ಮುಂಬೈ ಡ್ರಗ್ಸ್ ಪ್ರಕರಣ: ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ
27 ಅಕ್ಟೋಬರ್ (ಹಿ.ಸ): ಆ್ಯಂಕರ್ :ಡ್ರಗ್ಸ್ ಪಾರ್ಟಿ ಸಂಬಂಧ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿ, ಬಾಲಿವುಡ್ ನಟ ಶಾರುಖ್


bbr_1  H x W: 0 

27 ಅಕ್ಟೋಬರ್ (ಹಿ.ಸ): ಆ್ಯಂಕರ್ :ಡ್ರಗ್ಸ್ ಪಾರ್ಟಿ ಸಂಬಂಧ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿ, ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದರು. ಈ ಸಂಬಂಧ ಮುಂಬೈ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ಮತ್ತೆ ನಡೆಯಲಿದೆ.

ಆರ್ಯನ್ ಖಾನ್ ಪರ ನಿನ್ನೆ ವಾದ ಮಂಡಿಸಿರುವ ಮುಕುಲ್ ರೋಹಟಗಿ, ಪ್ರಸ್ತುತ ನಡೆಯುತ್ತಿರುವ ಆರೋಪಗಳು ಮತ್ತು ಪ್ರತ್ಯಾರೋಪಗಳಿಗೂ ನಮ್ಮ ಕಕ್ಷಿದಾರರಿಗೂ ಯಾವುದೇ ಸಂಬಂಧ ಇಲ್ಲ. ನಡೆಯುತ್ತಿರುವ ವಿವಾದದಲ್ಲಿ ನಮ್ಮ ಕಕ್ಷಿದಾರರ ಹೆಸರು ಎಲ್ಲಿಯೂ ಇಲ್ಲ ಎಂದಿದ್ದರು.23 ವರ್ಷದ ಆರ್ಯನ್ ಡ್ರಗ್ಸ್ ಸೇವನೆ ಮಾಡಿಲ್ಲ. ಅವರನ್ನ ಅತಿಥಿಯಾಗಿ ಪಾರ್ಟಿಗೆ ಆಹ್ವಾನ ಮಾಡಲಾಗಿತ್ತು. ಇಲ್ಲಿಯವರೆಗೆ ಅವರು ಡ್ರಗ್ಸ್ ಸೇವನೆ ಮಾಡಿದ್ದಾರೆಂಬುದಕ್ಕೆ ಯಾವುದೇ ರೀತಿಯ ಸಾಕ್ಷ್ಯಗಳಿಲ್ಲ. ಜೊತೆಗೆ ಅವರಿಗೆ ಡ್ರಗ್ಸ್ ಟೆಸ್ಟ್ ಕೂಡ ಮಾಡಿಸಿಲ್ಲ ಎಂದು ರೋಹಟಗಿ ವಾದ ಮಂಡಿಸಿದ್ದಾರೆ.ಎನ್ಸಿಬಿ ವಿರುದ್ಧ ಯಾರೋ ಏನೋ ಆರೋಪಿಸಿದ್ದಾರೆ. ಕಕ್ಷಿದಾರರ ವಿರುದ್ಧ ಬಳಕೆ, ಸ್ವಾಧೀನ, ಖರೀದಿ ಅಥವಾ ಡ್ರಗ್ಸ್ ಮಾರಾಟದ ಯಾವುದೇ ಪ್ರಕರಣವಿಲ್ಲ. ಟಿವಿ, ಸೋಷಿಯಲ್ ಮೀಡಿಯಾ ಅಥವಾ ಬೇರೆಲ್ಲಿಯೂ ನಡೆಯುವ ಯಾವುದೇ ವಿವಾದಗಳ ಬಗ್ಗೆ ನಮಗೆ ಕಾಳಜಿ ಇಲ್ಲ. ಯಾವುದೇ ಎನ್ಸಿಬಿ ಅಧಿಕಾರಿಯ ವಿರುದ್ಧ ನಾವು ಯಾವುದೇ ಆರೋಪ ಮಾಡಿಲ್ಲ ಎಂದು ಅರ್ಜಿದಾರರ ಪದ ವಾದ ಮಂಡಿಸಲಾಗಿತ್ತು.ಖಾನ್ ಅವರ ಜಾಮೀನಿಗೆ ವಿರೋಧ ವ್ಯಕ್ತಪಡಿಸಿರುವ ಎನ್ಸಿಬಿ, ಆರ್ಯನ್ ಖಾನ್ ಕೇವಲ ಡ್ರಗ್ಸ್ ಸೇವಿಸುವುದಷ್ಟೇ ಅಲ್ಲ. ಅವರು ಡ್ರಗ್ಸ್ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ. ವಾದ-ಪ್ರತಿವಾದ ಆಲಿಸಿರುವ ಕೋರ್ಟ್ ವಿಚಾರಣೆ ಮಧ್ಯಾಹ್ನಕ್ಕೆ ಮುಂದೂಡಿಕೆ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande