58 ಸಾವಿರ ಪಾಯಿಂಟ್ಸ್ಗಿಂತ ಕೆಳಗಿಳಿದ ಸೆನ್ಸೆಕ್ಸ್
3 ಡಿಸೆಂಬರ್(ಹಿ.ಸ): ಆ್ಯಂಕರ್ : ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 3ನೇ ತಾರೀಕಿನ
58 ಸಾವಿರ ಪಾಯಿಂಟ್ಸ್ಗಿಂತ ಕೆಳಗಿಳಿದ ಸೆನ್ಸೆಕ್ಸ್


3 ಡಿಸೆಂಬರ್(ಹಿ.ಸ): ಆ್ಯಂಕರ್ :

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 3ನೇ ತಾರೀಕಿನ ಶುಕ್ರವಾರ ಭಾರೀ ಇಳಿಕೆ ಆಗಿದೆ. ಅಂದಹಾಗೆ ಸೆನ್ಸೆಕ್ಸ್ 58 ಸಾವಿರ ಪಾಯಿಂಟ್ಸ್ಗಿಂತ ಕೆಳಗೆ ಇಳಿದಿದೆ.

ಷೇರುಪೇಟೆಗೆ ವಾರಾಂತ್ಯದ ದಿನವಾದ ಶುಕ್ರವಾರದ ಕೊನೆ ಸೆನ್ಸೆಕ್ಸ್ 764.83 ಪಾಯಿಂಟ್ಸ್ ಅಥವಾ ಶೇ 1.31 ಇಳಿಕೆ ಕಂಡು 57,696.46 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿದಿದೆ. ಇನ್ನು ನಿಫ್ಟಿ ಸೂಚ್ಯಂಕವು 205 ಪಾಯಿಂಟ್ಸ್ ಅಥವಾ ಶೇ 1.18ರಷ್ಟು ಕುಸಿತ ಕಂಡು, 17,196.70 ಪಾಯಿಂಟ್ಸ್ನೊಂದಿಗೆ ವಹಿವಾಟು ಚುಕ್ತಾ ಮಾಡಿದೆ. 1722 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1453 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ. ಇನ್ನು 137 ಕಂಪೆನಿಗಳ ಷೇರಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕ್ಯಾಪಿಟಲ್ ಗೂಡ್ಸ್ ಹೊರತುಪಡಿಸಿ ಎಲ್ಲ ವಲಯದ ಸೂಚ್ಯಂಕಗಳು ಇಳಿಕೆಯಲ್ಲೇ ದಿನಾಂತ್ಯ ಮುಗಿಸಿದೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಮಹತ್ವದ ಬದಲಾವಣೆಗಳೇನೂ ಆಗಿಲ್ಲ. ವಿಶ್ಲೇಷಕರ ಅಭಿಪ್ರಾಯ ಪ್ರಕಾರ, ಮುಂದಿನ ವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿಯ ಬಗ್ಗೆ ಹೂಡಿಕೆದಾರರು ಎಚ್ಚರಿಕೆ ವಹಿಸಿದ್ದಾರೆ. ಜತೆಗೆ ಭಾರತದಲ್ಲಿ ಒಮಿಕ್ರಾನ್ ಪ್ರಕರಣ ವರದಿ ಆದ ಮೇಲೆ ಆತಂಕ ಮತ್ತೂ ಹೆಚ್ಚಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande