ಚಂಡೀಗಡ, 20 ಜುಲೈ (ಹಿ.ಸ.) :
ಆ್ಯಂಕರ್ : ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್ 155ನೇ ಬೆಟಾಲಿಯನ್‌ದ ಸೈನಿಕರು ಪಾಕಿಸ್ತಾನಿ ನುಸುಳುಕೋರನನ್ನು ಬಂಧಿಸಿದ್ದಾರೆ.
ಗಡಿಯ ಕೆಎಂಎಸ್ ವಾಲಾ ಬಿಒಪಿ ಬಳಿ ಗಡಿ ಕಂಬ ಸಂಖ್ಯೆ 190/4ನಲ್ಲಿ ಪಾಕಿಸ್ತಾನದ ಖಾನೇವಾಲ್ ಜಿಲ್ಲೆಯ ಮಿಯಾನ್ ಛಾನು ಗ್ರಾಮಸ್ಥ ಮುಜಾಮಿಲ್ ಹುಸೇನ್ (24) ಎಂಬಾತನು ಭಾರತದ ಗಡಿಯೊಳಕ್ಕೆ ಅಕ್ರಮವಾಗಿ ನುಗ್ಗಲು ಯತ್ನಿಸಿದ್ದ. ಬಿಎಸ್‌ಎಫ್ ಎಚ್ಚರಿಕೆ ನೀಡಿದ್ದರೂ ಸುಮಾರು 80 ಮೀಟರ್ ಒಳನುಗ್ಗಿದ್ದವನನ್ನು ಬಿಎಸ್‌ಎಫ್ ಜವಾನರು ಹಿಡಿದಿದ್ದಾರೆ.
ವಿಚಾರಣೆಯಲ್ಲಿ ಆತನ ಬಳಿ ಪಾಕಿಸ್ತಾನಿ ಕರೆನ್ಸಿ 20 ರೂಪಾಯಿಯನ್ನು ಹೊರತುಪಡಿಸಿ ಯಾವುದೇ ಆಯುಧ ಅಥವಾ ಶಂಕಿತ ವಸ್ತುಗಳು ಪತ್ತೆಯಾಗಿಲ್ಲ. ಪ್ರಾಥಮಿಕ ವಿಚಾರಣೆಗೆ ಆತನು ಬಿಎಸ್‌ಎಫ್ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅವನು ತಪ್ಪಾಗಿ ಗಡಿ ದಾಟಿದನೋ ಅಥವಾ ಇದಕ್ಕೆ ಹಿಂದೆ ಇತರ ಉದ್ದೇಶವಿದೆಯೋ ಎಂಬುದನ್ನು ತಿಳಿಯಲು ತನಿಖೆ ಪ್ರಾರಂಭವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa