ಕೊಪ್ಪಳ, 20 ಜುಲೈ (ಹಿ.ಸ.) :
ಆ್ಯಂಕರ್ : ಕೊಪ್ಪಳ ತಾಲ್ಲೂಕಿನ ಮಂಗಳಾಪುರ ಗ್ರಾಮದ ಸಾರ್ವಜನಿಕ ರುದ್ರಭೂಮಿಗಾಗಿ ಜಮೀನು ಕಾಯ್ದಿರಿಸಿ, ಪಹಣಿ ಕಾಲಂನಲ್ಲಿ ನಮೂದಿಸಲು ಜಿಲ್ಲಾಧಿಕಾರಿಗಳು ಆದೇಶಿದ್ದಾರೆ.
ಕೊಪ್ಪಳ ತಾಲ್ಲೂಕಿನ ಮಂಗಳಾಪುರ ಗ್ರಾಮಸ್ಥರಿಗೆ ಶವಸಂಸ್ಕಾರ ಮಾಡಲು ಜಾಗ ಇಲ್ಲದೇ ಇರುವದರಿಂದ ಮಂಗಳಾಪುರ ಗ್ರಾಮದಲ್ಲಿ ಸಭೆ ನಡೆಸಿ ರುದ್ರಭೂಮಿಗಾಗಿ ಜಮೀನನ್ನು ಖರೀದಿ ನೀಡಲು ಸಾಕಷ್ಟು ಬಾರಿ ಮನವಿ ಮಾಡಿದರೂ ಗ್ರಾಮದ ಯಾವೊಬ್ಬ ರೈತರು ಸಹ ಜಮೀನನ್ನು ಖರೀದಿ ನೀಡಲು ಮುಂದೆ ಬಂದಿರುವುದಿಲ್ಲ.
ಪ್ರತಿಯೊಂದು ಗ್ರಾಮದಲ್ಲಿ ಸಾರ್ವಜನಿಕ ರುದ್ರಭೂಮಿಗಾಗಿ ಜಮೀನು ನೀಡುವುದು ಅತ್ಯವಶ್ಯಕ ಮತ್ತು ಜರೂರು ಇರುವುದರಿಂದ ಜಿಲ್ಲಾಧಿಕಾರಿಗಳು ಕೊಪ್ಪಳ ಇವರು ತಹಶೀಲ್ದಾರರಿಂದ ಪುನಃ ವರದಿಯನ್ನು ಪಡೆದು, ಈ ವರದಿಯಲ್ಲಿ ಮಂಗಳಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಕೊಳೂರು ಸಿಮಾದ ಪರಂಪೆÇೀಕ್ ಸರಕಾರಿ ಸ.ನಂ 48/*/* ಕ್ಷೇತ್ರ 01-05 ಜಮೀನು ಲಭ್ಯವಿದ್ದು, ಈ ಜಮೀನು ಮಂಗಳಾಪುರ ಗ್ರಾಮದಿಂದ ಸುಮಾರು 1 ಕಿ.ಮೀ ಅಂತರದಲ್ಲಿದ್ದು, ರಸ್ತೆ ಸಂಪರ್ಕ ಇರುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಆದ್ದರಿಂದ ಈ ವಿಸ್ತೀರ್ಣದಲ್ಲಿ 00-20 ಗುಂಟೆ ಜಮೀನನ್ನು ಕಾಯ್ದಿರಿಸಲು ಯೋಗ್ಯವಿರುತ್ತದೆ ಎಂದು ತಹಶಿಲ್ದಾರರು ವರದಿಯಲ್ಲಿ ತಿಳಿಸಿರುತ್ತಾರೆ.
ತಹಶೀಲ್ದಾರರ ವರದಿ ಆಧಾರದ ಮೇಲೆ ಕೊಪ್ಪಳ ತಾಲ್ಲೂಕು ಕೊಪ್ಪಳ ಹೋಬಳಿಯ ಕೊಳೂರು ಗ್ರಾಮದ ಸರಕಾರಿ ಪರಂಪೆÇೀಕ್ ಸರ್ವೇ ನಂಬರ್ 48/*/* ವಿಸ್ತೀರ್ಣ 01-05 ಎಕರೆ ಜಮೀನಿನ ಪೈಕಿ 00-20 ಗುಂಟೆ ಜಮೀನನ್ನು ಮಂಗಳಾಪುರ ಗ್ರಾಮದ ಸಾರ್ವಜನಿಕ ರುದ್ರಭೂಮಿಗಾಗಿ, ಸ್ಮಶಾನ ಉದ್ದೇಶಕ್ಕಾಗಿ ಕಾಯ್ದಿರಿಸಿ, ಕಾಯ್ದಿರಿಸಿದ ಈ ಜಮೀನನ್ನು ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸುವುದು ಹಾಗೂ ಹಸ್ತಾಂತರಿಸಲಾದ ಭೂಮಿಯನ್ನು ನರೇಗಾ ಹಾಗೂ ಇತರೆ ಯೋಜನೆಯಡಿಯಲ್ಲಿ ಅನುದಾನವನ್ನು ಬಳಸಿಕೊಂಡು ಸಂಬಂಧಪಟ್ಟ ಪಂಚಾಯತಿಗಳು ಆವರಣ ಗೋಡೆ ಅಥವಾ ತಂತಿಬೇಲಿ ನಿರ್ಮಿಸಬೇಕು. ಸ್ಮಶಾನಕ್ಕೆ ಅವಶ್ಯಕ ನೀರಿನ ವ್ಯವಸ್ಥೆ, ಗಿಡಮರಗಳನ್ನು ಬೆಳೆಸಲು ಹಾಗೂ ಯಾವುದೇ ಅತೀಕ್ರಮಣಯಾಗದಂತೆ ತಡೆಗಟ್ಟುವ ಷರತ್ತಿಗೊಳಪಟ್ಟು ಪಹಣಿ ಕಾಲಂ ನಂಬರ 11ರಲ್ಲಿ ನಮೂದಿಸಲು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ಆದೇಶಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್