ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆ : ಶಿವನಗೌಡ ನಾಯಕ
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಹುಲ್ ಗಾಂಧಿ ಅವರ ಮತಗಳತನ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಶಿವನಗೌಡ ನಾಯಕ, ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯ ಜನಪ್ರಿಯತೆ ಕುಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಮತದಾರರನ್ನು ಅಳಿಸುವ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡ
ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆ : ಶಿವನಗೌಡ ನಾಯಕ


ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಹುಲ್ ಗಾಂಧಿ ಅವರ ಮತಗಳತನ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಶಿವನಗೌಡ ನಾಯಕ, ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯ ಜನಪ್ರಿಯತೆ ಕುಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಮತದಾರರನ್ನು ಅಳಿಸುವ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಹದೇವಪುರ, ಆಳಂದ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ಬಲವಾಗಿರುವ ಕ್ಷೇತ್ರಗಳಲ್ಲೇ ಮತ ಅಕ್ರಮ ನಡೆದಿದೆ. ಬಿಜೆಪಿ ಅಧಿಕಾರ ಇರುವ ಕಡೆ ವಿರೋಧ ಪಕ್ಷದ ಬಲವಾದ ಪ್ರದೇಶಗಳನ್ನು ಗುರಿ ಮಾಡಿದ್ದಾರೆ.

ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆ ಆಗಿದ್ದು, ಮೋದಿ–ಅಮಿತ್ ಶಾ ಹೇಳಿದ್ದಕ್ಕೆ ಮುದ್ರೆ ಒತ್ತುವ ಕೆಲಸ ಮಾಡುತ್ತಿದೆ. ನಮಗೆ ಆಯೋಗದಿಂದ ನ್ಯಾಯ ಸಿಗುವುದಿಲ್ಲ ಸುಪ್ರೀಂ ಕೋರ್ಟ್‌ಗೆ ಹೋಗುವುದೇ ಸೂಕ್ತ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande