ನವದೆಹಲಿ, 20 ಜುಲೈ (ಹಿ.ಸ.) :
ಆ್ಯಂಕರ್ : ನಾಳೆಯಿಂದ ಅರಂಭವಾಗುವ ಸಂಸತ್ತಿನ ಮಳೆಗಾಲ ಅಧಿವೇಶನಕ್ಕೂ ಮುನ್ನ ಇಂದು ನಡೆದ ಸರ್ವಪಕ್ಷ ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ , ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ್ ಬಗ್ಗೆ ಪ್ರಧಾನಿ ಸಂಸತ್ತಿನಲ್ಲಿ ಮಾತಾಡಬೇಕು. ಅಮೆರಿಕ ಅಧ್ಯಕ್ಷರು ಭಾರತ ಸೇನೆ ಬಗ್ಗೆ ಮಾಡಿದ ಟೀಕೆಗಳಿಗೆ ಪ್ರಧಾನಿಯವರಿಂದ ಸ್ಪಷ್ಟನೆ ಬೇಕು, ಎಂದು ಒತ್ತಾಯಿಸಲಾಗಿದೆ ಎಂದರು.
ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು, ಆಪರೇಷನ್ ಸಿಂಧೂರ್, ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಬೇಕು. ಸುಂಕ ಕುರಿತು ಟ್ರಂಪ್ ಹೇಳಿಕೆಗೂ ಪ್ರತಿಕ್ರಿಯೆ ಬೇಕು, ಎಂದು ಒತ್ತಾಯಿಸಿದರು.
ಬಿಜೆಡಿ ಸಂಸದ ಸಸ್ಮಿತ್ ಪಾತ್ರ ಒಡಿಶಾ ಹಾಗೂ ಬಂಡವಾಳ ಮೂಲಭೂತ ಸೌಲಭ್ಯಗಳ ವಿಚಾರಗಳು ಹಾಗೂ ವಿಶೇಷ ವರ್ಗದ ಸ್ಥಾನಮಾನ, ಕಲ್ಲಿದ್ದಲು ರಾಯಲ್ಟಿ, ಮಹಾನದಿ ವಿವಾದ ಸೇರಿದಂತೆ ರಾಜ್ಯದ ಹಲವು ಬೇಡಿಕೆಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa