ಟಿ20 ವಿಶ್ವಕಪ್ ಪಂದ್ಯ - ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಪಾಕ್, ಟೀಂ ಇಂಡಿಯಾ ಸಮಿಫೈನಲ್ ಹಾದಿ ಸುಗಮ
27 ಅಕ್ಟೋಬರ್ (ಹಿ.ಸ) ಆ್ಯಂಕರ್ : ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಮಧ್ಯೆ ನಡೆದ ಪಂದ್ಯ ತೀವ
ಟೀಂ ಇಂಡಿಯಾ ಸಮಿಫೈನಲ್ ಹಾದಿ ಸುಗಮ


27 ಅಕ್ಟೋಬರ್ (ಹಿ.ಸ)

ಆ್ಯಂಕರ್ : ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಮಧ್ಯೆ ನಡೆದ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಪಾಕ್ ಹಾಗೂ ನ್ಯೂಜಿಲೆಂಡ್ ಮಧ್ಯೆ ಸೇಡಿನ ಪಂದ್ಯ ಅಂತಾನೇ ಕರೆಯಲಾಗುತ್ತಿದ್ದ ಈ ಪಂದ್ಯದಲ್ಲಿ ಬಾಬರ್ ಪಡೆ ಗೆಲುವು ಸಾಧಿಸಿದೆ.

ಕಿವೀಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸುವ ಮೂಲಕ ಗ್ರುಪ್ 2ರಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಪಾಕಿಸ್ತಾನ ಸಫಲವಾಯಿತು. ಒಂಂದು ಹಂತದಲ್ಲಿ ರೋಮಾಂಚಕಾರಿಯಾಗಿದ್ದ ಪಂದ್ಯದಲ್ಲಿ ಪಾಕ್ ಬ್ಯಾಟ್ಸಮನ್ ಗಳು ಸ್ಫೋಟಕ ಬ್ಯಾಟಿಂಗ್ ಮಾಡಿದ್ದರಿಂದ ಬಾಬರ್ ಪಡೆ ವಿಜಯಶಾಲಿಯಾಯಿತು. ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 135 ರನ್ ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನತ್ತಿದ್ದ ಪಾಕ್, 19 ಓವರ್ ಗಳಿಗೆ ಗೆಲುವು ಸಾಧಿಸಿತು.

ಟಿ20 ವಿಶ್ವಕಪ್ ಗೂ ಮುನ್ನ ನ್ಯೂಜಿಲ್ಯಾಂಡ್ ತಂಡ ಪಾಕಿಸ್ತಾನದಲ್ಲಿ ಸರಣಿ ಆಡಬೇಕಿತ್ತು. ಆದರೆ ಪಾಕಿಸ್ತಾನದಲ್ಲಿನ ಭದ್ರತೆ ವಿಚಾರವಾಗಿ ನ್ಯೂಜಿಲ್ಯಾಂಡ್ ತಂಡ ಅಲ್ಲಿ ಸರಣಿ ಆಡಲು ನಿರಾಕರಿಸಿ, ತವರಿಗೆ ವಾಪಸ್ ಆಗಿತ್ತು. ಈ ಸಮಯದಲ್ಲಿ ಪಾಕ್ ಹಾಗೂ ನ್ಯೂಜಿಲ್ಯಾಂಡ್ ಮಧ್ಯೆ ಮಾತಿನ ಯುದ್ಧವೂ ನಡೆದಿತ್ತು. ಆದ್ದರಿಂದ ಪಾಕಿಸ್ತಾನ ಅಭಿಮಾನಿಗಳ ಪಾಲಿಗೆ ನಿನ್ನೆ ಪಂದ್ಯ ಕುತೂಹಲಕ್ಕೆ ಕಾರಣವಾಗಿತ್ತು. ಹಲವು ದಿನಗಳಿಂದ ಇದ್ದಂಥ ಕಿವೀಸ್ ಸೋಲಿಸುವ ಬರವನ್ನು ಬಾಬರ್ ನೇತೃತ್ವದ ತಂಡ ಈಡೇರಿಸಿಕೊಂಡಿದೆ.

ಪಾಕಿಸ್ತಾನದ ಈ ಗೆಲುವು ಟೀಂ ಇಂಡಿಯಾ ಸೆಮಿಫೈನಲ್ ಹಂತಕ್ಕೆ ಏರುವ ಆಸೆಯನ್ನು ಜೀವಂತವಾಗಿರಿಸಿದೆ. ಸದ್ಯ ಕೊಹ್ಲಿ ಪಡೆಯ ಮೇಲೆ ಒತ್ತಡ ಹೆಚ್ಚಾಗಿದ್ದು ಅಕ್ಟೋಬರ್ 31ರ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ಗೆಲ್ಲಬೇಕು ಹಾಗೂ ಮುಂಬರುವ ಇನ್ನುಳಿದ ಪಂದ್ಯಗಳಲ್ಲಿ ಜಯ ಸಾಧಿಸಬೇಕಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande