ಪ್ರಧಾನಿ ಪಾಲ್ಗೊಳ್ಳುತ್ತಿರುವ 9ನೇ ಭಾರತ- ಆಸಿಯಾನ್ ಶೃಂಗಸಭೆ
27 ಅಕ್ಟೋಬರ್ (ಹಿ.ಸ): ಆ್ಯಂಕರ್ : ಬ್ರೂನಿ ಸುಲ್ತಾನರ ಆಹ್ವಾನದ ಮೇರೆಗೆ ಈ ತಿಂಗಳ 28 ರಂದು ವರ್ಚುವಲ್ ಮೂಲಕ ನಡೆಯಲಿರುವ
ಪ್ರಧಾನಿ ಪಾಲ್ಗೊಳ್ಳುತ್ತಿರುವ 9ನೇ ಭಾರತ- ಆಸಿಯಾನ್ ಶೃಂಗಸಭೆ


27 ಅಕ್ಟೋಬರ್ (ಹಿ.ಸ): ಆ್ಯಂಕರ್ :

ಬ್ರೂನಿ ಸುಲ್ತಾನರ ಆಹ್ವಾನದ ಮೇರೆಗೆ ಈ ತಿಂಗಳ 28 ರಂದು ವರ್ಚುವಲ್ ಮೂಲಕ ನಡೆಯಲಿರುವ 18ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ.

ಶೃಂಗಸಭೆಯಲ್ಲಿ ಆಸಿಯಾನ್ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

ಈ ಶೃಂಗಸಭೆಯಲ್ಲಿ ಆಸಿಯಾನ್ – ಭಾರತ ವ್ಯೂಹಾತ್ಮಕ ಪಾಲುದಾರಿಕೆಯ ಸ್ಥಿತಿ ಮತ್ತು ಕೋವಿಡ್ -19 ಸೇರಿದಂತೆ ಆರೋಗ್ಯ, ವಾಣಿಜ್ಯ ಮತ್ತು ವ್ಯಾಪಾರ, ಸಂಪರ್ಕ, ಶಿಕ್ಷಣ, ಸಂಸ್ಕೃತಿ ಕ್ಷೇತ್ರಗಳಲ್ಲಿನ ಪ್ರಗತಿಯ ಪರಾಮರ್ಶೆ ನಡೆಸಲಾಗುವುದು.

ಕೋವಿಡೋತ್ತರ ಆರ್ಥಿಕ ಚೇತರಿಕೆ ಸೇರಿದಂತೆ ಮಹತ್ವದ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆಯೂ ಚಿಂತನಮಂಥನ ನಡೆಯಲಿದೆ. ಆಸಿಯಾನ್ – ಭಾರತ ಶೃಂಗಸಭೆ ಪ್ರತಿವರ್ಷ ನಡೆಯುತ್ತಿದ್ದು, ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವೆ ಉನ್ನತ ಮಟ್ಟದ ಚರ್ಚೆಗೆ ಅವಕಾಶ ಕಲ್ಪಿಸುತ್ತದೆ.

ಪ್ರಧಾನಿ ಮೋದಿ ಅವರು, ಕಳೆದ ನವೆಂಬರ್ ನಲ್ಲಿ ಸಹ ವರ್ಚುವಲ್ ಮೂಲಕವೇ ನಡೆದಿದ್ದ 17ನೇ ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಇದು ಅವರು ಪಾಲ್ಗೊಳ್ಳುತ್ತಿರುವ 9ನೇ ಆಸಿಯಾನ್ – ಭಾರತ ಶೃಂಗಸಭೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande