ಆರ್ಯನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಮುಂಬೈ, 27 ಅಕ್ಟೋಬರ್ (ಹಿ.ಸ): ಆ್ಯಂಕರ್ : ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಬಾಲಿವುಡ್
ಆರ್ಯನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ.


ಮುಂಬೈ, 27 ಅಕ್ಟೋಬರ್ (ಹಿ.ಸ):

ಆ್ಯಂಕರ್ : ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ನಾಳೆಗೆ ಮುಂದೂಡಿದೆ.

ಆರ್ಯನ್ ಖಾನ್ ಮತ್ತು ಮತ್ತೊಬ್ಬ ಆರೋಪಿ ಅರ್ಬಾಜ್ ಸೆಟ್ ಮರ್ಚಂಟ್ ಅವರು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠದ ನ್ಯಾಯಾಧೀಶರಾದ ನಿತೀನ್ ಸಾಂಬ್ರೆ ನ್ಯಾಯಪೀಠ ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿದೆ.

ಆರ್ಯನ್ ಖಾನ್ ಪರವಾಗಿ ವಾದ ಮಂಡಿಸಿದ ಮಾಜಿ ಅಟಾರ್ನಿ ಜನರಲ್ ಹಾಗೂ ಹಿರಿಯ ವಕೀಲ ಮುಕುಲ್ ರೋಹಟಗಿ, ಆರ್ಯನ್ ಬಂಧನ ಸಮಯದಲ್ಲಿ ಯಾವುದೇ ಮಾದಕವಸ್ತು ಸಿಕ್ಕಿಲ್ಲ. ಜೊತೆಗೆ ಅವರ ರಕ್ತದ ಮಾದರಿಯಲ್ಲಿ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಆರ್ಯನ್ ಖಾನ್ ಅವರಿಗೆ ಜಾಮೀನು ನೀಡುವಂತೆ ನ್ಯಾಯಪೀಠ ಮಾಡಿದರು

ಚರಸ್ ಸೇವನೆ:

ಮತ್ತೊಬ್ಬ ಆರೋಪಿ ಅರ್ಬಾಜ್ ಮರ್ಚಂಟ್ ಅವರು ರೇವ್ ಪಾರ್ಟಿಯಲ್ಲಿ ಸೇವಿಸಿದ್ದಾರೆ ವಿಚಾರಣೆ ಸಮಯದಲ್ಲಿ ಚರಸ್ ಸೇವಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅರ್ಬಾಜ್ ಮರ್ಚೆಂಟ್ ಪರವಾಗಿ ಅದ್ವೈತ್ ಸೇತ್ನಾ ಮತ್ತು ಜನರಲ್ ಅನಿಲ್ ಸಿಂಗ್ ವಾದ ಮಂಡಿಸಿದರು.

ನಾಳೆ ಎನ್ ಸಿಬಿ ಪರ ವಾದ ಮಂಡನೆ;

ನಾಳೆ ಎನ್ ಸಿಬಿ ಪರ ವಕೀಲರು ವಾದ ಮಂಡನೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande