Custom Heading

ಕಂಗನಾ ರಣಾವತ್ ಕಾರಿನ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು
3 ಡಿಸೆಂಬರ್(ಹಿ.ಸ): ಆ್ಯಂಕರ್ : ಕಂಗನ ರಣಾವತ್ ಇದ್ದಲ್ಲಿ ವಿವಾದಕ್ಕೇನು ಬರ ಇರುವುದಿಲ್ಲ. ಅವರು ಅದ್ಭುತ ನಟಿ ಎಂಬುದು ಸ
ಕಂಗನಾ ರಣಾವತ್ ಕಾರಿನ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು


3 ಡಿಸೆಂಬರ್(ಹಿ.ಸ): ಆ್ಯಂಕರ್ :

ಕಂಗನ ರಣಾವತ್ ಇದ್ದಲ್ಲಿ ವಿವಾದಕ್ಕೇನು ಬರ ಇರುವುದಿಲ್ಲ. ಅವರು ಅದ್ಭುತ ನಟಿ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಇದರ ಜತೆಗೆ ಕಿರಿಕ್ ಮಾಡಿಕೊಳ್ಳುವ ಮೂಲಕವೂ ಸಾಕಷ್ಟು ಸುದ್ದಿಯಾಗುತ್ತಾರೆ. ವಿವಾದಾತ್ಮಕ ಹೇಳಿಕೆ ಕೊಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ. ಟ್ವಿಟರ್ನಲ್ಲಿ ಅವರ ಖಾತೆ ರದ್ದಾದರೂ, ಇನ್ಸ್ಟಾಗ್ರಾಮ್ನಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದನ್ನು ಮುಂದುವರಿಸಿದ್ದಾರೆ. ಈಗ ಕಂಗನಾ ಕಾರಿನ ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದ್ದರೆ.

ಕಂಗನಾ ಅವರು ಇಂದು (ಡಿಸೆಂಬರ್ 3) ಪಂಜಾಬ್ಗೆ ತೆರಳಿದ್ದರು. ರೈತ ಪ್ರತಿಭಟನಾಕಾರರ ವಿರುದ್ಧ ಕಂಗನಾ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಈ ಕಾರಣಕ್ಕೆ ಅವರು ಪಂಜಾಬ್ಗೆ ಎಂಟ್ರಿ ಪಡೆಯುತ್ತಿದ್ದಂತೆ ಅವರ ಕಾರಿನ ಮೇಲೆ ದಾಳಿ ನಡೆದಿದೆ. ಇದನ್ನು ಕಂಗನಾ ಖಂಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande