ದೀಪಾವಳಿ ಹಬ್ಬಕ್ಕೆ ಚೆಂಡು ಹೂವಿಗೆ ಹೆಚ್ಚಿದ ಬೇಡಿಕೆ; ರೈತರ ಮೊಗದಲ್ಲಿ ಮಂದಹಾಸ
27 ಅಕ್ಟೋಬರ್ (ಹಿ.ಸ): ಆ್ಯಂಕರ್ : ಚೆಂಡು ಹೂವಿಲ್ಲದೇ ದೀಪಾವಳಿ ಹಬ್ಬ ಕಳೆಗಟ್ಟುವುದೇ ಇಲ್ಲ. ಶೃಂಗಾರಕ್ಕೆ ಇದು ಬೇಕೆ ಬೇ
ದೀಪಾವಳಿ ಹಬ್ಬಕ್ಕೆ ಚೆಂಡು ಹೂವಿಗೆ ಹೆಚ್ಚಿದ ಬೇಡಿಕೆ; ರೈತರ ಮೊಗದಲ್ಲಿ ಮಂದಹಾಸ


27 ಅಕ್ಟೋಬರ್ (ಹಿ.ಸ): ಆ್ಯಂಕರ್ :

ಚೆಂಡು ಹೂವಿಲ್ಲದೇ ದೀಪಾವಳಿ ಹಬ್ಬ ಕಳೆಗಟ್ಟುವುದೇ ಇಲ್ಲ. ಶೃಂಗಾರಕ್ಕೆ ಇದು ಬೇಕೆ ಬೇಕು. ದೀಪಗಳ ಹಬ್ಬದ ಪ್ರಮುಖ ಆಕರ್ಷಣೆಯೇ ಇದಾಗಿದ್ದು, ಬೀದರ್ ಜಿಲ್ಲೆಯ ಸುತ್ತ ಮುತ್ತಲಿನ ಗ್ರಾಮಗಳ ಹೊಲದಲ್ಲಿ ಬಣ್ಣ ಬಣ್ಣದ ಹೂವುಗಳು ಜನರನ್ನು ಸೆಳೆಯುತ್ತಿದೆ. ದೀಪಾವಳಿ ಆಚರಣೆಗೆ ದಿನಗಣನೆ ಶುರುವಾಗಿದ್ದು, ಝಗಮಗಿಸುವ ಬೆಳಕಿನ ಹಬ್ಬದ ಸಡಗರಕ್ಕೆ ಚೆಂಡು ಹೂವಿನ ಚೆಲವು ಮತ್ತಷ್ಟು ಇಮ್ಮಡಿಗೊಳಿಸಲಿದೆ. ಅತಿವೃಷ್ಠಿ ನಡುವೇಯೂ ಚೆಂಡು ಹೂವಿನ ಪರಿಮಳ ಎಲ್ಲೆಡೆ ಪಸರಿಸುತ್ತಿದೆ.

ದೀಪಾವಳಿಗೆ ಅಂತಾ ಪ್ರತಿಯೊಬ್ಬ ರೈತ ತನ್ನ ಹೊಲದಲ್ಲಿ ಗುಂಟೆಯಷ್ಟಾದರೂ ಹೂವು ಬೆಳೆದು ಲಾಭದ ನಿರಿಕ್ಷೆಯಲ್ಲಿದ್ದಾರೆ. ಮಲೆನಾಡು ಅಂದರೆ ಹೂಗಳ ತವರೂರು ಎನ್ನುತ್ತಾರೆ. ಏಕೆಂದರೆ ಅಲ್ಲಿ ಹೂಗಳ ಕಲವರ ಜೋರಾಗಿರುತ್ತದೆ. ಆದರೆ ಈಗ ಗಡಿ ಜಿಲ್ಲೆ ಬೀದರ್ನಲ್ಲಿಯು ಅತಿವೃಷ್ಠಿಯ ನಡುವೆ ರೈತರು ಬಗೆಬಗೆಯ ಹೂವುಗಳನ್ನು ಬೆಳೆಸಿದ್ದು ಹೂವುಗಳ ಸುಗಂಧ ಎಲ್ಲೆಡೆ ಪಸರಿಸಿದೆ.

ದೀಪಾವಳಿ ಹಬ್ಬದಲ್ಲಿ ಅಂಗಡಿ, ಕಾರ್ಖಾನೆ, ಲಕ್ಷ್ಮೀ ಪೂಜೆ, ವಾಹನ ಅಲಂಕಾರಕ್ಕೆ ಚೆಂಡು ಹೂ ಅಗ್ರಸ್ಥಾನ ಪಡೆದುಕೊಂಡಿದೆ. ಇದರ ಹಿಂದೆಯು, ಗುಲಾಬಿ, ಸೇವಂತಿಯೂ ನಾವೇನು ಕಮ್ಮಿಯಿಲ್ಲ ಎನ್ನುವಂತೆ ವಿಶೇಷ ಸ್ಥಾನದಲ್ಲಿದೆ. ಈ ಹೂವುಗಳನ್ನು ಮಾಲೆಗಳನ್ನಾಗಿ ವಾಹನ, ಅಂಗಡಿ ಮುಂಗಟ್ಟುಗಳಿಗೆ ಬಳಸುತ್ತಾರೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಈ ಹೂವಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಈ ವರ್ಷ ಅತೀವೃಷ್ಟಿಯಿಂದಾಗಿ ಸಾಲ ಮಾಡಿ ಬಿತ್ತಿದ ಮಳೆಯಿಂದಾಗಿ ಬೆಳೆ ಹಾಳಾಗಿ ಸಾಲದ ಕೂಪಕ್ಕೆ ಸಿಲುಕಿದ್ದ ರೈತರಿಗೆ ಪುಷ್ಪ ಕೃಷಿ ವರದಾನವಾಗುವ ಆಸೆ ಮೂಡಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande