Custom Heading

ಹಾನಗಲ್ನಲ್ಲಿ 'ಮತದಾರರಿಗೆ ಮೋಡಿ' ಮಾಡಿದ ಕ್ಷೇತ್ರ ಉಸ್ತುವಾರಿ ಮುರುಗೇಶ್ ನಿರಾಣಿ
ಹಾನಗಲ್(ಹಾವೇರಿ), 27 ಅಕ್ಟೋಬರ್ (ಹಿ.ಸ): ಆ್ಯಂಕರ್ : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿರುವ
ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಉಸ್ತುವಾರಿಯಾಗಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಕ್ಷೇತ್ರಾದ್ಯಂತ ಮಿಂಚಿನ ಪ್ರಚಾರ ನಡೆಸಿ ಮತದಾರರ ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ.


ಹಾನಗಲ್(ಹಾವೇರಿ), 27 ಅಕ್ಟೋಬರ್ (ಹಿ.ಸ):

ಆ್ಯಂಕರ್ : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಉಸ್ತುವಾರಿಯಾಗಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಕ್ಷೇತ್ರಾದ್ಯಂತ ಮಿಂಚಿನ ಪ್ರಚಾರ ನಡೆಸಿ ಮತದಾರರ ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾನಗಲ್ ಕ್ಷೇತ್ರದ ಉಸ್ತುವಾರಿಯಾಗಿದ್ದ ನಿರಾಣಿಯವರು ಕ್ಷೇತ್ರಾದ್ಯಂತ ಹಳ್ಳಿಯಿಂದ ತಾಲ್ಲೂಕು ಮಟ್ಟದವರೆಗೆ ಕಾರ್ಯಕರ್ತರನ್ನು ಭೇಟಿಯಾಗಿ ಅಭ್ಯರ್ಥಿ ಶಿವರಾಜ ಸಜ್ಜನವರ ಪರವಾಗಿ ಮತಯಾಚನೆ ಮಾಡಿರುವುದು 'ಮತದಾರರಲ್ಲಿ ಹೊಸ ಹುರುಪು ಮೂಡಿಸಿದೆ.'

ಮೊದಲು ಅಭ್ಯರ್ಥಿಯ ನಾಮಪತ್ರ ಸಲ್ಲಿಸಿದ ವೇಳೆ ಖುದ್ದು ಹಾಜರಿದ್ದ ನಿರಾಣಿಯವರು ಸರ್ಕಾರದ ಕೋರಿಕೆಯಂತೆ 'ದುಬೈ ಎಕ್ಸ್ ಪೋ-2020'ಯಲ್ಲಿ ಭಾಗಿಯಾಗಿ ಅಲ್ಲಿಂದ ಹಿಂತಿರುಗಿ ಹಾವೇರಿಯತ್ತ ಪ್ರಯಾಣ ಬೆಳೆಸಿದರು. ಕ್ಷೇತ್ರಾದ್ಯಂತ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಎಲ್ಲರ ಮನೆಗೆದ್ದರು.

ಸಚಿವರಾದ ಶಂಕರ್ ಪಟೇಲ್ ಮುನೇನಕೊಪ್ಪಘಿ, ಶಾಸಕರಾದ ಅರುಣ್ಕುಮಾರ್ ಪೂಜಾರ್, ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ವಿಧಾನಪರಿಷತ್ ಸದಸ್ಯ ಮೋಹನ್ ಲಿಂಬೆಕಾಯಿ ಸೇರಿದಂತೆ ಕಾರ್ಯಕರ್ತರ ಜೊತೆಗೂಡಿ ಕ್ಷೇತ್ರದ ನಾನಾ ಕಡೆ ಮತದಾರರನ್ನು ಬಿಜೆಪಿ ಪರವಾಗಿ ಸೆಳೆದಿದ್ದಾರೆ.

ಕಳೆದ ಒಂದು ವಾರದಿಂದ ಹಾನಗಲ್ನಲ್ಲೇ ಬೀಡುಬಿಟ್ಟಿದ್ದ ನಿರಾಣಿಯವರು ಬೆಳಗ್ಗೆಯಿಂದ ಸಂಜೆವರೆಗೂ ಕ್ಷೇತ್ರದ ನಾನಾ ಕಡೆ ಪ್ರಚಾರಕ್ಕೆ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು, ಮುಖಂಡರು ಸೇರಿದಂತೆ ಮತ್ತಿತರರ ಜೊತೆಗೂಡಿ ಬಹಿರಂಗ ಸಮಾವೇಶ, ರೋಡ್ ಶೋ, ಮನೆ ಮನೆಗೆ ತೆರಳಿ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದ್ದಾರೆ.

ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಬಿ.ಸಿ.ಪಾಟೀಲ್, ಶಂಕರ್ ಪಟೇಲ್ ಮುನೇನಕೊಪ್ಪ, ಸಂಸದರಾದ ಶಿವಕುಮಾರ್ ಉದಾಸಿ, ಬಿ.ವೈ.ರಾಘವೇಂದ್ರ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರು, ಪಕ್ಷದ ಮುಖಂಡರ ಜೊತೆ ಪ್ರಚಾರ ನಡೆಸಿದ್ದರು.

ಬಳಿಕ ಹಾನಗಲ್, ಅಕ್ಕಿ ಆಲೂರು, ಬೊಮ್ಮನಹಳ್ಳಿ, ತಿಳುವಳಿ, ಹೇರೂರು, ಅಡೂರು, ಮಕರವಳ್ಳಿ, ಚಿಕ್ಕಾಂಸಿ, ಹೊಸೂರು, ಬೆಳಗಲಪೇಟೆ ಸೇರಿದಂತೆ ಮತ್ತಿತರ ಹೋಬಳಿಯಲ್ಲಿ ಪ್ರಚಾರ ನಡೆಸಿದರು. ಪ್ರಚಾರದ ಸಂದರ್ಭದಲ್ಲಿ ನಿರಾಣಿಯವರು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ನ ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳದೆ, ಬಿಜೆಪಿ ಸರ್ಕಾರದ ಸಾಧನೆಗಳನ್ನೇ ಮತದಾರರಿಗೆ ಮುಟ್ಟಿಸಿರುವುದು ಗಮನ ಸೆಳೆದಿದೆ

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನರಿಗೆ ಜಾರಿ ತಂದಿರುವ ಜನಪರವಾದ ಕಾರ್ಯಕ್ರಮಗಳನ್ನು ತಲುಪಿಸುತ್ತಿದ್ದರು.

ಉದಾಸಿ ಸ್ಮರಣೆ

ಇನ್ನು ಪ್ರಚಾರದ ಸಂದರ್ಭದಲ್ಲಿ ನಿರಾಣಿ ಅವರು ಮಾಜಿ ಸಚಿವರಾದ ದಿ.ಸಿಎಂ.ಉದಾಸಿ ಅವರು ಹಾನಗಲ್ ಕ್ಷೇತ್ರಕ್ಕೆ ಮಾಡಿರುವ ಯೋಜನೆಗಳನ್ನು ಪ್ರಚಾರದ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

ನೀರಾವರಿ, ಕೃಷಿ, ರಸ್ತೆಗಳ ನಿರ್ಮಾಣ, ಮನೆ, ಕೆರೆಗಳಿಗೆ ನೀರು ತುಂಬಿಸಿರುವುದು, ಬೆಳಗಾವಿಯ ವಿಕಾಸಸೌಧ ಸೇರಿದಂತೆ ಅವರು ಮಾಡಿರುವ ಕಾರ್ಯಕ್ರಮಗಳನ್ನು ಜನರ ಬಳಿ ಕೊಂಡೊಯ್ದದಿದ್ದಾರೆ.

