Custom Heading

ಗಾಂಧಿ ಜಯಂತಿಯಂದು ಖಾದಿ ಉತ್ಪನ್ನ ಖರೀದಿಗೆ ಆದ್ಯತೆ
ಚಿತ್ರದುರ್ಗ,16,ಸೆಪ್ಟಂಬರ್ (ಹಿ ಸ)-ಅಕ್ಟೋಬರ್ 2 ರಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಗಾಂಧಿಜಯಂತಿ ಅಂಗವಾಗಿ ಖಾದಿ ಗ್ರ
ಗಾಂಧಿನಜಯಂತಿಯಂದು ಖಾದಿ ಉತ್ಪನ್ನ ಖರೀದಿಗೆ ಆದ್ಯತೆ


ಚಿತ್ರದುರ್ಗ,16,ಸೆಪ್ಟಂಬರ್ (ಹಿ ಸ)-ಅಕ್ಟೋಬರ್ 2 ರಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಗಾಂಧಿಜಯಂತಿ ಅಂಗವಾಗಿ ಖಾದಿ ಗ್ರಾಮೋದ್ಯೋಗವನ್ನ ಪ್ರೋತ್ಸಾಹಿಸಲು ಯಾವುದೇ ಒಂದು ಖಾದಿಉತ್ಪನ್ನವನ್ನು ಖರೀದಿಸುವ ಪ್ರತಿಜ್ಞೆಯನ್ನು ಮಾಡಿದ್ದೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರುಳಿ ಹೇಳಿದರು, ಅವರು ಬಿಜೆಪಿ ಕಚೇರಿಯಲ್ಲಿ ಮಾತನಾಡಿದರು,

ಮಹಾತ್ಮಾ ಗಾಂಧಿಅವರು ಕನಸಿನಂತೆ ಗ್ರಾಮಗಳ ಅಭಿವೃದ್ದಿ ಜೊತೆಗೆ ಗ್ರಾಮೋದ್ಯೋಗ ವನ್ನು ಪ್ರೋತ್ಸಾಹಿಸುವ ಕರೆಯನ್ನು ಗಾಂಧೀಜಿ ನೀಡಿದ್ದರು, ಇದರಂತೆ ನಾವು ಬಟ್ಟೆಗಳು ಕರಕುಶಲವಸ್ತುಗಳು, ಮಣ್ಣಿನ ಪಾತ್ರೆಗಳು ಇವುಗಳನ್ನು ಖರೀದಿಸುವ ಮೂಲಕ ಜನರಲ್ಲಿ ಗ್ರಾಮದ್ಯೋಗದ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುತ್ತೆವೆ ಎಂದರು. ಈ ಸಮಯದಲ್ಲಿ ಜಿಲ್ಲಾ ಬಿಜೆಪಿ ಸಹ ಸಂಚಾಲಕ ನರೇಂದ್ರ, ಮಾಧ್ಯಮ ವಕ್ತಾರ ದಗ್ಗೆ ಪ್ರಕಾಶ್, ನಾಗರಾಜ್ ಬೇದ್ರೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್/ಪ್ರಬಿ/ ಎಂವೈ


 rajesh pande