ಒಡಿಶಾದ ಸಮುದ್ರ ದಂಡೆಯಲ್ಲಿ ವಿಷ್ಣು ಅವರ ಮರಳು ಶಿಲ್ಪ ರಚಿಸಿದ ಕಲಾವಿದ ಮನೀಶ್ ಕುಮಾರ್
ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ): ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅತ್ಯಪೂರ್ವ ಕಲಾವಿದ. ನಾಳೆ(ಸೆಪ್ಟೆಂಬರ್ 18) ಅವ
ನಟ ವಿಷ್ಣು ಅವರ ಮರಳು ಶಿಲ್ಪ


ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ): ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅತ್ಯಪೂರ್ವ ಕಲಾವಿದ. ನಾಳೆ(ಸೆಪ್ಟೆಂಬರ್ 18) ಅವರ 71ನೇ ಜನ್ಮದಿನ. ಈ ಪ್ರಯುಕ್ತ ಒಡಿಶಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.

ಡಾ.ವಿಷ್ಣುವರ್ಧನ್ ಗೌರವಾರ್ಥ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ರಚಿಸಲಾಗಿದೆ. ಖ್ಯಾತ ಮರಳು ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಇದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವಿಷ್ಣುಸೇನಾ ಸಮಿತಿ ಅಧ್ಯಕ್ಷ, ವಿಷ್ಣು ಅವರ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ ಒದಗಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್.ಎಂ.ಎಸ್.ಯ.ಮ


 rajesh pande