Custom Heading

ಧರ್ಮ ನಿಂದನೆ ಆರೋಪ: ಪಾಕಿಸ್ತಾನದಲ್ಲಿ ಶ್ರೀಲಂಕಾ ಪ್ರಜೆಯ ಬರ್ಬರ ಹತ್ಯೆ
3 ಡಿಸೆಂಬರ್(ಹಿ.ಸ): ಆ್ಯಂಕರ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮ ನಿಂದನೆಯ ಆರೋಪದ ಮೇಲೆ ಶ್ರೀಲಂಕಾ ಪ್ರಜೆಯ
ಧರ್ಮ ನಿಂದನೆ ಆರೋಪ: ಪಾಕಿಸ್ತಾನದಲ್ಲಿ ಶ್ರೀಲಂಕಾ ಪ್ರಜೆಯ ಬರ್ಬರ ಹತ್ಯೆ


3 ಡಿಸೆಂಬರ್(ಹಿ.ಸ): ಆ್ಯಂಕರ್ :

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮ ನಿಂದನೆಯ ಆರೋಪದ ಮೇಲೆ ಶ್ರೀಲಂಕಾ ಪ್ರಜೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ ಗುಂಪೊಂದು ಶುಕ್ರವಾರ ಈ ಕೃತ್ಯ ಎಸಗಿದೆ. 40 ವರ್ಷದ ಪ್ರಿಯಾಂತ ಕುಮಾರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪ್ರಿಯಾಂತ್ ಕುಮಾರ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ಕೋಟ್ ನ ಗೋಡೆಯಲ್ಲಿದ್ದ ಹ್ರೀಕ್ –ಇ– ಲಬ್ಬೈಕ್ (ಟಿಎಲ್ಪಿ) ಬಿತ್ತಿಪತ್ರವನ್ನು ಕಿತ್ತು ಕಸದಬುಟ್ಟಿಗೆ ಎಸೆದು, ಗೋಡೆಯ ಮೇಲೆ ಕುರಾನ್ ಪದ್ಯಗಳನ್ನು ಕೆತ್ತಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದ ಗುಂಪೊಂದು ಪ್ರಯಾಂತ್ ಕುಮಾರ್ ಅವರನ್ನು ಹತ್ಯೆಗೈದಿದೆ. ಪ್ರಯಾಂತ್ ಅವರು ಸಿಯಾಲ್ ಕೋಟ್ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವಕರ ಗುಂಪು ಎಕಾಏಕಿ ನುಗ್ಗಿ ಪ್ರಿಯಾಂತ್ ಅವರನ್ನು ಕಾರ್ಖಾನೆಯಿಂದ ಹೊರಗೆ ಎಳೆದುತಂದು ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡ ಪ್ರಿಯಾಂತ್ ಕುಮಾರ್ ಅವರನ್ನು ಪೊಲಿಸರು ಸ್ಥಳಕ್ಕೆ ಆಗಮಿಸುವ ಮೊದಲೇ ಬೆಂಕಿ ಹಚ್ಚಿ ಸುಟ್ಟಿದ್ದರು. ಇದೇ ವೇಳೆ ಕಾರ್ಖಾನೆಯ ಹೊರಗೆ ಟಿಎಲ್ ಪಿ ಬೆಂಬಲಿತ ನೂರಾರು ಜನರು ಜಮಾಯಿಸಿದ್ದರು.

ಹಿಂದೂಸ್ತಾನ್ ಸಮಾಚಾರ್


 rajesh pande