'ತಾವೊಬ್ಬ ಸಚಿವ ಎಂಬ ಹಮ್ಮು-ಗಿಮ್ಮು, ಅಹಂ ಇಟ್ಟುಕೊಳ್ಳದ ನಿರಾಣಿಯವರು ಸಾಮಾನ್ಯರಲ್ಲಿ ಅತಿ ಸಾಮಾನ್ಯರಂತೆ 'ಮತದಾರರ ಮನೆಗೆ ಹೋಗಿ ಅವರು ಕೊಡುವ ಟೀ, ಬಿಸ್ಕೆಟ್, ಹಾಲು, ಊಟ, ತಿಂಡಿ ಸವಿದು ತಾವೊಬ್ಬ ಸಾಮಾನ್ಯ ಜನಪ್ರತಿನಿಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪ್ರಚಾರದ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರನ್ನು ಸೆಳೆಯುವಲ್ಲೂ ಸಹ ಅವರು ಯಶಸ್ವಿಯಾಗಿದ್ದಾರೆ. ಕ್ಷೇತ್ರದ ನರೆಗಲ್ಲ, ಕೂಡಲ, ಮಾಸನಕಟ್ಟಿ, ಬೆಳಗಾಲಪೇಟೆ, ಮಾರನಬೀಡ, ಸಾಂಹೊಸಗಿ, ಆಲದಕಟ್ಟಿ, ಅಲ್ಲಾಪುರ ಮತ್ತಿತರ ಕಡೆ ನೂರಾರು ಸಂಖ್ಯೆಯ ಬೇರೆ ಬೇರೆ ಸಂಖ್ಯೆಗಳ ಮುಖಂಡರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಉಪಚುನಾವಣೆ ಆಕಸ್ಮಿಕವಾಗಿ ಎದುರಾಗಿದೆ. ಸರಳ ಸಜ್ಜನಿಕೆ, ಜಾತಿಮತ ಬೇಧ ಮಾಡದೆ ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲರನ್ನು ಸಮನಾಗಿ ಕಂಡಿದ್ದ ದಿ.ಉದಾಸಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕೆಂದು ಮತದಾರರಿಗೆ ಭಾವನಾತ್ಮಕವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಶಿವರಾಜ ಸಜ್ಜನವರು ನಿಮ್ಮ ಮನೆಯ ಮಗನಾಗಿ ಕ್ಷೇತ್ರದ ಕೆಲಸ ಮಾಡುತ್ತಾರೆ. ಇಡೀ ಜಿಲ್ಲೆಗೆ ಇದು ಮಾದರಿ ಕ್ಷೇತ್ರವಾಗಲಿದ್ದು, ಕೈ ಹಿಡಿಯಬೇಕೆಂದು ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಭಾರೀ ಮತಗಳ ಅಂತರದಿಂದ ಗೆಲುವು

ಸಚಿವ ನಿರಾಣಿಯವರು ತಮ್ಮ ಅಭ್ಯರ್ಥಿ ಶಿವರಾಜ್ ಸಜ್ಜನವರು 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಏನೇ ಅಪಪ್ರಚಾರ ನಡೆಸಿದರೂ ಮತದಾರ ಪ್ರಬುದ್ಧನಾಗಿದ್ದಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳು ಅವರಿಗೆ ಸಂತೃಪ್ತಿತ ತಂದಿದೆ.

ಪ್ರಧಾನಮಂತ್ರಿಗಳ ಕೃಷಿ ಸಮ್ಮಾನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿದ ಮರುಕ್ಷಣವೇ ರೈತರ ಮಕ್ಕಳಿಗೆ ಘೋಷಣೆ ಮಾಡಿದ ಕಾರ್ಯಕ್ರಮಗಳು, 75ನೇ ಅಮೃತ್ ಉತ್ಸವದ ಪ್ರಯುಕ್ತ ಘೋಷಿಸಿದ ಯೋಜನೆಗಳು ಮತದಾರರಿಗೆ ಮನಮುಟ್ಟಿವೆ. ಹೀಗಾಗಿ ಪ್ರತಿಪಕ್ಷದವರು ಏನೇ ಆರೋಪಿಸಿದರೂ ಅದಕ್ಕೆ ಕವಡಿ ಕಾಸಿನ ಕಿಮ್ಮತ್ತು ಇಲ್ಲ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್


 rajesh pande