ನವದೆಹಲಿ, 20 ಜುಲೈ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಜುಲೈ 23 ರಿಂದ 26 ರವರೆಗೆ ಬ್ರಿಟನ್ (ಯುಕೆ) ಮತ್ತು ಮಾಲ್ಡೀವ್ಸ್ ರಾಷ್ಟ್ರಗಳಿಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಭೇಟಿಯು ಭಾರತದ ವಿದೇಶಾಂಗ ನೀತಿಯ ಮಹತ್ವದ ಹಂತವಾಗಿ ಪರಿಗಣಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಯುಕೆ ಭೇಟಿ
ಜುಲೈ 23-24 ರಂದು ಪ್ರಧಾನಿ ಮೋದಿ ಅವರು ಬ್ರಿಟನ್ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ಅವರ ಆಹ್ವಾನಕ್ಕೆ ಸ್ಪಂದನೆವಾಗಿ ಲಂಡನ್‌ಗೆ ತೆರಳಲಿದ್ದಾರೆ. ವ್ಯಾಪಾರ, ರಕ್ಷಣೆ, ತಂತ್ರಜ್ಞಾನ, ಹವಾಮಾನ ಬದಲಾವಣೆ, ಆರೋಗ್ಯ ಮತ್ತು ಶಿಕ್ಷಣ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಇದೇ ವೇಳೆ ಬ್ರಿಟನ್ ರಾಜ ಚಾರ್ಲ್ಸ್ III ಅವರನ್ನು ಕೂಡ ಸೌಜನ್ಯ ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ, ಭಾರತ-ಬ್ರಿಟನ್ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಪ್ರಗತಿಯ ಪರಿಶೀಲನೆ ನಡೆಯಲಿದೆ.
ಮಾಲ್ಡೀವ್ಸ್ ಭೇಟಿ
ಜುಲೈ 25-26ರಂದು ದ್ವಿತೀಯ ಹಂತದಲ್ಲಿ, ಮೋದಿ ಅವರು ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಅವರ ಆಹ್ವಾನದ ಮೇರೆಗೆ ಮಾಲೆ ನಗರಕ್ಕೆ ಭೇಟಿ ನೀಡಲಿದ್ದಾರೆ. ಜುಲೈ 26 ರಂದು ಮಾಲ್ಡೀವ್ಸ್ ಸ್ವಾತಂತ್ರ್ಯದ 60ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ‘ಗೌರವ ಅತಿಥಿ’ಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಆರ್ಥಿಕ ಮತ್ತು ಕಡಲ ಭದ್ರತಾ ಪಾಲುದಾರಿಕೆ ಸಂಬಂಧಿ ಭಾರತದ ಜಂಟಿ ದೃಷ್ಟಿಕೋನದ ಪ್ರಗತಿ ಪರಿಶೀಲನೆ ನಡೆಯಲಿದೆ.
ಮಾಲ್ಡೀವ್ಸ್‌ಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವುದು ಡಾ. ಮುಯಿಝು ಅಧಿಕಾರಕ್ಕೆ ಬಂದ ಬಳಿಕದ ಮೊದಲ ಉನ್ನತ ಮಟ್ಟದ ಭೇಟಿಯಾಗಿದ್ದು, ಭಾರತದ 'ನೆರೆಹೊರೆ ಮೊದಲು' ನೀತಿ ಮತ್ತು 'ವಿಷನ್ ಓಷನ್' ದೃಷ್ಟಿಕೋನದ ಭಾಗವಾಗಿದೆ.
ಈ ಭೇಟಿಗಳು ಭಾರತ-ಯುಕೆ ಮತ್ತು ಭಾರತ-ಮಾಲ್ಡೀವ್ಸ್ ನಡುವಿನ ದ್ವಿಪಕ್ಷೀಯ ಸಹಕಾರ, ಭದ್ರತೆ, ಮತ್ತು ವಾಣಿಜ್ಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ತರುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa