ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್ ಗೆ ಬಿಎಂಎನ್ ತಂಡ ಆಯ್ಕೆ
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬೆಂಗಳೂರು ಮಾಕಳಿಯ ಬಿಎಂಎನ್ ಪಬ್ಲಿಕ್ ಸ್ಕೂಲ್ ಕಬಡ್ಡಿ ತಂಡವು ರಾಜ್ಯಮಟ್ಟದ ಸಿಬಿಎಸ್ಇ ಕಬಡ್ಡಿ ಚಾಂಪಿಯನ್‌ಷಿಪ್ ಗೆದ್ದು ಶಾಲೆಗೆ ಕೀರ್ತಿ ತಂದಿದೆ. ಕರ್ನಾಟಕದ 55 ಸಿಬಿಎಸ್ಇ ಶಾಲೆಗಳ ನಡುವೆ ಕಠಿಣ ಪೈಪೋಟಿ ಎದುರಿಸಿ ತಂಡವು ಟ್ರೋಫಿ ಗೆದ್ದಿದ್ದು, ಶಾಲೆ
Kabbadi


ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ಮಾಕಳಿಯ ಬಿಎಂಎನ್ ಪಬ್ಲಿಕ್ ಸ್ಕೂಲ್ ಕಬಡ್ಡಿ ತಂಡವು ರಾಜ್ಯಮಟ್ಟದ ಸಿಬಿಎಸ್ಇ ಕಬಡ್ಡಿ ಚಾಂಪಿಯನ್‌ಷಿಪ್ ಗೆದ್ದು ಶಾಲೆಗೆ ಕೀರ್ತಿ ತಂದಿದೆ. ಕರ್ನಾಟಕದ 55 ಸಿಬಿಎಸ್ಇ ಶಾಲೆಗಳ ನಡುವೆ ಕಠಿಣ ಪೈಪೋಟಿ ಎದುರಿಸಿ ತಂಡವು ಟ್ರೋಫಿ ಗೆದ್ದಿದ್ದು, ಶಾಲೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಗೆಲುವಿನೊಂದಿಗೆ ಬಿಎಂಎನ್ ತಂಡವು ಸೆಪ್ಟೆಂಬರ್ 29ರಿಂದ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಕಸೌಲಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಲಿರುವ ಸಿಬಿಎಸ್ಇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್ 2025ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಸಜ್ಜಾಗಿದೆ.

ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲೆ ಡಾ. ವನಿತಾ ಲೋಕೇಶ್ ಹಾಗೂ ಸಿಬ್ಬಂದಿ ತಂಡದ ಸಾಧನೆಯನ್ನು ಅಭಿನಂದಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande