ಭಾರತ - ಪಾಕ್ ಗಡಿಯಲ್ಲಿ ಮತ್ತೆ ಡ್ರೋಣ್ ಹಾರಾಟ
ಅಮೃತಸರ, 17 ಸೆಪ್ಟೆಂಬರ್ (ಹಿ.ಸ): ಪಂಜಾಬ್ನ ಅಮೃತಸರದಲ್ಲಿರುವ ಭಾರತ - ಪಾಕಿಸ್ತಾನ ಗಡಿಯಲ್ಲಿ ಮತ್ತೆ ಡ್ರೋನ್ ಚಟುವಟಿಕೆ
ಡ್ರೋಣ್ ಹಾರಾಟ


ಅಮೃತಸರ, 17 ಸೆಪ್ಟೆಂಬರ್ (ಹಿ.ಸ): ಪಂಜಾಬ್ನ ಅಮೃತಸರದಲ್ಲಿರುವ ಭಾರತ - ಪಾಕಿಸ್ತಾನ ಗಡಿಯಲ್ಲಿ ಮತ್ತೆ ಡ್ರೋನ್ ಚಟುವಟಿಕೆಗಳು ಕಂಡು ಬಂದಿದ್ದು, ಇದನ್ನು ಕಂಡ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ತಕ್ಷಣವೇ ಡ್ರೋನ್ಗಳು ಪಾಕಿಸ್ತಾನಕ್ಕೆ ಮರಳಿವೆ.

ಕಳೆದ 40 ದಿನಗಳಲ್ಲಿ ನಾಲ್ಕು ಬಾರಿ ಪಂಜಾಬ್ನ ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಯುದ್ದಕ್ಕೂ ಡ್ರೋನ್ಗಳ ಹಾರಾಡುತ್ತಿರುವುದನ್ನು ಗಮನಿಸಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಡ್ರೋನ್ ದಾಳಿಯ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದು, ನಿಗಾ ವಹಿಸುವಂತೆ ಸೂಚಿಸಿದ್ದರು. ಇದೀಗ ಕಳೆದ ರಾತ್ರಿ ಮತ್ತೆ ಡ್ರೋನ್ಗಳು ಗಡಿಯಲ್ಲಿ ಹಾರಾಡಿವೆ.

ಗಡಿ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಮತ್ತು ತನಿಖಾ ಸಂಸ್ಥೆಗಳು ಸುತ್ತುವರೆದು ತನಿಖೆ ನಡೆಸುತ್ತಿವೆ. ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪಂಜಾಬ್ ಡಿಜಿಪಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ.ಎಂ.ಎಸ್.ಯ.ಮ


 rajesh pande