿಲ್ಯಾಂಡ್ ತಂಡ ಕಳೆದ ನಾಲ್ಕು ದಿನಗಳ ಹಿಂದೆ ಪಾಕ್ಗೆ ಬಂದಿಳಿದಿತ್ತು.

ಹಿಂದೂಸ್ತಾನ್ ಸಮಾಚಾರ್


 rajesh pande