ನಾಳೆ ನಿವೃತ್ತ ಸರ್ಕಾರಿ ನೌಕರರಿಂದ ಪ್ರಧಾನ ಮಂತ್ರಿಗೆ ಮನವಿ
ಶಿವಮೊಗ್ಗ, 20 ಜುಲೈ (ಹಿ.ಸ.) : ಆ್ಯಂಕರ್ : ಶಿವಮೊಗ್ಗ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘವು ನಿವೃತ್ತ ಸರ್ಕಾರಿ ನೌಕರರ ಹಾಲಿ ಹಾಗೂ ಮುಂದಿನ ಆರ್ಥಿಕ ಸಾಲಭ್ಯವನ್ನು ಯಥಾವತ್ತಾಗಿ ಮುಂದುವರೆಸುಂತೆ ಜು.21 ರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಲಿದ
ನಾಳೆ ನಿವೃತ್ತ ಸರ್ಕಾರಿ ನೌಕರರಿಂದ ಪ್ರಧಾನ ಮಂತ್ರಿಗೆ ಮನವಿ


ಶಿವಮೊಗ್ಗ, 20 ಜುಲೈ (ಹಿ.ಸ.) :

ಆ್ಯಂಕರ್ : ಶಿವಮೊಗ್ಗ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘವು ನಿವೃತ್ತ ಸರ್ಕಾರಿ ನೌಕರರ ಹಾಲಿ ಹಾಗೂ ಮುಂದಿನ ಆರ್ಥಿಕ ಸಾಲಭ್ಯವನ್ನು ಯಥಾವತ್ತಾಗಿ ಮುಂದುವರೆಸುಂತೆ ಜು.21 ರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಲಿದೆ.

ಮಾ.25 ರಂದು ಲೋಕಸಭೆಯಲ್ಲಿ ಸರ್ಕಾರಿ ನಿವೃತ್ತ ನೌಕರರ ಆರ್ಥಿಕ ಬಿಲ್ ಮಂಡಿಸುವ ಸಂದರ್ಭದಲ್ಲಿ 8ನೇ ವೇತನ ಆಯೋಗದ ವರದಿಯನ್ನು ಸರ್ಕಾರಕ್ಕೆ ವೇತನ ಆಯೋಗವು ಸಲ್ಲಿಸಿದ ಮೇಲೆ ದಿ: 01-04-2025 ರ ಹಿಂದೆ ನಿವೃತ್ತಿ ಆಗಿರುವ ಸರ್ಕಾರಿ ನಿವೃತ್ತ ನೌಕರರಿಗೆ ಪಿಂಚಣಿಯನ್ನು ಪರಿಷ್ಕರಿಸುವುದು ಕಷ್ಟ ಸಾಧ್ಯ ಹಾಗೂ ಮುಂದಿನ ತುಟ್ಟಿ ಭತ್ಯೆಯನ್ನು ಮಂಜೂರಾತಿ ನೀಡುವುದು ಕಷ್ಟಕರ ಎಂಬುದಾಗಿ ತಿಳಿಸಿರುತ್ತಾರೆ. ಆದ್ದರಿಂದ ಈ ಕುರಿತು ಪ್ರಧಾನಮಂತ್ರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಮಾಡಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನಿವೃತ್ತ ನೌಕರರು ಆಗಮಿಸಬೇಕೆಂದು ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande