23 ವರ್ಷದ ಮಹಿಳೆ ಮೇಲೆ 15 ವರ್ಷದ ಬಾಲಕನಿಂದ ಅತ್ಯಾಚಾರಕ್ಕೆ ಯತ್ನ
27 ಅಕ್ಟೋಬರ್ (ಹಿ.ಸ) ಆ್ಯಂಕರ್ : 15 ವರ್ಷದ ಅಪ್ರಾಪ್ತ ಬಾಲಕನೊಬ್ಬ 23 ವರ್ಷದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಅತ
23 ವರ್ಷದ ಮಹಿಳೆ ಮೇಲೆ 15 ವರ್ಷದ ಬಾಲಕನಿಂದ ಅತ್ಯಾಚಾರಕ್ಕೆ ಯತ್ನ


27 ಅಕ್ಟೋಬರ್ (ಹಿ.ಸ)

ಆ್ಯಂಕರ್ : 15 ವರ್ಷದ ಅಪ್ರಾಪ್ತ ಬಾಲಕನೊಬ್ಬ 23 ವರ್ಷದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಭಯಾನಕ ಘಟನೆ ಕೇರಳದ ಕೊಂಡೊಟ್ಟಿ ನಗರದಲ್ಲಿ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಅಪ್ರಾಪ್ತ ಬಾಲಕ ಆಕೆ ಪ್ರತಿರೋಧ ತೋರಿ ಓಡಿ ಹೋಗಲು ಮುಂದಾದ ಆಕೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.

ಮಹಿಳೆಯನ್ನು ಹಿಂಬಾಲಿಸಿದ ಬಾಲಕ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ತಪ್ಪಿಸಿಕೊಂಡು ಓಡಲು ಮುಂದಾಗಿದ್ದಾಳೆ. ಆದರೂ ಬಿಡದ ಆತ ಆಕೆಯ ಕೈಗಳನ್ನು ಹಟ್ಟಿ ಹಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಹಾಗೂ ಹೀಗೂ ಮಾಡಿ ತಪ್ಪಿಸಿಕೊಂಡ ಮಹಿಳೆ ಸಮೀಪವಿದ್ದ ಮನೆಗೆ ಓಡಿ ಹೋಗಿದ್ದಾಳೆ. ಬಳಿಕ ಮನೆಯಲ್ಲಿದ್ದ ಮಹಿಳಾ ಸುರಕ್ಷತಾ ಆಲರಂ ಹೊಡೆದಿದ್ದಾಳೆ. ತಕ್ಷಣಕ್ಕೆ ಕೊಂಡೊಟ್ಟಿ ಪುರಸಭೆಯ ಕೊಟ್ಟುಕ್ಕರ ವಾರ್ಡ್ ಕೌನ್ಸಿಲರ್ ಸ್ಥಳಕ್ಕೆ ಬಂದು ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ

ಆರೋಪಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ರಾಜ್ಯ ಮಟ್ಟದ ಜೂಡೋ ಚಾಂಪಿಯನ್ ಆಗಿದ್ದಾನೆ. ಮಹಿಳೆ ನೀಡಿದ ಹೇಳಿಕ ಮತ್ತು ಸಿಸಿಟಿವಿ ದೃಶ್ಯಗಳಿಂದ ಆತನ ಕೃತ್ಯ ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಆತ ಕೂಡ ಅಪರಾಧವನ್ನು ಒಪ್ಪಿಕೊಂಡಿದ್ದು, ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

ಆಕೆಯನ್ನು ಹಿಂಬಾಲಿಸಿದ ಹುಡುಗ ಅವಳನ್ನು ಹೊಲಕ್ಕೆ ಎಳೆದೊಯ್ದು, ಅತ್ಯಾಚಾರ ಯತ್ನಕ್ಕೆ ಮುಂದಾಗಿದ್ದ. ಈ ವೇಳೆ ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಿದ್ದಾನೆ.

ಹಿಂದುಸ್ತಾನ ಸಮಾಚಾರ್


 rajesh pande