ಸ್ಕೌಟ್ಸ್ನಿಂದ ಪ್ಲಾಸ್ಟಿಕ್ ಮುಕ್ತ ಆಂದೋಲನ
27. Oct (HS) ಆಂಕರ್: ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಬಹುದು ಎಂದು ಹುದುಕುಳ
ಸ್ಕೌಟ್ಸ್ನಿಂದ ಪ್ಲಾಸ್ಟಿಕ್ ಮುಕ್ತ ಆಂದೋಲನ


27. Oct (HS)

ಆಂಕರ್: ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಬಹುದು ಎಂದು ಹುದುಕುಳ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಎಸ್.ಕೆ.ಸರೋಜ ಅಭಿಪ್ರಾಯಪಟ್ಟರು.

ಭಾರತ್ ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಮತ್ತು ರೋಟರಿ ಕೋಲಾರ ನಂದಿನಿ ಸಂಸ್ಥೆಗಳ ಆಶ್ರಯದಲ್ಲಿ ಹುದುಕುಳ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರದಲ್ಲಿ ಆಯೋಜಿಸಿದ್ದ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದ ಕಾರ್ಯಾಗಾರದಲ್ಲಿ ಮಾತನಾಡಿದರು.

ಬಳಸುವ ಪ್ಲಾಸ್ಟಿಕ್ ಅನ್ನು ಸಾರ್ವಜನಿಕರು ಎಲ್ಲೇಂದರಲ್ಲಿ ಎಸೆಯುವುದರಿಂದ ಭೂಮಿ ಕಲುಷಿತ ಗೊಂಡು ನಮಗೆ ಅನಾರೋಗ್ಯದ ಸಮಸ್ಯೆಯಾಗಿ ಆರ್ಥೀಕವಾಗಿ ನಷ್ಠ ಉಂಟಾಗಲಿದೆ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಪ್ಲಾಸ್ಟಿಕ್ ಇಟ್ಟಿಗೆ ಗಳನ್ನು ಮಾಡುವ ಮೂಲಕ ಪರಿಸರದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಆಯುಕ್ತರಾದ ಸುರೇಶ್ ರವರು ಮಾತನಾಡಿ ನಿಮ್ಮ ಶಾಲೆಯಲ್ಲಿ ಸ್ಕೌಟ್ಸ್-ಗೈಡ್ಸ್ ದಳಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದರೆ ತಮ್ಮ ಶಾಲೆ ಹಾಗೂ ಮನೆಯ ವಾತಾವರಣ ತನ್ನೀಂದ ತಾನೇ ಸ್ವಚ್ಚವಾಗಲಿದೆ. ಆದ್ದರಿಂದ ಎಲ್ಲಾ ವಿದ್ಯಾರ್ಥೀಗಳು ಸ್ಕೌಟ್ಸ್-ಗೈಡ್ಸ್ ಗೆ ಸೇರಿ ಉತ್ತಮ ಕೌಶಲಗಳನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಿ.ಆರ್.ಪಿ ಮಮತ ರವರು ಮಾತನಾಡಿ ಸ್ವಚ್ಚತೆ ಕೇವಲ ಒಂದು ದಿನದ ಕೆಲಸವಾಗಬಾರದು ಪ್ರತಿ ದಿನ , ಪ್ರತಿ ಕ್ಷಣ ಸ್ವಚ್ಚತೆಯನ್ನು ಮರೆಯದೆ ಜೀವನದಲ್ಲಿ ಅಳವಡಿಸಿಕೊಂಡರೆ ಇಡೀ ಸಮಾಜ ಆರೋಗ್ಯಯುತವಾಗಿರಲಿದೆ, ಜೈವಿಕ ಕಸ ಮತ್ತು ಅಜೈವಿಕ ಕಸಗಳನ್ನು ತಿಳಿದು ವಿಂಗಡಿಸಿ ಮರು ಬಳಕೆ ಮಾಡಿದರೆ ಕಸದಿಂದ ಲಾಭವನ್ನು ಪಡೆಯಬಹುದು ಎಂದು ತಿಳಿಸಿದರು.

ಪ್ಲಾಸ್ಟಿಕ್ ಮರುಬಳಕೆಯ ತಂತ್ರಗಳ ಬಗ್ಗೆ ವಿ.ಬಾಬು ಮತ್ತು ವಿ.ವಿಶ್ವನಾಥ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥೀಗಳಿಗೆ ಮಾಹಿಯನ್ನು ನೀಡಿದರು. ಸಂಸ್ಥೆಯ ವತಿಯಿಂದ ಮಾಸ್ಕ್ ಗಳನ್ನು ವಿತರಿಸಲಾಯಿತು. ಗ್ರಾಮದಲ್ಲಿನ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಚಂದ್ರಶೇಖರ್, ಜಯಸುಧಾ, ದ್ರಾಕ್ಷಾಯಿಣಿ, ನಾಗರಾಜ್, ಪ್ರಕಾಶ್ ಹಾಜರಿದ್ದರು.


 rajesh pande