Custom Heading

ಟಿ20 ವಿಶ್ವಕಪ್ - ನ್ಯೂಜಿಲೆಂಡ್ ಗೆ ಮತ್ತೊಂದು ಶಾಕ್ - ಗಾಯಾಳು ಲಾಕಿ ಫರ್ಗುಸನ್ ಟೂರ್ನಿಯಿಂದ ಹೊರಕ್ಕೆ..!
27 ಅಕ್ಟೋಬರ್ (ಹಿ.ಸ) ಆ್ಯಂಕರ್ : ನ್ಯೂಜಿಲೆಂಡ್ ಕ್ರಿಕೆಟ್ ತಂಡ ಶಾಕ್ ಮೇಲೆ ಶಾಕ್ ಗೆ ಗುರಿಯಾಗುತ್ತಿದೆ. ಮಂಗಳವಾರ ಪ
ಲಾಕಿ ಫರ್ಗುಸನ್ ಟೂರ್ನಿಯಿಂದ ಹೊರಕ್ಕೆ..!


27 ಅಕ್ಟೋಬರ್ (ಹಿ.ಸ)

ಆ್ಯಂಕರ್ : ನ್ಯೂಜಿಲೆಂಡ್ ಕ್ರಿಕೆಟ್ ತಂಡ ಶಾಕ್ ಮೇಲೆ ಶಾಕ್ ಗೆ ಗುರಿಯಾಗುತ್ತಿದೆ. ಮಂಗಳವಾರ ಪಾಕಿಸ್ತಾನ ವಿರುದ್ಧ ಸೋಲಿನ ನಂತರ ಈಗ ಮತ್ತೊಂದು ಸುದ್ದಿ ಕಿವೀಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನ್ಯೂಜಿಲೆಂಡ್ ಪರ ವೇಗದ ಬೌಲರ್ ಆಗಿದ್ದ ಲಾಕಿ ಫರ್ಗುಸನ್ ಗಾಯದಿಂದಾಗಿ ಟಿ-20 ವಿಶ್ವಕಪ್ ಟೂರ್ನಿಯಿಂದಲೇ ಹೊರಗುಳಿಯುವ ಸಾಧ್ಯತೆ ಇದೆ.

ಫರ್ಗುಸನ್ ನಿರ್ಗಮನದ ನಂತರ ಮುಂಬೈ ಇಂಡಿಯನ್ಸ್ ಪರ ಆಡಿರುವ ಆಡಮ್ ಮಿಲ್ನೆ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅನುಮೋದಿಸುವವರೆಗೂ ಬದಲಿ ಆಟಗಾರ ಅಲಭ್ಯರಾಗಿರುತ್ತಾರೆ.

ಭಾರತದ ವಿರುದ್ಧ ಅಕ್ಟೋಬರ್ 31ರಂದು ನ್ಯೂಜಿಲೆಂಡ್ ಪಂದ್ಯ ಆಡಬೇಕಿದೆ. ಸೆಮಿಫೈನಲ್ ಗೆ ಹೋಗಬೇಕಾದರೆ ಇಂಡಿಯಾ ಹಾಗೂ ಕಿವೀಸ್ ತಂಡಗಳ ಪಾಲಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಆದರೆ, ವೇಗದ ಬೌಲರ್ ಲಾಕಿ ಫರ್ಗುಸನ್ ಟೂರ್ನಿಯಿಂದಲೇ ಹೊರಹೋಗಿರುವ ವಿಚಾರ ನ್ಯೂಜಿಲೆಂಡ್ ತಂಡಕ್ಕೆ ಹಿನ್ನಡೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande