ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಬ್ಯಾಂಕುಗಳಿಗೆ 30,600 ಕೋಟಿ ರೂ. ಭದ್ರತೆ - ನಿರ್ಮಲಾ ಸೀತಾರಾಮನ್
ನವದೆಹಲಿ, 16 ಸೆಪ್ಟೆಂಬರ್ (ಹಿ.ಸ): ದೊಡ್ಡ ಟೆಲಿಕಾಂ ಪ್ಯಾಕೇಜ್ ಘೋಷಿಸಿದ್ದ ಕೇಂದ್ರ ಸರ್ಕಾರ ಈಗ ಆರ್ಥಿಕ ಸಂಕಷ್ಟಕ್ಕೆ ತ
ನಿರ್ಮಲಾ ಸೀತಾರಾಮನ್


ನವದೆಹಲಿ, 16 ಸೆಪ್ಟೆಂಬರ್ (ಹಿ.ಸ): ದೊಡ್ಡ ಟೆಲಿಕಾಂ ಪ್ಯಾಕೇಜ್ ಘೋಷಿಸಿದ್ದ ಕೇಂದ್ರ ಸರ್ಕಾರ ಈಗ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಬ್ಯಾಂಕ್ಗಳಿಗೆ (ಬ್ಯಾಡ್ ಬ್ಯಾಂಕ್) ಅಥವಾ ನ್ಯಾಷನಲ್ ಅಸೆಟ್ ರೀಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್(ಎನ್ಎಆರ್ಸಿಎಲ್)ಗೆ 30,600 ಕೋಟಿ ರೂ. ಗ್ಯಾರೆಂಟಿ ನೀಡುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಿಳಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗೆ ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದ್ದು, ಇದರಿಂದ ಬ್ಯಾಂಕ್ಗಳ ಲೆಕ್ಕ ಪುಸ್ತಕ ಸ್ವಚ್ಛಗೊಳಿಸಲು ಸಾಧ್ಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಸುಮಾರು 5 ಲಕ್ಷ ಕೋಟಿ ಸಾಲದ ಹಣವನ್ನು ವಸೂಲು ಮಾಡಲಾಗಿದೆ. ರಾಷ್ಟ್ರೀಯ ಆಸ್ತಿ ಮರುನಿರ್ಮಾಣ ಕಂಪನಿ ನೀಡುವ ಭದ್ರತಾ ರಸೀದಿ ಹಿಂತಿರುಗಿಸಲು ನಿನ್ನೆ ಕೇಂದ್ರ ಸರ್ಕಾರ 30,600 ಕೋಟಿಗೆ ಅನುಮೋದನೆ ನೀಡಿತು ಎಂದು ಸೀತಾರಾಮನ್ ತಿಳಿಸಿದ್ದಾರೆ.

100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಂಚನೆ ಪತ್ತೆಗಾಗಿ ಸರಾಸರಿ 57 ತಿಂಗಳ ವಿಳಂಬ ಸಮಯವನ್ನು ಹೊಂದಿವೆ. ಆದರೆ ಭೂಷಣ್ ಸ್ಟೀಲ್, ಎಸ್ಸಾರ್ ಸ್ಟೀಲ್ ಸೇರಿದಂತೆ ಕೆಲ ಕಂಪನಿಗಳ ಸಾಲವನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ 99 ಸಾವಿರ ಕೋಟಿ ವಸೂಲಿ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.

ಎನ್ಎಆರ್ಸಿಎಲ್ ಬ್ಯಾಂಕ್ಗಳಿಂದ 15:85 ಅನುಪಾತದಲ್ಲಿ ಸಾಲಗಳನ್ನು ಖರೀದಿಸಲಿದೆ. ಇದರಲ್ಲಿ ಶೇ. 15ರಷ್ಟು ಹಣವನ್ನು ಕಂಪನಿಯು ನಗದು ರೂಪದಲ್ಲಿ ಬ್ಯಾಂಕ್ಗಳಿಗೆ ನೀಡಲಿದ್ದರೆ, ಉಳಿದ ಮೊತ್ತಕ್ಕೆ ಸೆಕ್ಯೂರಿಟಿ ರಿಸಿಪ್ಟ್ ನೀಡಲಿದೆ. ಈ ಸೆಕ್ಯೂರಿಟಿ ರಿಸಿಪ್ಟ್ಗಳಿಗೆ ಸರಕಾರ ಗ್ಯಾರೆಂಟಿ ನೀಡಲಿದೆ.

ಹಿಂದೂಸ್ತಾನ್ ಸಮಾಚಾರ್.ಎಂ.ಎಸ್.ಯ.ಮ


 rajesh pande