Custom Heading

ಅಗ್ನಿ-5 ಖಂಡಾಂತರ ಕ್ಷಿಪಣಿ ಯಶಸ್ವಿ ಉಡಾವಣೆ
27 ಅಕ್ಟೋಬರ್ (ಹಿ.ಸ) ಆ್ಯಂಕರ್ : ಒಡಿಶಾದ ಎಪಿಜೆ ಅಬ್ದುಲ್ ಕಲಾಂ ಐಲ್ಯಾಂಡ್ನಲ್ಲಿ ಅಗ್ನಿ-5 ಖಂಡಾಂತರ ಕ್ಷಿಪಣಿ ಯಶಸ್ವಿ
ಅಗ್ನಿ-5 ಖಂಡಾಂತರ ಕ್ಷಿಪಣಿ ಯಶಸ್ವಿ ಉಡಾವಣೆ


27 ಅಕ್ಟೋಬರ್ (ಹಿ.ಸ)

ಆ್ಯಂಕರ್ : ಒಡಿಶಾದ ಎಪಿಜೆ ಅಬ್ದುಲ್ ಕಲಾಂ ಐಲ್ಯಾಂಡ್ನಲ್ಲಿ ಅಗ್ನಿ-5 ಖಂಡಾಂತರ ಕ್ಷಿಪಣಿ ಯಶಸ್ವಿಯಾಗಿ ಉಡಾವಣೆ ಆಗಿದೆ. ಇಂದು ಸಂಜೆ 7:50ಕ್ಕೆ ಉಡಾವಣೆ ನಡೆಯಿತು. ಈ ಕ್ಷಿಪಣಿ 5,000 ಕಿ.ಮೀ.ಗಳ ಸ್ಟ್ರೈಕ್ ವ್ಯಾಪ್ತಿ ಹೊಂದಿದೆ.

ಮೂರು ಹಂತದ ಘನ ಇಂಧನ ಎಂಜಿನ್ ಅನ್ನು ಬಳಸುವ ಈ ಕ್ಷಿಪಣಿಯು, 5,000 ಕಿ.ಮೀ. ವ್ಯಾಪ್ತಿಯಲ್ಲಿರುವ ಗುರಿಗಳನ್ನು ಅತಿ ಹೆಚ್ಚು ನಿಖರತೆಯೊಂದಿಗೆ ಹೊಡೆಯುವ ಸಾಮರ್ಥ್ಯ ಹೊಂದಿದೆ.

ಅಗ್ನಿ-5ರ ಯಶಸ್ವಿ ಪರೀಕ್ಷೆಯು 'ಮೊದಲ ಬಳಕೆಯಿಲ್ಲ' ಎಂಬ ಬದ್ಧತೆ ಆಧಾರವಾಗಿರುವ 'ವಿಶ್ವಾಸಾರ್ಹ ಕನಿಷ್ಠ ತಡೆ' ಹೊಂದಿರುವ ಭಾರತದ ಹೇಳಿಕೆ ನೀತಿಗೆ ಅನುಗುಣವಾಗಿದೆ. ನೆರೆಯ ರಾಷ್ಟ್ರವಾದ ಚೀನಾಕ್ಕೆ ಬಲವಾದ ಸಂದೇಶ ರವಾನಿಸುವ ಪ್ರಯತ್ನವಾಗಿ ಅಗ್ನಿ-5 ಉಡಾವಣೆ ಮಾಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande