ರೇರಾ ಕಾಯ್ದೆ ಕಡ್ಡಾಯವಾಗಿ ಪಾಲನೆ ಅಗತ್ಯ: ಶಾಸಕ ಜಿ.ಎಸ್. ರೆಡ್ಡಿ
ಬಳ್ಳಾರಿ, 27 ಅಕ್ಟೋಬರ್ (ಹಿ.ಸ): ಬಿಲ್ಡರ್ಸ್ ಮತ್ತು ಡೆವಲಪರ್ಸ್ಗಳು ರೇರಾ - ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಆಕ್ಟ್ - ಕ
ರೆರಾ ಕಾಯ್ದೆ ಕಡ್ಡಾಯವಾಗಿ ಪಾಲನೆ ಅಗತ್ಯ: ಶಾಸಕ ಜಿ.ಎಸ್. ರೆಡ್ಡಿ


ಬಳ್ಳಾರಿ, 27 ಅಕ್ಟೋಬರ್ (ಹಿ.ಸ):

ಬಿಲ್ಡರ್ಸ್ ಮತ್ತು ಡೆವಲಪರ್ಸ್ಗಳು ರೇರಾ - ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಆಕ್ಟ್ - ಕಾಯ್ದೆಯನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ನಗರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು

ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಕರೆ ನೀಡಿದ್ದಾರೆ.

`ಬಳ್ಳಾರಿ ಇಂಜಿನೀಯರ್ಸ್ ಅಂಡ್ ಡೆವಲಪರ್ಸ್ ಕೌನ್ಸಿಲ್' ಅನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಗರಗಳು ದಿನೇ ದಿನೇ ಬೆಳೆಯುತ್ತಿವೆ. ನಗರದಲ್ಲಿ ಬೃಹತ್ ಲೇ ಔಟ್ ಗಳು, ಬೃಹತ್ ಕಟ್ಟಡಗಳು ನಿರ್ಮಾಣ ಆಗುತ್ತಿವೆ. ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ರೂಪಿಸಿರುವ ರೇರಾ ನಿಯಮಗಳ ಪಾಲನೆ ಅಗತ್ಯ. ಬಿಲ್ಡ್ರ್ಸ್ಗಳು ಸಂಬಂದಿಸಿದ ಪ್ರಾಧಿಕಾರಗಳ ಅನುಮತಿಯನ್ನು ಪಡೆಯಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಂಜೀವ ಪ್ರಸಾದ್, ಡೆವಲಪರ್ಸ್ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ `ಬಳ್ಳಾರಿ ಇಂಜಿನೀಯರ್ಸ್ ಅಂಡ್ ಡೆವಲಪರ್ಸ್ ಕೌನ್ಸಿಲ್' ಜವಾಬ್ದಾರಿ ನಿರ್ವಹಿಸಲಿದೆ. ಕಟ್ಟಡಗಳ, ಲೇಔಟ್, ರಸ್ತೆ ಮೊದಲಾದವುಗಳ ಸ್ವರೂಪ, ಮೂಲ ಸೌಕರ್ಯ, ನಗರ ಸುಂದರೀಕರಣಗಳನ್ನು ರೇರಾ ಕಾಯ್ದೆ ಅಡಿಯಲ್ಲಿ ರೂಪಿಸಲಿದೆ ಎಂದರು.

ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಆಕ್ಟ್ ಬಗ್ಗೆ ಕಾಯ್ದೆಯ ಸಲಹೆಗಾರ ಮತ್ತು ಲೆಕ್ಕ ಪರಿಶೋಧಕ ವಿನಯ್ ತ್ಯಾಗರಾಜ್ ಮತ್ತು ನ್ಯಾಯವಾದಿ ಇ. ಸುಹೇಲ್ ಅಹ್ಮದ್ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಬುಡಾ ಅಧ್ಯಕ್ಷ ಪಿ. ಪಾಲಣ್ಣ, ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ರಾವ್, ಕಾರ್ಯದರ್ಶಿ ಯಶವಂತ್ ರಾಜ್, ಮಾಜಿ ಅಧ್ಯಕ್ಷ ಡಾ.ರಮೇಶ್ ಗೋಪಾಲ್, ವಿಕಾಸ್ ಜೈನ್ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.


 rajesh pande