ಕೋಲ್ಕತ್ತಾ, 18 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತದ ಸ್ಥೂಲ ಆರ್ಥಿಕ ಪರಿಸ್ಥಿತಿ ಒಟ್ಟಾರೆ ಸಕಾರಾತ್ಮಕವಾಗಿದೆ, ಆದರೆ ಸಾರ್ವಜನಿಕ ಹೂಡಿಕೆ ಸಾಮರ್ಥ್ಯವನ್ನು ಪರಿಗಣಿಸಿ ಜಾಗರೂಕರಾಗಿರಬೇಕು” ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಭಾರತ್ ಚೇಂಬರ್ ಆಫ್ ಕಾಮರ್ಸ್‌ನ 125ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಇತ್ತೀಚಿನ ನೇರ ತೆರಿಗೆ ಹಾಗೂ ಜಿಎಸ್‌ಟಿ ಸುಧಾರಣೆಗಳು ಜನರ ಖರೀದಿ ಶಕ್ತಿ ಹೆಚ್ಚಿಸಲು ನೆರವಾಗಿವೆ ಎಂದು ಹೇಳಿದರು. ಎಂಎಸ್‌ಎಂಇ ಕ್ಷೇತ್ರಕ್ಕೆ ನೀಡಿರುವ ಸಾಲಗಳು ವಾರ್ಷಿಕ 18% ಬೆಳವಣಿಗೆ ಸಾಧಿಸಿರುವುದನ್ನು ಅವರು ಉಲ್ಲೇಖಿಸಿದರು.
ಆತಿಥ್ಯ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಡಿಜಿಟಲ್ ಪಾವತಿಗಳು, ವಿಶೇಷವಾಗಿ ಯುಪಿಐ ಮಹತ್ವದ ಪಾತ್ರ ವಹಿಸುತ್ತಿದೆ. ನಗರ ಬಳಕೆಯ ಕುಂಠಿತತೆಗೆ ಸಂಬಂಧಿಸಿದ ಚಿಂತೆಗಳು ಕೇವಲ “ಆಯ್ದ ಡೇಟಾ ಆಧಾರಿತ ಭ್ರಮೆ” ಎಂದರು.
ಅಮೆರಿಕ ವಿಧಿಸಿರುವ ದಂಡನಾತ್ಮಕ ಸುಂಕಗಳು ಶೀಘ್ರ ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರೂಪಾಯಿ ದೀರ್ಘಾವಧಿಯಲ್ಲಿ ದುರ್ಬಲಗೊಳ್ಳುವ ಸಾಧ್ಯತೆ ಕಡಿಮೆ. ದೊಡ್ಡ ಕಂಪನಿಗಳಿಗೆ ಹೆಚ್ಚುವರಿ ಸಾಲದ ಅಗತ್ಯವಿಲ್ಲ, ಆದ್ದರಿಂದ ಹಣಕಾಸು ನೀತಿಗಳನ್ನು ತಕ್ಕಮಟ್ಟಿಗೆ ರೂಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾರತ್ ಚೇಂಬರ್ ಅಧ್ಯಕ್ಷ ನರೇಶ್ ಪಚಿಸಿಯಾ, ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಬೆಂಬಲ ಸೂಚಿಸಿದರು. ಅಧ್ಯಕ್ಷ ಡಾ. ಎಂ.ಜಿ. ಖೈತಾನ್ ಅವರು ಭಾರತದ ಸ್ಟಾರ್ಟ್‌ಅಪ್‌ಗಳು, ಯುನಿಕಾರ್ನ್‌ಗಳು ಹಾಗೂ ಸಂಶೋಧನಾ ನಿಧಿ ‘ಅನುಸಂಧಾನ’ ಕುರಿತ ಸಾಧನೆಗಳನ್ನು ಪ್ರಸ್ತುತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa