ಟೀಂ ಇಂಡಿಯಾದಿಂದ ದಕ್ಷಿಣ ಅಫ್ರಿಕಾ ಪ್ರವಾಸದ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ
3 ಡಿಸೆಂಬರ್(ಹಿ.ಸ) ಆ್ಯಂಕರ್ : ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿರುವ ಕೋವಿಡ್ನ ಹೊಸ ರೂಪಾಂತರ ಒಮಿಕ್ರಾನ್ ಎಲ್ಲ ದೇಶಗಳ
ಟೀಂ ಇಂಡಿಯಾದಿಂದ ದಕ್ಷಿಣ ಅಫ್ರಿಕಾ ಪ್ರವಾಸದ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ


3 ಡಿಸೆಂಬರ್(ಹಿ.ಸ) ಆ್ಯಂಕರ್ : ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿರುವ ಕೋವಿಡ್ನ ಹೊಸ ರೂಪಾಂತರ ಒಮಿಕ್ರಾನ್ ಎಲ್ಲ ದೇಶಗಳಲ್ಲೂ ಈಗಾಗಲೇ ಆತಂಕ ಮೂಡಿಸಿದೆ. ಈ ಹಿಂದಿನ ಸೋಂಕಿಗಿಂತಲೂ ಒಮಿಕ್ರಾನ್ ವೇಗವಾಗಿ ಹರಡುವ ಸಾಧ್ಯತೆ ಇದೆ ಎಂಬ ಕಾರಣಕ್ಕಾಗಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕಾರ್ಮೋಡ ಅವರಿಸಿದೆ.

ಭಾರತೀಯ ಕ್ರಿಕೆಟ್ ಮಂಡಳಿ ನಾಳೆ 90ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಲಿದ್ದು, ಈ ವೇಳೆ ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಸೇರಿದಂತೆ ಅನೇಕ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಟೀಂ ಇಂಡಿಯಾ ಡಿಸೆಂಬರ್ 9ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಾಗಿದೆ. ಆದರೆ, ಹರಿಣಗಳ ನಾಡಿನಲ್ಲಿ ರೂಪಾಂತರ ಒಮಿಕ್ರಾನ್ ಹೆಚ್ಚಾಗಿ ಕಂಡು ಬಂದಿರುವ ಕಾರಣ, ಬಿಸಿಸಿಐ ನಾಳೆ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

ಇದೇ

ವಿಚಾರವಾಗಿ ನಿನ್ನೆ ಮಾತನಾಡಿರುವ ವಿರಾಟ್ ಕೊಹ್ಲಿ, ಈ ವಿಚಾರವಾಗಿ ಈಗಾಗಲೇ ರಾಹುಲ್ ಭಾಯ್ ಬಿಸಿಸಿಐ ಜೊತೆ ಮಾತುಕತೆ ಆರಂಭಿಸಿದ್ದು, ಮುಂದಿನ ಎರಡು ದಿನಗಳಲ್ಲಿ ಪ್ರವಾಸದ ಬಗ್ಗೆ ಸಂಪೂರ್ಣವಾದ ಸ್ಪಷ್ಟತೆ ಸಿಗಲಿದೆ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೀಂ ಇಂಡಿಯಾ ಮೂರು ಟೆಸ್ಟ್ ಪಂದ್ಯ, ಮೂರು ಏಕದಿನ ಹಾಗೂ ನಾಲ್ಕು ಟಿ-20 ಪಂದ್ಯಗಳಲ್ಲಿ ಭಾಗಿಯಾಗಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande