Custom Heading

ಅಜಾದಿ ಕಾ ಅಮೃತ್ ಮಹೋತ್ಸವ - ಸೆ.26ರಿಂದ ದಾಲ್ ಸರೋವರದ ಮೇಲೆ ಏರ್ ಶೋ
ನವದೆಹಲಿ, 15 ಸೆಪ್ಟೆಂಬರ್ (ಹಿ.ಸ): ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಯ ಭಾಗವಾಗಿ ಶ್ರೀನಗರದ ದಾಲ್ ಸರೋವರದ ಮೇಲೆ ಏರ್
ಏರ್ ಶೋ


ನವದೆಹಲಿ, 15 ಸೆಪ್ಟೆಂಬರ್ (ಹಿ.ಸ): ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಯ ಭಾಗವಾಗಿ ಶ್ರೀನಗರದ ದಾಲ್ ಸರೋವರದ ಮೇಲೆ ಏರ್ ಶೋ ನಡೆಸಲು ಭಾರತೀಯ ವಾಯುಪಡೆ ಸಜ್ಜಾಗಿದೆ. ಸೆಪ್ಟೆಂಬರ್ 26ರಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.

ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯದ ಯುವಕರು ಐಎಎಫ್ ಸೇರಲು ಪ್ರೇರೇಪಿಸುವ ಉದ್ದೇಶದಿಂದ ಈ ಏರ್ ಶೋ ಆಯೋಜಿಸಲಾಗಿದ್ದು, ಇದರಲ್ಲಿ ವಿವಿಧ ಶಾಲಾ-ಕಾಲೇಜುಗಳ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಐಎಎಫ್ ಅಧಿಕಾರಿ ಪಾಂಡುರಂಗ ಕೆ.ಪೋಲ್, ಕಣಿವೆ ನಾಡಿನ ಯುವಕರನ್ನು ವಾಯುಪಡೆಗೆ ಸೆಳೆಯುವುದು ಇದರ ಉದ್ದೇಶ. ಇದರ ಜೊತೆಗೆ, ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದರು. 'ನಿಮ್ಮ ಕನಸುಗಳಿಗೆ ರೆಕ್ಕೆ ನೀಡಿ' ಎಂಬುದು ಏರ್ಶೋ ಮುಖ್ಯ ಥೀಮ್ ಆಗಿದೆ. ವಿದ್ಯಾರ್ಥಿಗಳ ಜೊತೆಗೆ ಸುಮಾರು 700 ಶಿಕ್ಷಕರು ಈ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್


 rajesh pande