ಶೀಘ್ರದಲ್ಲೇ 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಲಸಿಕೆ
27 ಅಕ್ಟೋಬರ್ (ಹಿ.ಸ): ಆ್ಯಂಕರ್ : ಐದರಿಂದ ಹನ್ನೊಂದು ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಕಿಡ್ ಸೈಜ್ ಫೈಜರ್ ಲಸಿಕೆಗಳನ್
ಶೀಘ್ರದಲ್ಲೇ 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಲಸಿಕೆ


27 ಅಕ್ಟೋಬರ್ (ಹಿ.ಸ): ಆ್ಯಂಕರ್ :

ಐದರಿಂದ ಹನ್ನೊಂದು ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಕಿಡ್ ಸೈಜ್ ಫೈಜರ್ ಲಸಿಕೆಗಳನ್ನು ಮಕ್ಕಳಿಗೆ ನೀಡಲು ಸರ್ಕಾರದ ಸಲಹಾ ಸಮಿತಿ ಸಮ್ಮತಿಸಿರುವುದರಿಂದ ಅಮೆರಿಕಾ ಶೀಘ್ರದಲ್ಲೇ ಮಕ್ಕಳ ಲಸಿಕಾ ಆಂದೋಲನ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ.

ಈಗಾಗಲೇ ಲಸಿಕೆ ಪಡೆದಿರುವ ಕೆಲ ವಯಸ್ಕರಿಗೆ ಅಡ್ಡ ಪರಿಣಾಮಗಳು ಎದುರಾಗಿವೆ. ಹೀಗಾಗಿ ಮಕ್ಕಳಿಗೆ ಕಡಿಮೆ ಸಾಮಥ್ರ್ಯದ ಲಸಿಕೆ ನೀಡುವ ಅವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಪಟ್ಟಿರುವುದರಿಂದ ಫೈಜರ್ ಸಂಸ್ಥೆ ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾಗುವಂತಹ ಲಸಿಕೆಗಳನ್ನು ಸಿದ್ದಪಡಿಸಿದೆ.

ನಾವು ಏನೆ ಪ್ರಯತ್ನ ಮಾಡಿದರೂ ವೈರಾಣು ನಾಶಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ವೈರಸ್ನೊಂದಿಗೆ ಬದುಕಲು ಮಾರ್ಗ ಕಂಡು ಹಿಡಿದುಕೊಳ್ಳಬೇಕಿದೆ ಎಂದು ಅರ್ಕಾನ್ಸಾಸ್ ವಿವಿಯ ಸಲಹೆಗಾರ ಜೆನೆಟ್ಟೆ ಲೀ ಹೇಳಿದ್ದಾರೆ.

ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ವಹಿಸಿ ಫೈಜರ್ ಸಂಸ್ಥೆ ಸಿದ್ದಪಡಿಸಿರುವ ಕಿಡ್ ಸೈಜ್ ಲಸಿಕೆಗಳನ್ನು ಮಕ್ಕಳಿಗೆ ಹಾಕುವ ಕುರಿತಂತೆ ಮುಂದಿನ ವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande