ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ರಾಯಚೂರು, 20 ಜುಲೈ (ಹಿ.ಸ.) : ಆ್ಯಂಕರ್ : ತಾಲೂಕು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಪಿಯುಸಿ ಮತ್ತು ಪಿ.ಯು.ಸಿ ಸಮಾನಾಂತರ ಕೋರ್ಸು ಮತ್ತು ಪದವಿ ಮಟ್ಟದ ಕೋರ್ಸುಗಳ ವಿದ್ಯಾರ್ಥಿಗಳಿಂದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ


ರಾಯಚೂರು, 20 ಜುಲೈ (ಹಿ.ಸ.) :

ಆ್ಯಂಕರ್ : ತಾಲೂಕು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಪಿಯುಸಿ ಮತ್ತು ಪಿ.ಯು.ಸಿ ಸಮಾನಾಂತರ ಕೋರ್ಸು ಮತ್ತು ಪದವಿ ಮಟ್ಟದ ಕೋರ್ಸುಗಳ ವಿದ್ಯಾರ್ಥಿಗಳಿಂದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅಲ್ಪಸಂಖ್ಯಾತರ ಮೆಟ್ರಕ್ ನಂತರ ಬಾಲಕರ ವಸತಿ ನಿಲಯ (ಉನ್ನತ್ತಿಕರಿಸಿದ) ಬೋಳಮಾನದೊಡ್ಡಿ ರಸ್ತೆ, ರಾಯಚೂರು, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ವಿವೇಕನಂದ ಲೇಓಟ್ ಲಯನ್ಸ್ ಶಾಲೆ ಹತ್ತಿರ ರಾಯಚೂರು (ಜಹಿರಬಾದ್), ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಆಶಾಪೂರುರಸ್ತೆ ರಾಯಚೂರು, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಕೇಂದ್ರಿಯಾ ವಿದ್ಯಾಲಯ ಹತ್ತಿರ ಆಶಾಪೂರು ರಸ್ತೆ ರಾಯಚೂರು, ಅಲ್ಪಸಂಖ್ಯಾತರ ಮೆಟ್ರಕ್ ನಂತರ ಬಾಲಕರ ವಸತಿ ನಿಲಯ ಬೈಪಾಸ್‍ರೋಡ್ ಯರಮರಸ್ ರಾಯಚೂರು, ಅಲ್ಪಸಂಖ್ಯಾತರ ಮೆಟ್ರಕ್ ನಂತರ ಬಾಲಕರ ವಸತಿ ನಿಲಯ ಕೃಷಿ ವಿದ್ಯಾಲಯ ಲಿಂಗಸೂಗುರು ರೋಡ್ ರಾಯಚೂರು, ಅಲ್ಪಸಂಖ್ಯಾತರ ಮೆಟ್ರಕ್ ನಂತರ ಬಾಲಕರ ವಸತಿ ನಿಲಯ (ವೃತ್ತಿಪರ) ಯರಮರಸ್ ರಾಯಚೂರು, ಅಲ್ಪಸಂಖ್ಯಾತರ ಮೆಟ್ರಕ್ ನಂತರ ಬಾಲಕೀಯರ ವಸತಿ ನಿಲಯ ಕೃಷಿ ವಿದ್ಯಾಲಯ ಲಿಂಗಸೂಗುರು ರೋಡ್ ರಾಯಚೂರು, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ದೇವದುರ್ಗ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ದೇವದುರ್ಗದ ವಸತಿನಿಲಯಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆಗಳು: ವಿದ್ಯಾರ್ಥಿಗಳು ಸರ್ಕಾರಿಅಥವಾಅಂಗೀಕೃತ ಶಾಲಾ/ಕಾಲೇಜುಗಳಲ್ಲಿ ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರದ ತರಗತಿಗಳಲ್ಲಿ ಆಧ್ಯಾಯನ ಮಾಡುತ್ತಿರಬೇಕು. ವಸತಿ ನಿಲಯಗಳಲ್ಲಿ ಶೇ.75 ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶೇ.25 ಇತರೆ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.

ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನವು 2.50 ಲಕ್ಷ ರೂ.ಗಳಿಗಿಂತ ಮೀರಿರಬಾರದು. ಹಿಂದುವಳಿದ ವರ್ಗಗಳ 2ಎ, 3ಎ, 3ಬಿ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ 2.50 ಲಕ್ಷ ರೂ.ಗಳಿಗಿಂತ ಮೀರಿರಬಾರದು. ಪ್ರವರ್ಗ-1, ಕುಟುಂಬದ ವಾರ್ಷಿಕ ವರಮಾನ 1.00 ಲಕ್ಷ ರೂ.ಗಳಿಗಿಂತ ಮೀರಿರಬಾರದು. ಅರ್ಜಿಯೊಂದಿಗೆ ತಹಸೀಲ್ದಾರರು ನೀಡಿದ ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಅಂಕಪಟ್ಟಿ ಹಾಗೂ ವಿದ್ಯಾರ್ಥಿಯ ಪಾಸ್‍ಫೋಟೋ ಅಳತೆಯ ಇತ್ತೀಚಿನ 4 ಭಾವಚಿತ್ರಗಳೊಂದಿಗೆ ಮತ್ತು ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು.

ಆಸಕ್ತ ಮೆಟ್ರಿಕ್ ನಂತರದ ಬಾಲಕರ ಅಥವಾ ಬಾಲಕಿಯರ ವಸತಿ ನಿಲಯಗಳ ಪ್ರವೇಶಾತಿಗಾಗಿ ಎಸ್‍ಹೆಚ್‍ಪಿ ವೆಬ್‍ಸೈಟ್ ವಿಳಾಸ: https://shp.karnataka.gov.in ನಲ್ಲಿ ಆಗಸ್ಟ್ 02ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕದ ನಂತರ ಸ್ವೀಕೃತವಾಗುವ ಅರ್ಜಿ ಅಥವಾ ಕೋರಿಕೆಗಳನ್ನು ಪರಿಗಣಿಸಲು ಅವಕಾಶವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಯಚೂರು ಅಥವಾ ತಾಲ್ಲೂಕು ಅಲ್ಪಸಂಖ್ಯಾತರ ಅರಿವು ಮೂಡಿಸುವ ಮಾಹಿತಿ ಕೇಂದ್ರ ಹಾಗೂ ಹತ್ತಿರದ ವಸತಿ ನಿಲಯಗಳಿಗೆ ಭೇಟಿ ನೀಡಿ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರಕಲ್ಯಾಣ ಇಲಾಖೆ ರಾಯಚೂರು ಉಪ ವಿಭಾಗದ ತಾಲ್ಲೂಕು ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande