ಇಟಲಿಯಲ್ಲಿ 30ರಿಂದ ಜಿ-20 ಶೃಂಗಸಭೆ
27 ಅಕ್ಟೋಬರ್ (ಹಿ.ಸ): ಆ್ಯಂಕರ್ : ಎರಡು ದಿನಗಳ ಜಿ-20 ನಾಯಕರುಗಳ ಶೃಂಗಸಭೆ -2021 ಬರುವ 30ರಂದು ಇಟಲಿಯಲ್ಲಿ ಆರಂಭಗೊಳ್

 
minisrr_1  H x

27 ಅಕ್ಟೋಬರ್ (ಹಿ.ಸ): ಆ್ಯಂಕರ್ :

ಎರಡು ದಿನಗಳ ಜಿ-20 ನಾಯಕರುಗಳ ಶೃಂಗಸಭೆ -2021 ಬರುವ 30ರಂದು ಇಟಲಿಯಲ್ಲಿ ಆರಂಭಗೊಳ್ಳಲಿದೆ. ಜಿ-20 ಒಂದು ಅಂತಾರಾಷ್ಟ್ರೀಯ ವೇದಿಕೆಯಾಗಿದ್ದು ಅತಿಥಿ ರಾಷ್ಟ್ರಗಳಿಗೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಪಾಲ್ಗೊಳ್ಳಲು ಅವಕಾಶ ನೀಡುವ ಮೂಲಕ ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳನ್ನು ಒಂದೆಡೆ ಸೇರಿಸುತ್ತದೆ.

ನಾಯಕತ್ವವು ವಾರ್ಷಿಕ ಆಧಾರದಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಆವರ್ತನ ರೀತ್ಯ ಬದಲಾಗುತ್ತಿರುತ್ತದೆ. 2021ರ ಅಧ್ಯಕ್ಷತೆಯನ್ನು 2020ರ ಡಿಸೆಂಬರ್ 1ರಂದು ಇಟಲಿ ವಹಿಸಿಕೊಂಡಿತ್ತು.

ಜಿ.20 1999ರಿಂದ ಪ್ರತಿವರ್ಷ ಸಭೆ ಸೇರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಯ ರೋಮ್ ಗೆ ಭೇಟಿ ನೀಡುತ್ತಿದ್ದಾರೆ. 2021ರ ಜಿ20 ಶೃಂಗಸಭೆ, ಜನರು, ಭೂಗ್ರಹ ಮತ್ತು ಸಮೃದ್ಧಿಯೆಂಬ ಮೂರು ಸ್ತಂಭಗಳ ಮೇಲೆ ಗಮನ ಹರಿಸಲಿದೆ.

ಐರೋಪ್ಯ ಒಕ್ಕೂಟ ಮತ್ತು 19 ದೇಶಗಳಾದ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೈನಾ, ಜರ್ಮನಿ, ಫ್ರಾನ್ಸ್, ಭಾರತ, ಇಂಡೋನೇಷಿಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ ಒಕ್ಕೂಟ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುಕೆ ಮತ್ತು ಅಮೆರಿಕಾ ಈ ಸಮೂಹದಲ್ಲಿವೆ

ಹಿಂದೂಸ್ತಾನ್ ಸಮಾಚಾರ್


 rajesh pande