Custom Heading

ಕಟ್ಟಡ ಕಾರ್ಮಿಕರ ಯಶಸ್ವಿ ಎರಡನೇ ದಿನದ ಹೋರಾಟ
ವಿಜಯನಗರ, 3 ಡಿಸೆಂಬರ್(ಹಿ.ಸ): ಆ್ಯಂಕರ್ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟ
ಕಟ್ಟಡ ಕಾರ್ಮಿಕರ ಯಶಸ್ವಿ ಎರಡನೇ ದಿನದ ಹೋರಾಟ


ವಿಜಯನಗರ, 3 ಡಿಸೆಂಬರ್(ಹಿ.ಸ):

ಆ್ಯಂಕರ್ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಇಂದು ಕೂಡ ಅಖಿಲ ಭಾರತ ಮುಷ್ಕರದ ಅಂಗವಾಗಿ ರಾಜ್ಯದಾದ್ಯಂತ ನಿರ್ಮಾಣ ಕಾರ್ಮಿಕರು ಪ್ರತಿಭಟನೆ ಗಳ ಯಶಸ್ವಿಯಾಗಿ ನಡೆಸಿದರು ಎರೆಉ ದಿನಗಳ ಹೋರಾಟದಲ್ಲಿ ಸಾವಿರಾರು ಕಾರ್ಮಿಕರು ಭಾಗವಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಬಯಲುಗೊಳಿಸಿದ್ದಾರೆ ಮತ್ತು ಕೊವೀಡ್ ಮತ್ತು ಕೊವಿಡೋತ್ತರ ಕಾಲಾವಧಿಯಲ್ಲಿ ಕಾರ್ಮಿಕರಿಗೆ ನೆರವು ನೀಡುವ ನೆಪದಲ್ಲಿ ನೂರಾರು ಕೋಟಿ ಹಣ ಲೂಟಿ ಮಾಡಿರುವ ಕಾರ್ಮಿಕ ಸಚಿವರ, ಅಧಿಕಾರಿಗಳ ಭ್ರಷ್ಟತೆಯನ್ನು ವ್ಯಾಪಕ ಪ್ರಚಾರ ಮಾಡಿದ್ದಾರೆ.

1996 ಕಟ್ಟಡ ಕಾರ್ಮಿಕ ಕಾನೂನು, ಸೆಸ್ ಕಾನೂನು ಹಾಗೂ ಅಂತರಾಜ್ಯ ವಲಸೆ ಕಾರ್ಮಿಕ ಕಾನೂನು1979. ಉಳಿಯಬೇಕು.ಕಟ್ಟಡ ಸಾಮಾಗ್ರಿಗಳ ಮೇಲೆ ವಿಧಿಲಾಗುವ ಜಿ.ಎಸ್.ಟಿ ರದ್ದು ಮಾಡಬೇಕು ತೈಲೊತ್ಪನ್ನಗಳ ಬೆಲೆ ನಿಯಂತ್ರಿಸಬೇಕು ಹಾಗೂ ಕೊವೀಡ್ ಸಮಯದಲ್ಲಿ ಆಗಿರುವ ಮಂಡಳಿ ಎಲ್ಲ ಖರೀದಿಗಳು ತನಿಖೆಯಾಗಬೇಕು ಹಾಗೂ ಮಂಡಳಿ ಘೋಷಿಸಿರುವಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎನ್ನುವ ಬೇಡಿಕೆಗಳಿಗಾಗಿ Construction workers federation of India(CWFI) ಕರೆ ನೀಡಿತ್ತು.

ಬೆಂಗಳೂರಿನ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಮುಂದೆ ಬೆಂಗಳೂರು ದಕ್ಷಿಣ ಮತ್ರು ಉತ್ತರ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ನೂತನವಾಗಿ ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ಶ್ರೀ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಡಳಿ ಜಂಟಿ ಕಾರ್ಯದರ್ಶಿ ಡಾ ಶಿವಪುತ್ರ ಬಾಬುರಾವ್, ಹಿರಿಯ ಅಧಿಕಾರಿಗಳಾದ ಶ್ರೀ ಜಾನ್ ಸನ್, ಆಂಜಿನಪ್ಪ ಉಪಸ್ಥಿತರಿದ್ದರು. ಸಂಘಟನೆ ಮುಖಂಡರಾದ ರಾಜ್ಯ ಅಧ್ಯಕ್ಷರಾದ ವೀರಸ್ವಾಮಿ, ದಕ್ಷಿಣ ಜಿಲ್ಲಾ ಅಧ್ಯಕ್ಷರಾದ ಕೆ.ಎಲ್ ಲಕ್ಷ್ಮೀ, ಕಾರ್ಯದರ್ಶಿ ಲಿಂಗರಾಜ್,ಉತ್ತರ ಜಿಲ್ಲಾ ಕಾರ್ಯದರ್ಶಿ ಹರೀಶ ಕುಮಾರ್, ಖಜಾಂಚಿ ಹನುಮಂತ ರಾವ್ ಹವಾಲ್ದಾರ್, ಉಪಾಧ್ಯಕ್ಷ ರಮೇಶ್ ಮೊದಲಾದವರಿದ್ದರು.

ಕಲುಬರಗಿ ಜಿಲ್ಲಾಧಿಕಾರಿಗಳ ಕಚೇರಿ ಎಂದು ನಿರ್ಮಾಣ ಕಾರ್ಮಿಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಜಿಲ್ಲಾಧ್ಯಕ್ಚ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ನಾಗಯ್ಯಸ್ವಾಮಿ, ಜಂಟಿ ಕಾರ್ಯದರ್ಶಿ ಹನುಮಂತ ಪೂಜಾರಿ, ಯಶವಂತ ಪಾಟೀಲ ಬಾಬು ಹೊನ್ನಳ್ಳಿ ಬಾಗವಹಿಸಿದ್ದರು.

ವಿಜಯನಗರ ಜಿಲ್ಲಾಧಿಕಾರಿಗಳ ಚಲೋ ಹೋರಾಟದಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿ ಕಾರ್ಮಿಕ ನಿರೀಕ್ಷಕ ಭೂಪಾಲ್ ಅವರಿಗೆ ಮನವಿ ಸಲ್ಲಿಸಿದರು ಜಿಲ್ಲಾಧ್ತಕ್ಷ ಯಲ್ಲಾಲಿಂಗ,ತಾಲೂಕು ಅಧ್ಯಕ್ಷ ಗೋಪಾಲ್, ಕಾರ್ಯದರ್ಶಿ ರಾಮಾಂಜಿ ದಲಿತ ಹಕ್ಕುಗಳಸಮಿತಿಯ ನಾಯಕ ಜಂಭಯ್ಯ ನಾಯಕ, ಡಿವೈಎಫ್.ಐ ನಾಯಕ ರಮೇಶ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಮೊದಲಾದವರು ಮಾತನಾಡಿದರು. ಕೊಪ್ಪಳ ಜಿಲ್ಲೆಯಲ್ಲಿ ನೂರಾರು ಕಾರ್ಮಿಕರು ಜಿಲ್ಲಾಧಿಕಾರಿಗಳ ಮನವಿ ಸಲ್ಲಿಸಿದರು ರಾಜ್ಯ ಸಹ ಕಾರ್ಯದರ್ಶಿ ಕಾಶಿಂಸಾಬ್ ಸರ್ಧಾರ್ ಸೇರಿ ಹಲವಾರು ಭಾಗವಹಿಸಿದ್ದರು

ಇದೇ ರೀತಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು,ದಾವಣಗೆರೆ ಉತ್ತರಕನ್ನಡ ಜಿಲ್ಲೆ ಹಳಿಯಾಳ,ಅಂಕೋಲ ಉಡುಪಿಯ ಬ್ರಹ್ಮಾವರ, ಸೇರಿ ಹಲವಾರು ಕಡೆ ನೂರಾರು ಕಾರ್ಮಿಕರಿಗೆ ಪ್ರತಿಭಟನೆ ನಡೆಸಿದ್ದಾರೆ.

ಎರಡು ದಿನಗಳ ಈ ಪ್ರತಿಭಟನೆ ಯನ್ನು ಯಶಸ್ವಿಗೊಳಿಸಿದ ಎಲ್ಲ ಕಾರ್ಮಿಕರಿಗೂ ಸಿಐಟಿಯು ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಅಭಿನಂದನೆ ಸಲ್ಲಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande