ಮೈಸೂರು, 20 ಜುಲೈ (ಹಿ.ಸ.) :
ಆ್ಯಂಕರ್ : ನಾನು ದೆಹಲಿಯಲ್ಲಿ ವಕೀಲರೊಬ್ಬರನ್ನು ಭೇಟಿಯಾಗಬೇಕಿತ್ತು. ಹಾಗಾಗಿ ನಿನ್ನೆ ನಡೆದ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿ ಹೊರಟೆ. ಈ ಕುರಿತು ಮುಖ್ಯಮಂತ್ರಿಗೆ ತಿಳಿಸಿದ್ದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಇಲ್ಲಿಂದ ದೆಹಲಿಗೆ 7:30ಕ್ಕೆ ತಲುಪಿ, 9ಕ್ಕೆ ವಾಪಸ್ ಬಂದಿದ್ದೇನೆ. ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದೆ, ಮುಗಿಸಿಕೊಂಡು ಬಂದೆ. ಅದು ಬಿಟ್ಟರೆ ಯಾವ ರಾಜಕಾರಣವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ನಿನ್ನೆ ನನ್ನ ಬೆಂಗಾವಲು ವಾಹನ ಪಲ್ಟಿಯಾಯಿತು. ಆದರೆ, ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ದೊಡ್ಡ ಅನಾಹುತ ಆಗಲಿಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರಿಗೆ ಅವಮಾನ ಆಯ್ತು ಎಂದು ಬಿಜೆಪಿಯವರು ಹೇಳಿದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಯಾವತ್ತೂ ನನ್ನ ಮೇಲೆ ಪ್ರೀತಿ ಜಾಸ್ತಿ ಎಂದು ವ್ಯಂಗ್ಯವಾಗಿ ಉತ್ತರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa