ಭಾರತದ ಸೇನೆಗೆ ರಷ್ಯಾ ಶಸ್ತ್ರಾಸ್ತ್ರಗಳೇ ಶಕ್ತಿ : ಅಮೆರಿಕ
27 ಅಕ್ಟೋಬರ್ (ಹಿ.ಸ): ಆ್ಯಂಕರ್ : ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳ ಮೇಲೆ ಭಾರತದ ಅವಲಂಬನೆಯಲ್ಲಿ ಗಣನೀಯ ಇಳ
ಭಾರತದ ಸೇನೆಗೆ ರಷ್ಯಾ ಶಸ್ತ್ರಾಸ್ತ್ರಗಳೇ ಶಕ್ತಿ : ಅಮೆರಿಕ


27 ಅಕ್ಟೋಬರ್ (ಹಿ.ಸ): ಆ್ಯಂಕರ್ :

ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳ ಮೇಲೆ ಭಾರತದ ಅವಲಂಬನೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಆದರೆ ಭಾರತೀಯ ಸೇನೆಯು ರಷ್ಯಾದ ಉಪಕರಣಗಳಿಲ್ಲದೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಸಂಸ್ಥೆ ಹೇಳಿದೆ.

ರಷ್ಯಾದ ಸಖ್ಯವನ್ನು ಹೆಚ್ಚಿಸಿಕೊಂಡಿರುವ ಭಾರತದ ನಡೆಗೆ ಅಮೆರಿಕ ಕೆಂಗಣ್ಣಿನಿಂದ ನೋಡುತ್ತಿದೆ. ಕೆಲವು ನಿರ್ಬಂಧದಂತಹ ಕಠಿಣ ನಿರ್ಧಾರ ಕೈಗೊಳ್ಳಲು ಬಿಡೆನ್ ಆಡಳಿತ ಯೋಚಿಸುತ್ತಿದೆ .

ಭಾರತ ಪ್ರಸ್ತುತ ಸ್ವಾವಲಂಬಿಯಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಆದರೆ ರಷ್ಯಾದೊಂದಿಗೆ ರಕ್ಷಣಾ ಒಪ್ಪಂದವನ್ನು ಗಟ್ಟಿಗೊಳಿಸಿಕೊಂಡು ಹಲವು ಭಾರೀ ಪ್ರಮಾಣದ ಉಪಕರಣಗಳನ್ನು ಖರೀದಿಸಿವೆ. ಇವು ಅವರಿಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂದು ಹೇಳಿದೆ. ಈ ಉಪಕರಣಗಳು ಸೇನೆಯನ್ನು ಸಶಸ್ತ್ರಗೊಳಿಸುತ್ತದೆ. ಇದಲ್ಲದೆ ಶಕ್ತಿ ಕುಂದುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಷ್ಯಾ ಕೂಡ ಆಕರ್ಷಕ ದರದಲ್ಲಿ ಸುಧಾರಿತ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಸರಬರಾಜು ಮುಂದುವರೆಸಿದೆ.ಆದರೆ 2015ರ ನಂತರ ಆಮದು ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ ಎಂದು ಹೇಳಿದೆ.

ಪ್ರಮುಖವಾಗಿ ಭಾರತದ ವಾಯು ರಕ್ಷಣಾ ವ್ಯವಸ್ಥೆಗಾಗಿ ಖರೀದಿಸುತ್ತಿರುವ ಎಸ್-400 ಖರೀದಿಗೆ 2016ರಿಂದಲೂ ಪ್ರಯತ್ನಿಸುತ್ತಿದೆ. ಇದಕ್ಕೆ ಪರ್ಯಾಯವಾಗಿರುವ ಅಮೆರಿಕದ ಉಪಕರಣಗಳ ಖರೀದಿಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎಂದು ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande