Custom Heading

ನೇಪಾಳ - ಕೆಟ್ಟು ನಿಂತ ವಿಮಾನವನ್ನು ತಳ್ಳಿದ ಪ್ರಯಾಣಿಕರು
3 ಡಿಸೆಂಬರ್(ಹಿ.ಸ): ಬೈಕ್, ಕಾರು, ಬಸ್ ಕೆಟ್ಟಾಗ ನಾವು ಅದನ್ನು ತಳ್ಳಿ ಬಳಿಕ ಚಲಾಯಿಸುವುದನ್ನು ನೋಡಿರುತ್ತೇವೆ. ಆದರೆ
ನೇಪಾಳ -  ಕೆಟ್ಟು ನಿಂತ ವಿಮಾನವನ್ನು ತಳ್ಳಿದ ಪ್ರಯಾಣಿಕರು


3 ಡಿಸೆಂಬರ್(ಹಿ.ಸ): ಬೈಕ್, ಕಾರು, ಬಸ್ ಕೆಟ್ಟಾಗ ನಾವು ಅದನ್ನು ತಳ್ಳಿ ಬಳಿಕ ಚಲಾಯಿಸುವುದನ್ನು ನೋಡಿರುತ್ತೇವೆ. ಆದರೆ ಕೆಟ್ಟು ನಿಂತ ವಿಮಾನವನ್ನ ಪ್ರಯಾಣಿಕರು ತಳ್ಳಿರುವ ಅಪರೂಪದಲ್ಲಿ ಅಪರೂಪದ ಘಟನೆ ನೇಪಾಳದಲ್ಲಿ ನಡೆದಿದೆ.

ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ತಾರಾ ಏರ್ಲೈನ್ಸ್ಗೆ ಸೇರಿದ ವಿಮಾನದ ಟೈರ್ ಸ್ಫೋಟಗೊಂಡಿದೆ. ಹೀಗಾಗಿ, ವಿಮಾನಕ್ಕೆ ರನ್ವೇನಿಂದ ಮುಂದಕ್ಕೆ ಸಾಗಲು ಆಗಲಿಲ್ಲ. ಈ ವೇಳೆ ಪ್ರಯಾಣಿಕರೇ ಕೆಳಗಿಳಿದು ವಿಮಾನವನ್ನು ಮುಂದಕ್ಕೆ ತಳ್ಳಿದ್ದಾರೆ. ಇವರಿಗೆ ಭದ್ರತಾ ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ.

ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ನಗೆ ಚಟಾಕಿ ಹಾರಿಸುತ್ತಿದ್ದಾರೆ. 'ಬಹುಶಃ ಇದು ನಮ್ಮ ನೇಪಾಳದಲ್ಲಿ ಮಾತ್ರ' ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande