ಸೆ. 20ರಂದು ವಿದ್ಯುತ ಪೂರೈಕೆಯಲ್ಲಿ ವ್ಯತ್ಯಯ
ವಿಜಯಪುರ, 18 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : 220/110/11ಕೆ.ವಿ ಬಾಗೇವಾಡಿ ಸ್ವೀ-ಕೇಂದ್ರದ 100 ಎಮ್.ವಿ.ಎ-1, 2 ಮತ್ತು 3 ಪರಿವರ್ತಕಗಳ ಮೇಲೆ ಬರುವ ಎಲ್ ಐ ಎಸ್‌ಗಳಾದ ಬಳೂತಿ, ಮಸೂತಿ, ಹನಮಾಪುರ ಮತ್ತು ಮುಳವಾಡ, 110ಕೆವ್ಹಿ ಚಿಮ್ಮಲಗಿ ಹಾಗೂ ಮಮದಾಪುರ, ಬೆಳ್ಳುಬ್ಬಿ, ಶಿರಬೂರ, ದೇವರಗೆಣ್ಣೂರ, ಬಬಲ
ಸೆ. 20ರಂದು ವಿದ್ಯುತ ಪೂರೈಕೆಯಲ್ಲಿ ವ್ಯತ್ಯಯ


ವಿಜಯಪುರ, 18 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : 220/110/11ಕೆ.ವಿ ಬಾಗೇವಾಡಿ ಸ್ವೀ-ಕೇಂದ್ರದ 100 ಎಮ್.ವಿ.ಎ-1, 2 ಮತ್ತು 3 ಪರಿವರ್ತಕಗಳ ಮೇಲೆ ಬರುವ ಎಲ್ ಐ ಎಸ್‌ಗಳಾದ ಬಳೂತಿ, ಮಸೂತಿ, ಹನಮಾಪುರ ಮತ್ತು ಮುಳವಾಡ, 110ಕೆವ್ಹಿ ಚಿಮ್ಮಲಗಿ ಹಾಗೂ ಮಮದಾಪುರ, ಬೆಳ್ಳುಬ್ಬಿ, ಶಿರಬೂರ, ದೇವರಗೆಣ್ಣೂರ, ಬಬಲೇಶ್ವರ, ಕಂಬಾಗಿ, ಕಾಖಂಡಕಿ,ಮಟ್ಟಿಹಾಳ, ಮಲಘಾಣ,ರೋಣಿಹಾಳ, ಮುಖರ್ತಿಹಾಳ, ನಿಡಗುಂದಿ, ದಿಂಡವಾರ, ಕನಕಾಲ, ಉಕ್ಕಲಿ ಹಾಗೂ ನಂದಿಹಾಳ, ಉಪ ಕೇಂದ್ರಗಳಲ್ಲಿ ಹಾಗೂ 13ಕೆ.ವ್ಹಿ ಲಿಂಗದಳ್ಳಿ ಎಲ್.ಐ.ಎಸ್ ಹಾಗೂ 33ಕೆವ್ಹಿ ಮನಗೂಳಿ, ಮುತ್ತಗಿ, ಹೂ.ಹಿಪ್ಪರಗಿ, ದೇವರ ಗೆಣ್ಣೂರ ಉಪಕೇಂದ್ರಗಳಲ್ಲಿಯು ಎರಡನೇ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳಲಾಗುತ್ತಿದ್ದು, ಈ ಕೇಂದ್ರಗಳಿಂದ ಹೊರಹೋಗುವ 33ಕೆ.ವ್ಹಿ ಹಾಗೂ 11ಕೆ.ವ್ಹಿ ಮಾರ್ಗಗಳಲ್ಲಿ ಸೆಪ್ಟೆಂಬರ್ 20ರ ಬೆಳಿಗ್ಗೆ 10 ರಿಂದ ಸಂಜೆ 4ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರ ಹೋಗುವ ಎಲ್ಲ 33 ಕೆವ್ಹಿ ಹಾಗೂ 11 ಕೆವ್ಹಿ ಮಾರ್ಗಗಳಾದ ಪಟ್ಟಣ, ಎನ್ ಜೆ.ವಾಯ್,ನೀರಾವರಿ ಪಂಪಸೆಟ್,ಕುಡಿಯುವ ನೀರಿನ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕೆಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೊರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande