2023ಕ್ಕೆ ಭಾರತದ ಗಗನಯಾನ ಮಿಷನ್ ಆರಂಭ ಸಾಧ್ಯತೆ - ಸಚಿವ ಜಿತೇಂದ್ರ ಸಿಂಗ್
ನವದೆಹಲಿ, 15 ಸೆಪ್ಟೆಂಬರ್ (ಹಿ.ಸ): ಭಾರತದ ಗಗನಯಾನ ಯೋಜನೆ ಮುಂದಿನ ವರ್ಷಾಂತ್ಯ ಅಥವಾ 2023ರ ಆರಂಭದ ವೇಳೆಗೆ ಶುರುವಾಗು
ಸಚಿವ ಜಿತೇಂದ್ರ ಸಿಂಗ್


ನವದೆಹಲಿ, 15 ಸೆಪ್ಟೆಂಬರ್ (ಹಿ.ಸ): ಭಾರತದ ಗಗನಯಾನ ಯೋಜನೆ ಮುಂದಿನ ವರ್ಷಾಂತ್ಯ ಅಥವಾ 2023ರ ಆರಂಭದ ವೇಳೆಗೆ ಶುರುವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

2022ರ ವೇಳೆಗೆ ಉಡಾವಣೆಗೆ ನಿಗದಿಯಾಗಿದ್ದ ಈ ಯೋಜನೆ ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಇದು ಭೂಮಿಯ ಕೆಳ ಕಕ್ಷೆಯಲ್ಲಿ ಮಾನವಸಹಿತ ಕಾರ್ಯಾಚರಣೆ ಆರಂಭಿಸುವ ಗುರಿ ಹೊಂದಿದೆ.

ನಾವು ಇದನ್ನು ನಿಜವಾಗಿಯೂ ಮಾಡಬಹುದಿತ್ತು. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸಮಯದಲ್ಲಿ ನಾವು ಅದನ್ನು ಯೋಜಿಸಿದ್ದೆವು. ಆದರೆ ಕೋವಿಡ್ನಿಂದಾಗಿ ಅನಿವಾರ್ಯವಾದ ವಿಳಂಬದಿಂದಾಗಿ ಕಾರ್ಯಾಚರಣೆ ತಡವಾಗಿದೆ. ಬಹುಶಃ ಮುಂದಿನ ವರ್ಷಾಂತ್ಯದ ವೇಳೆಗೆ ಅಥವಾ 2023ರ ಆರಂಭದ ವೇಳೆಗೆ ನಾವಿದನ್ನು ಸಾಧಿಸುತ್ತೇವೆಂಬ ಭರವಸೆ ಇದೆ ಎಂದು ಸಚಿವರು ಹೇಳಿದರು.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಐಸಿಸಿಐ) ಆಯೋಜಿಸಿದ್ದ ಭಾರತ-ಓಷಿಯಾನಿಯಾ ಬಾಹ್ಯಾಕಾಶ ತಂತ್ರಜ್ಞಾನ ಪಾಲುದಾರಿಕೆಗಳ ಭವಿಷ್ಯದ ಕುರಿತ ವೆಬ್ನಾರ್ ಉದ್ದೇಶಿಸಿ ಜಿತೇಂದ್ರ ಸಿಂಗ್ ಈ ಬಗ್ಗೆ ತಿಳಿಸಿದರು.

ಬಾಹ್ಯಾಕಾಶ ತಂತ್ರಜ್ಞಾನವು ಪ್ರತಿಯೊಂದು ವಲಯದಲ್ಲಿಯೂ ವಿಶೇಷ ಪಾತ್ರ ಹೊಂದಿದೆ. ವಿಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವು ತುಂಬಾ ಉಪಯುಕ್ತವಾಗಿದೆ ಎಂದು ಅವರು ಹೇಳಿದರು. ಸರ್ಕಾರದ ಪ್ರಕಾರ, ಶೈಕ್ಷಣಿಕ ಸಂಸ್ಥೆಗಳಿಂದ ನಾಲ್ಕು ಜೈವಿಕ ಮತ್ತು ಎರಡು ಭೌತಿಕ ವಿಜ್ಞಾನ ಸಂಬಂಧಿತ ಮೈಕ್ರೊಗ್ರಾವಿಟಿ ಪ್ರಯೋಗಗಳನ್ನು ಗಗನಯಾನ ಕಾರ್ಯಕ್ರಮದ ಮಾನವರಹಿತ ಕಾರ್ಯಾಚರಣೆಗೆ ಅಂತಿಮ ಪಟ್ಟಿ ಸಿದ್ದಪಡಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್.ಎಂ.ಎಸ್.ಯ.ಮ


 rajesh pande