ಗದಗ, 19 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವಾರು ರೈತರು ಕೆಂಪು ಮಣ್ಣಿನಲ್ಲಿ ಗೊಡಂಬಿ ಬೆಳೆಯನ್ನು ಯಶಸ್ವಿಯಾಗಿ ಬೆಳೆದು ಉತ್ತಮ ಇಳುವರಿಯನ್ನು ಪಡೆಯುತ್ತಿದ್ದು, ಇಲಾಖೆಯಿಂದ ಪ್ರಸಕ್ತ ಸಾಲಿಗೆ ಜಿಲ್ಲೆಯ ರೈತರಿಗೆ ಗೊಡಂಬಿ ಬೆಳೆಯನ್ನು ಬೆಳೆಯಲು ಗೇರು ಹಾಗೂ ಕೋಕೊ ನಿರ್ದೇಶನಾಲಯ, ಕೊಚ್ಚಿನ್ ರವರ ಪ್ರಾಯೊಜಕತ್ವದಲ್ಲಿ ಸಹಾಯಧನ ಸೌಲಭ್ಯವನ್ನು ನೀಡಲಾಗುತ್ತಿದೆ.
ಆಸಕ್ತ ರೈತರಿಗೆ ನಿರ್ದೇಶನಾಲಯದ ವತಿಯಿಂದ ಉಚಿತವಾಗಿ ಗೋಡಂಬಿ ಗಿಡಗಳನ್ನು ವಿತರಸಲಾಗುವುದು. ಪ್ರತಿ ಹೆಕ್ಟೇರ್‌ಗೆ ರೂ. 30000/- ಗಳ ಸಹಾಯಧನ ಲಭ್ಯವಿದ್ದು, ಆಸಕ್ತ ರೈತ ಬಾಂಧವರು ನಿಗದಿತ ನಮೂನೆಯ ಅರ್ಜಿ, ಪಹಣಿ ಪತ್ರಿಕೆ (ಖಖಿಅ), ಆಧಾರ ಕಾರ್ಡ, ಪಾಸ್‌ಪೊರ್ಟ ಅಳತೆಯ ಫೊಟೊ & ಬ್ಯಾಂಕ್ ಪಾಸಬುಕ್ ದಾಖಲಾತಿಗಳನ್ನು ಸಮೀಪದ ತಾಲ್ಲೂಕು ತೋಟಗಾರಿಕೆ ಕಚೇರಿಗೆೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಗದಗ/ರೋಣ/ಮುಂಡರಗಿ/ಶಿರಹಟ್ಟಿ ಕಚೇರಿ, ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / Lalita MP