Custom Heading

ಶಿಯಾ ಸಮುದಾಯದ ಗ್ರಾಮದ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿ: 11 ಮಂದಿ ಸಾವು
27 ಅಕ್ಟೋಬರ್ (ಹಿ.ಸ): ಆ್ಯಂಕರ್ : ಇಸ್ಲಾಮಿಕ್ ಸ್ಟೇಟ್ (IS) ಭಯೋತ್ಪಾದಕ ಸಂಘಟನೆಗೆ ಸೇರಿದ ಬಂದೂಕುಧಾರಿಗಳು ನಡೆಸಿದ ದಾ
ಶಿಯಾ ಸಮುದಾಯದ ಗ್ರಾಮದ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿ: 11 ಮಂದಿ ಸಾವು


27 ಅಕ್ಟೋಬರ್ (ಹಿ.ಸ): ಆ್ಯಂಕರ್ :

ಇಸ್ಲಾಮಿಕ್ ಸ್ಟೇಟ್ (IS) ಭಯೋತ್ಪಾದಕ ಸಂಘಟನೆಗೆ ಸೇರಿದ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ 11 ನಾಗರಿಕರು ಸಾವನ್ನಪ್ಪಿ, 6 ಮಂದಿ ಗಾಯಗೊಂಡಿರುವ ಘಟನೆ ಬಾಗ್ದಾದ್ನ ಈಶಾನ್ಯದಲ್ಲಿರುವ ಗ್ರಾಮದಲ್ಲಿ ನಡೆದಿದೆ.

ಶಿಯಾ ಸಮುದಾಯದ ಜನರೇ ಹೆಚ್ಚಾಗಿರುವ ದಿಯಾಲಾ ಪ್ರಾಂತ್ಯದ ಬಕೌಬಾ ನಗರದ ಈಶಾನ್ಯ ಭಾಗಕ್ಕಿರುವ ಅಲ್-ರಶಾದ್ ಗ್ರಾಮದಲ್ಲಿ ಈ ದಾಳಿ ನಡೆದಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮಸ್ಥರ ಅಪಹರಣ: ಇಬ್ಬರು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸದಸ್ಯರು ಆ ಗ್ರಾಮದ ಇಬ್ಬರನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಆದರೆ ಗ್ರಾಮಸ್ಥರು ಬೇಡಿಕೆ ಈಡೇರಿಸದೇ ಇದ್ದಾಗ ಗ್ರಾಮದ ಮೇಲೆ ದಾಳಿ ಮಾಡಿದ್ದಾರೆ. ದಾಳಿಗೆ ಮಷಿನ್ ಗನ್ ಬಳಸಲಾಗಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರು ಮತ್ತು ಗಾಯಗೊಂಡವರೆಲ್ಲಾ ನಾಗರಿಕರೇ ಆಗಿದ್ದಾರೆ.2017ರಿಂದ ಇಸ್ಲಾಮಿಕ್ ಸ್ಟೇಟ್ ದಾಳಿಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೂ ಸ್ಲೀಪರ್ ಸೆಲ್ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಆಗಾಗ ದಾಳಿಗಳು ನಡೆಯುತ್ತಿರುತ್ತವೆ. ಈ ಸಂಘಟನೆಯಲ್ಲಿರುವ ಸುನ್ನಿ ಮುಸ್ಲಿಮರು, ಶಿಯಾ ಸಮುದಾಯವನ್ನು ಗುರಿಯಾಗಿಸಿ ಸಾಮಾನ್ಯವಾಗಿ ದಾಳಿ ನಡೆಸುತ್ತಿರುತ್ತಾರೆ.ಶಿಯಾ ಸಮುದಾಯ ಮಾತ್ರವಲ್ಲದೇ, ಭದ್ರತಾ ಪಡೆಗಳು, ವಿದ್ಯುತ್ ಸರಬರಾಜು ಕೇಂದ್ರಗಳು, ಸರ್ಕಾರದ ಇತರ ಮೂಲಸೌಕರ್ಯಗಳೂ ಆಗಾಗ ಉಗ್ರರ ಗುರಿಯಾಗುತ್ತವೆ. ಇದೇ ರೀತಿ ಜುಲೈನಲ್ಲಿ ದಾಳಿ ನಡೆಸಿ, ಮಾರುಕಟ್ಟೆಯಲ್ಲಿ 30 ಕೊಂದಿದ್ದ ಉಗ್ರರು, ಜನವರಿಯಲ್ಲಿ ಅವಳಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ, 32 ಮಂದಿಯ ಸಾವಿಗೆ ಕಾರಣರಾಗಿದ್ದರು.

ಹಿಂದೂಸ್ತಾನ್ ಸಮಾಚಾರ್


 rajesh pande