Custom Heading

ಬಾಬಾ ರಾಮ್ ದೇವ್ ಅವರಿಗೆ ದೆಹಲಿ ಹೈಕೋರ್ಟ್ ನಿಂದ ಸಮನ್ಸ್ ಜಾರಿ
27 ಅಕ್ಟೋಬರ್ (ಹಿ.ಸ) ಆ್ಯಂಕರ್ : ಅಲೋಪಥಿ ಬಗ್ಗೆ ಸುಳ್ಳು ಮತ್ತು ಆಧಾರರಹಿತ ಮಾಹಿತಿಯನ್ನು ಹರಡಿದಕ್ಕಾಗಿ ಯೋಗ ಗುರು ರ
ಬಾಬಾ ರಾಮ್ ದೇವ್ ಅವರಿದೆ ದೆಹಲಿ ಹೈಕೋರ್ಟ್ ನಿಂದ ಸಮನ್ಸ್ ಜಾರಿ


27 ಅಕ್ಟೋಬರ್ (ಹಿ.ಸ)

ಆ್ಯಂಕರ್ : ಅಲೋಪಥಿ ಬಗ್ಗೆ ಸುಳ್ಳು ಮತ್ತು ಆಧಾರರಹಿತ ಮಾಹಿತಿಯನ್ನು ಹರಡಿದಕ್ಕಾಗಿ ಯೋಗ ಗುರು ರಾಮದೇವ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು ಮೊಕದ್ದಮೆ ಹೂಡಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ಬುಧವಾರ ಸಮನ್ಸ್ ಜಾರಿ ಮಾಡಿದೆ. ಸಂಘದ ಈ ಮನವಿಯೂ ಕ್ಷುಲ್ಲಕವಲ್ಲ, ಇದು ಖಂಡಿತವಾಗಿಯೂ ಪ್ರಕರಣ ದಾಖಲಿಸುವಂತ ವಿಷಯ ಎಂದು ಕೋರ್ಟ್ ಹೇಳಿದೆ.

ಈ ಸಮನ್ಸ್ಗೆ ರಾಮ್ದೇವ್ ಪ್ರತಿಕ್ರಿಯೆ ನೀಡಲು ನ್ಯಾಯಮೂರ್ತಿ ಸಿ ಹರಿಶಂಕರ್ ಅವರು ನಾಲ್ಕು ವಾರಗಳ ಕಾಲಾವಕಾಶ ನೀಡಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ ಮತ್ತು ಯಾವುದೇ ಪರಿಹಾರ, ಮಧ್ಯಂತರ ಅಥವಾ ಇತರವುಗಳನ್ನು ನೀಡುವ ವಿಷಯವನ್ನು ನಂತರ ಪರಿಶೀಲಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ನಾನು, ರಾಮದೇವ್ ವಿಡಿಯೋ ತುಣುಕುಗಳನ್ನು ನೋಡಿದ್ದೇನೆ. ವೀಡಿಯೊ ಕ್ಲಿಪ್ ಗಳ ಪರಿಶೀಲನೆಯಿಂದ, ನಿಮ್ಮ ಕ್ಲೈಂಟ್ ಅಲೋಪತಿ ಚಿಕಿತ್ಸಾ ಪ್ರೋಟೋಕಾಲ್ ಅನ್ನು ತಿರಸ್ಕರಿಸುತ್ತಿದ್ದಾರೆ. ಅವರಿಗೆ ತಡೆಯಾಜ್ಞೆ ನೀಡಲು ಏನೂ ಇಲ್ಲದಿರಬಹುದು. ಆದರೆ ಪ್ರಕರಣವು ಕ್ಷುಲ್ಲಕವಲ್ಲ ಎಂದು ನ್ಯಾಯಾಧೀಶರು ರಾಮ್ ದೇವ್ ಪರ ಹಾಜರಾದ ಹಿರಿಯ ವಕೀಲ ರಾಜೀವ್ ನಾಯರ್ ಅವರಿಗೆ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್


 rajesh pande