ಟೆಲಿಯಾ ಭೋಲಾ ಮೀನು 36 ಲಕ್ಷ ರೂಪಾಯಿಗೆ ಮಾರಾಟ
27 ಅಕ್ಟೋಬರ್ (ಹಿ.ಸ): ಆ್ಯಂಕರ್ : ಪಶ್ಚಿಮ ಬಂಗಾಳದ ಸುಂದರ್ಬನ್ ನದಿಯಲ್ಲಿ ಬಲೆಯಲ್ಲಿ ಸಿಕ್ಕ ಟೆಲಿಯಾ ಭೋಲಾ ಮೀನಿನಿಂದ ಮ
ಟೆಲಿಯಾ ಭೋಲಾ ಮೀನು 36 ಲಕ್ಷ ರೂಪಾಯಿಗೆ ಮಾರಾಟ


27 ಅಕ್ಟೋಬರ್ (ಹಿ.ಸ): ಆ್ಯಂಕರ್ :

ಪಶ್ಚಿಮ ಬಂಗಾಳದ ಸುಂದರ್ಬನ್ ನದಿಯಲ್ಲಿ ಬಲೆಯಲ್ಲಿ ಸಿಕ್ಕ ಟೆಲಿಯಾ ಭೋಲಾ ಮೀನಿನಿಂದ ಮೀನುಗಾರರ ಅದೃಷ್ಟವೇ ಬದಲಾಗಿದೆ. ಸುಮಾರು 36 ಲಕ್ಷ ರೂಪಾಯಿಗೆ ಮೀನು ಮಾರಾಟವಾಗಿದೆ.

ಮೀನುಗಾರರು ನದಿಯಲ್ಲಿ ಬಲೆ ಹಾಕಿದರೆ ಸಾಕು ಗುಂಪು ಗುಂಪು ಮೀನುಗಳು ಬಲೆಗೆ ಬಿದ್ದಿರುತ್ತಿತ್ತು. ಆದರೆ ಅಂದು ಮಾತ್ರ ಮೀನುಗಾರರ ಅದೃಷ್ಟವೇ ಬದಲಾಗುವ ದಿನವಾಗಿತ್ತು. ಎಲ್ಲಾ ದಿನದಂತೆಯೇ ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಿದ್ದಾನೆ. ಬಲೆಗೆ ಸಿಕ್ಕಿದ ದೈತ್ಯ ಮೀನು ನೋಡಿ ಮೀನುಗಾರರು ಆಶ್ಚರ್ಯಚಕಿತರಾದರು. ಅದರಲ್ಲಿಯೂ ಬಲೆಗೆ ಸಿಕ್ಕ ಟೆಲಿಯಾ ಭೋಲಾ ಮೀನಿನಿಂದ ಮೀನುಗಾರರ ಅದೃಷ್ಟವೇ ಬದಲಾಗಿದೆ.

ಪಶ್ಚಿಮ ಬಂಗಾಳದ ಸುಂದರ್ಬನ್ ನದಿಯಲ್ಲಿ ಸುಮಾರು 7 ಅಡಿ ಉದ್ದ ಮತ್ತು 78.4 ಕಿಲೋ ತೂಕದ ದೈತ್ಯಾಕಾರದ ಟೆಲಿಯಾ ಭೋಲಾ ಮೀನನ್ನು ಕಂಡ ನೀನುಗಾರರ ಗುಂಪು ಆಶ್ಚರ್ಯಗೊಂಡರು. ಬಲೆಗೆ ಸಿಕ್ಕಿ ಹಾಕಿಕೊಂಡಿದ್ದ ದೈತ್ಯಾಕಾರದ ಮೀನನ್ನು ಎಳೆದು ತರಲು ಮೀನುಗಾರರು ಹರಸಾಹವೇ ಪಡೆಬೇಕಾಯಿತು. ಮನುಷ್ಯನ ಸಾಮಾನ್ಯ ಎತ್ತರದಷ್ಟೇ ಇದ್ದ ಆ ಮೀನು ಕಂಡು ಮೀನುಗಾರರಿಗೆ ಅಚ್ಚರಿಯಾಗಿದೆ. ಅಪರೂಪದ ಮೀನನ್ನು ನೋಡಲು ಸ್ಥಳೀಯರು ಮುಗಿ ಬಿದ್ದಿದ್ದು, ಇದರ ಮಾರಾಟದಿಂದ ಮೀನುಗಾರರು 36 ಲಕ್ಷ ರೂಪಾಯಿ ಗಳಿಸಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande