ಡಿ.ಸಿ.ಸಿ.ಬ್ಯಾಂಕ್ ತನಿಖೆಗೆ ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ
27.ಅಕ್ಟೋಬರ್ (ಹಿ.ಸ) ಆಂಕರ್: ಬಂಗಾರಪೇಟೆ ಟಿಎಪಿಸಿಎಂಎಸ್ ವಿಭಜನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಸದಸ್ಯ
ಡಿ.ಸಿ.ಸಿ.ಬ್ಯಾಂಕ್ ಅಕ್ರಮಗಳ ತನಿಖೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕೋಲಾರದಲ್ಲಿ ಪ್ರತಿಭಟನೆ ನಡೆಸಿದರು.


27.ಅಕ್ಟೋಬರ್ (ಹಿ.ಸ)

ಆಂಕರ್: ಬಂಗಾರಪೇಟೆ ಟಿಎಪಿಸಿಎಂಎಸ್ ವಿಭಜನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಸದಸ್ಯರು ನಡೆಸಿದ ಪ್ರತಿಭಟನೆಯ ಬೆನ್ನಲೇ ಬುಧವಾರ ಮಾಜಿ ಶಾಸಕ ವೈ.ಸಂಪAಗಿ ದಂಡು ದಳವಾಯಿ ಸಮೇತ ಆಗಮಿಸಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಕೇಸರಿ ಶಾಲು, ಕೇಸರಿ ಬಾವುಟ ಹಿಡಿದ ಬಿಜೆಪಿ ಕಾರ್ಯಕರ್ತರ ದಂಡು ಮಾಜಿ ಶಾಸಕ ಸಂಪಂಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಹಲವು ತಿಂಗಳಿಂದ ಡಿಸಿಸಿ ಬ್ಯಾಂಕ್ ವಿರುದ್ಧ ಮಾತನಾಡುತ್ತಿರುವ ಸಂಪಂಗಿ ಇಂದು ಸಹ ಅದೇ ರಾಗ, ಅದೇ ತಾಳ ಎಂಬುವಂತೆ ಬ್ಯಾಂಕ್ನಲ್ಲಿ ಅಕ್ರಮಗಳು ನಡೆದಿವೆ. ಆಡಳಿತ ಮಂಡಳಿಯನ್ನು ವಿಸರ್ಜಿಸಬೇಕು ಎಂದು ಒತ್ತಾಯಿಸಿದರು.

ಡಿಸಿಸಿ ಬ್ಯಾಂಕ್ನಿಂದ ಸಾಲ ನೀಡುವಾಗ ಅಕ್ರಮಗಳು ನಡೆದಿವೆ. ಸಾಲ ಮನ್ನಾ ಯೋಜನೆಯಲ್ಲಿ ೫೦೦ ಕೋಟಿ ಅವ್ಯವಹಾರ ನಡೆದಿದೆ. ಸರ್ಕಾರ ತನಿಖೆ ನಡೆಸಿ ಬ್ಯಾಂಕಿನ ಆಡಳಿತ ಮಂಡಳಿಯನ್ನು ವಿಸರ್ಜಿಸಬೇಕು ಎಂದು ಅವರದೇ ಪಕ್ಷದ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದ ರಂಗಮಂದಿರದ ಬಳಿಯಿಂದ ಬ್ಯಾಂಕ್ ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಕೆಜಿಎಫ್ ಶಾಸಕಿ ಎಂ.ರೂಪಕಲಾ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ನ ಮಾಜಿ ನಿರ್ದೇಶಕ ಹನುಮೇಗೌಡ, ಅವಿಭಜಿತ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ನ ದುರಾಡಳಿತದ ವಿರುದ್ಧ ಮೊದಲ ಬಾರಿಗೆ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನಿಂದ ಡಿಸಿಸಿ ಮೂಲಕ ಸಾಲ ನೀಡಲಾಗುತ್ತಿದೆ. ಆದರೆ ವೈಯುಕ್ತಿಕವಾಗಿ ಸಾಲ ನೀಡುವಂತೆ ಬಿಂಭಿಸಲಾಗುತ್ತಿದೆ. ದೂರುಗಳನ್ನು ನೀಡಿದರು ಸಹಕಾರಿ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಡಾ.ಕೃಷ್ಣಮೂರ್ತಿ, ಜಯರಾಮರೆಡ್ಡಿ, ಮುನಿಯಪ್ಪ, ಬೇತಮಂಗಲ ಧನಿ, ಸುನಿಲ್, ವಿಜಯಕಯಮಾರ್, ಮಣಿಕಂಠನ್, ಸುರೇಶ್, ಶಿವರಾಮ್, ಲೋಕನಾಥ್ ನಾಯ್ದಡು, ಲಕ್ಷ್ಮೀಪತಿ ಪಾಲ್ಗೊಂಡಿದ್ದರು.

ಚಿತ್ರ : ಡಿ.ಸಿ.ಸಿ.ಬ್ಯಾಂಕ್ ಅಕ್ರಮಗಳ ತನಿಖೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕೋಲಾರದಲ್ಲಿ ಪ್ರತಿಭಟನೆ ನಡೆಸಿದರು.


 rajesh pande