ವಿದ್ಯುತ್ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ- ಎನ್ಎಸ್ ಬೋಸರಾಜು
ಮಾನ್ವಿ,, 20 ಜುಲೈ (ಹಿ.ಸ.) : ಆ್ಯಂಕರ್ : ಕಳೆದ ಎರಡು ದಿನಗಳಿಂದ ಕ್ಷೇತ್ರದಾದ್ಯಂತ ಮಳೆಯಾಗಿರುವದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ಅನುಗುಣವಾಗಿ ಅವರ ಬೇಡಿಕೆಯಂತೆ ಗುಣಮಟ್ಟದ ರಸಗೊಬ್ಬರ ಹಂಚಿಕೆ ಮಾಡಬೇಕೆಂದು ಸಚಿವರಾದ ಎನ್. ಎಸ್. ಬೋಸರಾಜು ಅವರು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.
ವಿದ್ಯುತ್ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ- ಎನ್ಎಸ್ ಬೋಸರಾಜು*


ಮಾನ್ವಿ,, 20 ಜುಲೈ (ಹಿ.ಸ.) :

ಆ್ಯಂಕರ್ : ಕಳೆದ ಎರಡು ದಿನಗಳಿಂದ ಕ್ಷೇತ್ರದಾದ್ಯಂತ ಮಳೆಯಾಗಿರುವದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ಅನುಗುಣವಾಗಿ ಅವರ ಬೇಡಿಕೆಯಂತೆ ಗುಣಮಟ್ಟದ ರಸಗೊಬ್ಬರ ಹಂಚಿಕೆ ಮಾಡಬೇಕೆಂದು ಸಚಿವರಾದ ಎನ್. ಎಸ್. ಬೋಸರಾಜು ಅವರು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.

ಮಾನ್ವಿ ಪ್ರವಾಸಿ ಮಂದಿರದಲ್ಲಿ ಮಾನ್ವಿ ಹಾಗೂ ಸಿರವಾರ ತಾಲೂಕಿನ ಕೃಷಿ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯ್ತಿ ರಾಜ್ಯ ಇಲಾಖೆ, ಲ್ಯಾಂಡ್ ಆರ್ಮಿ, ಅಮೃತ-2 ಕುಡಿಯುವ ನೀರಿನ ಯೋಜನೆ ಸೇರಿ ವಿವಿಧ ಇಲಾಖೆ, ಎಜೆಸ್ಸಿಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೃಷಿ ಚಟುವಟಿಕೆ ವಿಷಯದಲ್ಲಿ ಅಧಿಕಾರಿಗಳು ರಸಗೊಬ್ಬರಗಳನ್ನು ಹಂಚಿಕೆ ಮಾಡುವಲ್ಲಿ ವಿಳಂಬ ಮಾಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಜೆಸ್ಕಾಂ ಅಧಿಕಾರಿಗಳು ಬೋರ್ವೆಲ್ ಮೇಲೆ ಅವಲಂಬನೆಯಾದ ರೈತರುಗಳಿಗೆ ಅನುಕೂಲವಾಗುವಂತೆ ಟಿಸಿಗಳು ದುರಸ್ಥಿಯಾದರೆ ಶೀಘ್ರ ಪ್ರತಿಕ್ರಿಯಿಸಿ ಸಮಸ್ಯೆ ಸರಿಪಡಿಸಬೇಕು. ಹಾಗೂ ಮಾನ್ವಿ ಹಾಗೂ ಸಿರವಾರ ಪಟ್ಟಣ ಸೇರಿ ಗ್ರಾಮೀಣ ಭಾಗಗಳಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯವಾದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು.

ಪಿಡಬ್ಲ್ಯೂಡಿ ಸೇರಿ ವಿವಿಧ ಎಜೆನ್ಸಿಗಳಿಂದ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾಮಗಾರಿ ಕೆಲಸಗಳನ್ನು ಗುಣಮಟ್ಟದೊಂದಿಗೆ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ಕಾಮಗಾರಿಗಳ ನಿರ್ವಹಣೆಯಲ್ಲಿ ಕಳಪೆ ಅಥವಾ ಲೋಪ ಕಂಡುಬಂದರೆ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪುರಸಭೆ ಅಧಿಕಾರಿ ಸಿಬ್ಬಂದಿಗಳೊಂದಿಗೆ ಮಾತನಾಡಿ ನೀರಿಗೆ ತೊಂದರೆಯಾಗದಂತೆ ಕೆಲಸ ಮಾಡುವಂತೆ ಸೂಚಿಸಿ. ಪಟ್ಟಣದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ನಿರ್ವಹಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಾರ್ವಜನಿಕರು ಸ್ಪಂದಿಸಬೇಕು ಎಂದು ತಿಳಿದರು.

ರಾಜ್ಯದ ಶೈಕ್ಷಣಿಕ ಪ್ರಗತಿ ಶ್ರೇಣಿ ಪಟ್ಟಿಯಲ್ಲಿ ನಮ್ಮ ಜಿಲ್ಲೆ 30, 31ನೇ ಸ್ಥಾನ ಬರುತ್ತಿದೆ‌ ಕಾರಣ ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿ, ಶಾಲೆಗಳಿಗೆ ಬೇಟಿ ನೀಡಿದ ಕುರಿತು ಡೈರಿ ಮೆಂಟೆನ್ ಮಾಡುವಂತೆ ತಿಳಿಸಿದರು.

ಮಾನ್ವಿ ಹಾಗೂ ಸಿರವಾರ ತಾಲೂಕಿನ ಅತ್ಯಂತ ಮಟ್ಕಾ ದಂದೆ, ಗಾಂಜಾ, ಇಸ್ಪೇಟ್, ಮರಳು ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಚಟುವಟಿಕೆಯಲ್ಲಿ ತೊಡಗಿದವರು ಯಾರಾದರು ರಾಜಕೀಯ ನಾಯಕರ ಹೆಸರನ್ನು ಹೇಳಿದರೇ ಅವರ ಮೇಲೆ ಎರಡು ಪ್ರಕರಣ ದಾಖಲಿಸುವಂತೆ ಎರಡು ತಾಲೂಕುಗಳ ವೃತ್ತ ನಿರೀಕ್ಷಕರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಿರವಾರ ತಹಶೀಲ್ದಾರರಾದ ಅಶೋಕ ಪವಾರ್, ಮಾನ್ವಿ ತಹಶೀಲ್ದಾರ್ ಭೀಮರಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡಮನಿ, ಸಿರವಾರ ತಾಲೂಕ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಸ್ವಾಮಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಬಿಕೆ ಅಮರೇಪ್ಪ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಗಫೂರ ಸಾಬ್, ಕೆ. ಶಾಂತಪ್ಪ, ಪುರಸಭೆ ಅಧ್ಯಕ್ಷರು ವೀರೇಶ, ಉಪಾಧ್ಯಕ್ಷರು, ಪುರಸಭೆ ಸದಸ್ಯರುಗಳು ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande