ರಾಯಚೂರು ಮಹಾನಗರ ಪಾಲಿಕೆಯಿಂದ ನಾನಾ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ರಾಯಚೂರು , 20 ಜುಲೈ (ಹಿ.ಸ.) : ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯಿಂದ 2025-26ನೇ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಶೇ.7.25 ಇತರೆ ಹಿಂದುಳಿದ ಜನಾಂಗದ ಮತ್ತು ಶೇ.5 ವಿಕಲಚೇತನರ ವೈಯಕ್ತಿಕ ಸಂಬಂಧಿತ ಕಲ್ಯಾಣ ಕಾರ್ಯಕ್ರಮದಲ್ಲಿ ಪಾಲಿಕೆ ವ್ಯಾಪ್ತಿ ಪ್ರದೇಶದ ಅರ್ಹ ಫಲಾನುಭವಿಗಳಿಂದ ನಾನಾ ಸೌಲಭ್ಯಕ
ರಾಯಚೂರು ಮಹಾನಗರ ಪಾಲಿಕೆಯಿಂದ ನಾನಾ ಸೌಲಭ್ಯಕ್ಕೆ ಅರ್ಜಿ ಆಹ್ವಾನ


ರಾಯಚೂರು , 20 ಜುಲೈ (ಹಿ.ಸ.) :

ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯಿಂದ 2025-26ನೇ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಶೇ.7.25 ಇತರೆ ಹಿಂದುಳಿದ ಜನಾಂಗದ ಮತ್ತು ಶೇ.5 ವಿಕಲಚೇತನರ ವೈಯಕ್ತಿಕ ಸಂಬಂಧಿತ ಕಲ್ಯಾಣ ಕಾರ್ಯಕ್ರಮದಲ್ಲಿ ಪಾಲಿಕೆ ವ್ಯಾಪ್ತಿ ಪ್ರದೇಶದ ಅರ್ಹ ಫಲಾನುಭವಿಗಳಿಂದ ನಾನಾ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಕಾರ್ಯಚಟುವಟಿಕೆಯಡಿ ಶೇ.7.25ರ ಇತರೆ ಹಿಂದುಳಿದ ಜನಾಂಗದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ 1.85 ಲಕ್ಷ ರೂ.ಗಳನ್ನು ಅಂದಾಜು ಮೊತ್ತ ಕಾಯ್ದಿರಿಸಲಾಗಿದೆ. ಶೇ.5ರಡಿ ಪರಿಶಿಷ್ಟ ಜಾತಿಯ ವಿಕಲಚೇತನರ ಮನೆಯ ಮೇಲ್ಮಾಚವಣೆ ದುರಸ್ತಿ ಸಾಮಗ್ರಿಗಳು ಅಥವಾ ಅವಶ್ಯಕ ಸಾಮಗ್ರಿಗಳನ್ನು ಖರೀದಿಸಲು 40000 ರೂ.ಗಳನ್ನು ಒಂದು ಬಾರಿ ಒಟ್ಟು 18 ಅಭ್ಯರ್ಥಿಗಳಿಗೆ ಧನಸಹಾಯ ನೀಡಲಾಗುವುದು.

ದಾಖಲಾತಿಗಳು: ನಿಗದಿತ ನಮೂನೆಯಲ್ಲಿ ಅರ್ಜಿ, ದೃಢೀಕೃತ ಜಾತಿ ಮತ್ತು ಅದಾಯ ಪ್ರಮಾಣ ಪತ್ರ (ಪ್ರಸಕ್ತ ಚಾಲ್ತಿ ಸಾಲು), ದೃಢೀಕೃತ ವಾಸಸ್ಥಳಕ್ಕೆ ಗುರುತಿನ ಚೀಟಿ/ರೇಷನ್ ಕಾರ್ಡ, ಪಾಸ್ ಪೋಟೋ ಅಳತೆಯ ಭಾವ ಚಿತ್ರ-2, ಬ್ಯಾಂಕ್ ಪಾಸ್ ಪುಸ್ತಕ ಹಾಗು ಐ.ಎಫ್.ಎಸ್.ಸಿ ಕೋಡ್‍ನೊಂದಿಗೆ ಬ್ಯಾಂಕ್ ವಿವರ, ವೈದ್ಯರಿಂದ ಪಡೆದ ಗುರುತಿನ ಚೀಟಿ/ಯು.ಡಿ.ಎ. ಕಾರ್ಡ, ಮನೆಯ ಮೇಲ್ಮಾವಣೆ ಛಾಯಾ ಚಿತ್ರ./ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಜಾಗದ ಛಾಯಾಚಿತ್ರ, ಮೊಬೈಲ್ ನಂಬರ್‍ನೊಂದಿಗೆ ಜುಲೈ 31ರ ಸಂಜೆ 5ಗಂಟೆಯೊಳಗಾಗಿ ಅಗತ್ಯ ದಾಖಲಾತಿಗಳು ಕಡ್ಡಾಯವಾಗಿ ನಿಗದಿತ ದಿನಾಂಕ ಒಳಗಡೆ ಸಲ್ಲಿಸಬಹುದಾಗಿದೆ.

ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಲ್ಲದೆ ಸರಿಯಾದ ದಾಖಲಾತಿಗಳು ಸಲ್ಲಿಸದೇ ಇದ್ದ ಪಕ್ಷದಲ್ಲಿ ತಮಗೆ ಯಾವುದೇ ಹಿಂಬರಹ ಕಳುಹಿಸದೇ ನೇರವಾಗಿ ವಿಭಾಗದ ಸಿಬ್ಬಂದಿಯವರು ತಿರಸ್ಕøತ ಮಾಡಲಾಗುವುದು ಎಂದು ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande